Breaking News
recent

ಈ ವಾರ ತೆರೆಗೆ ಅಪ್ಪಳಿಸಲಿರುವ ಮಾಡರ್ನ್ 'ಮುಮ್ತಾಜ್'

ಚೊಚ್ಚಲ ನಿರ್ದೇಶಕ ರಾಘವ ಮುರಳಿ ಅವರು ಸ್ವತಂತ್ರ್ಯವಾಗಿ ಆಕ್ಷನ್-ಕಟ್ ಹೇಳುತ್ತಿರುವ 'ಮುಮ್ತಾಜ್' ಚಿತ್ರ ಇದೇ ವಾರದಲ್ಲಿ ಭರ್ಜರಿಯಾಗಿ ತೆರೆ ಕಾಣುತ್ತಿದೆ.
ಈ ವಾರ ತೆರೆಗೆ ಅಪ್ಪಳಿಸಲಿರುವ ಮಾಡರ್ನ್ 'ಮುಮ್ತಾಜ್'

ಹಿರಿಯ ನಿರ್ದೇಶಕ ದಿನೇಶ್ ಬಾಬು ಬಳಿ ಸಹಾಯಕರಾಗಿ ದುಡಿದ ಅನುಭವವಿರುವ ನಿರ್ದೇಶಕ ರಾಘವ ಮುರಳಿ ಅವರು ಬೊಂಬಾಟ್ ರೊಮ್ಯಾಂಟಿಕ್ ಕಥೆಯನ್ನಾಧರಿಸಿದ ಸಿನಿಮಾವನನ್ನು ಯುವಜನತೆಗಾಗಿ ಹೊತ್ತು ತರುತ್ತಿದ್ದಾರೆ.

ಚಿತ್ರದ ಶೀರ್ಷಿಕೆ ಹೇಳುವಂತೆ ಪಕ್ಕಾ ರೊಮ್ಯಾಂಟಿಕ್ ಹಾಗು ಸುಂದರ ಪ್ರೇಮ ಕಥೆಯನ್ನಾಧರಿಸಿದ 'ಮುಮ್ತಾಜ್' ಚಿತ್ರದಲ್ಲಿ, 'ನವಗ್ರಹ' ಸಿನಿಮಾದಲ್ಲಿ ಕಣ್ ಕಣ್ಣ ಸಲಿಗೆ ಅಂತ ಡ್ಯುಯೆಟ್ ಹಾಡಿದ್ದ ಧರ್ಮ ಕೀರ್ತಿರಾಜ್ ಹಾಗೂ ಶರ್ಮಿಳಾ ಮಾಂಡ್ರೆ ರೊಮ್ಯಾನ್ಸ್ ಮಾಡಿದ್ದಾರೆ.[ಪ್ರೀತಿಯ ಷಹಜಹಾನ್ ನ 'ಮುಮ್ತಾಜ್' ಟ್ರೈಲರ್ ಬಿಡುಗಡೆ ]

ಇನ್ನು ಚಿತ್ರದ ಮತ್ತೊಂದು ವಿಶೇಷ ಏನಪ್ಪಾ ಅಂದ್ರೆ, ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು 'ಮುಮ್ತಾಜ್' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಇಷ್ಟು ದಿನ ಫೈಟ್ ಮಾಡಲು ಲಾಂಗ್ ಹಿಡಿಯುತ್ತಿದ್ದೆ. ಆದ್ರೆ ಇದೀಗ ಪ್ರೇಮಿಗಳಿಗೋಸ್ಕರ ಲಾಂಗ್ ಕೈಗೆ ತೆಗೆದುಕೊಳ್ಳುತ್ತಿದ್ದೇನೆ ಅಂತ ಸಕತ್ ಜಬರ್ದಸ್ತ್ ಡೈಲಾಗ್ ಹೊಡೆಯುತ್ತ, ಚಿತ್ರದ ನಾಯಕನ್ನು 'ಏ ಕ್ಯಾಡ್ ಬರೀಸ್' ಅಂತ ಕರೆಯುತ್ತಾ ಗ್ರ್ಯಾಂಡ್ ಎಂಟ್ರಿ ಪಡೆದುಕೊಳ್ಳುತ್ತಾರಂತೆ.

ಸಾಮಾನ್ಯವಾಗಿ ಪ್ರೀತಿ-ಪ್ರೇಮದ ಕಥೆಯಲ್ಲಿ ಒಬ್ಬ ವಿಲನ್ ಇದ್ದೇ ಇರುತ್ತಾನೆ. ಆದ್ರೆ 'ಮುಮ್ತಾಜ್' ನಲ್ಲಿ ವಿಲನ್ ಪ್ರೀತಿ ರೂಪದಲ್ಲಿ ಬರೋದು ಈ ಚಿತ್ರದ ವಿಶೇಷ.['ಕ್ಯಾಡ್ಬರಿ' ಜೋಡಿಗೆ 'ನವಗ್ರಹ' ದರ್ಶನ್ ಕೃಪೆ]

ಸತತ ಮೂರು ವರ್ಷಗಳ ನಂತರ ಧರ್ಮ ಕೀರ್ತಿ ರಾಜ್ ನಾಯಕ ಪಟ್ಟ ಹೊತ್ತುಕೊಂಡರೆ, ಸೈಕಲ್ ಗ್ಯಾಪ್ ನಲ್ಲಿ ಬಿಡುವು ಮಾಡಿಕೊಂಡು ನಟಿ ಶರ್ಮಿಳಾ ಮಾಂಡ್ರೆ ಅವರು 'ಮುಮ್ತಾಜ್' ಆಗಿ ಮಿಂಚಿದ್ದಾರೆ.

ವಾಣಿಜ್ಯ ಮಂಡಳಿಯ ಪದಾದಿಕಾರಿ ಉಮೇಶ್ ಬಣಕಾರ್ ಅವರು ಲೆಕ್ಚರರ್ ಪಾತ್ರದಲ್ಲಿ ಮಿಂಚಿದ್ದು, ನಾಯಕನಿಗೆ ಪ್ರೀತಿ-ಪ್ರೇಮದ ಬಗ್ಗೆ ಹಿತವಚನ ಹೇಳುತ್ತಾರೆ. 19 ವರ್ಷದ ಯುವ ಪ್ರತಿಭೆ ಕಾಮರ್ಸ್ ವಿದ್ಯಾರ್ಥಿ ಪ್ರವೀಣ್ ಅವರು ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.[ತಾಜ್ ಮಹಲ್ ಮುಂಭಾಗದಲ್ಲಿ 'ಮುಮ್ತಾಜ್' ಮುಕ್ತಾಯ]

ನಿರ್ಮಾಪಕ ನರಸಿಂಹ ಮೂರ್ತಿ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಟ್ರೈಲರ್ ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಈಗಾಗಲೇ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ಟ್ರೈಲರ್ ವೀಕ್ಷಿಸಿದ್ದಾರೆ. ಒಟ್ನಲ್ಲಿ ಇಷ್ಟೇಲ್ಲಾ ವಿಶೇಷತೆಗಳನ್ನು ಇಟ್ಟುಕೊಂಡಿರುವ 'ಮುಮ್ತಾಜ್' ಶುಕ್ರವಾರದಂದು ಸುಮಾರು 150 ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.