Breaking News
recent

ಉಪೇಂದ್ರ 'ಉಪ್ಪಿ-ಟ್ಟು' ಗೆ ವಿದೇಶದಲ್ಲಿ ಭಾರಿ ಪ್ರಶಂಸೆ

ತುಂಬಾ ಗ್ಯಾಪ್ ನ ನಂತರ ಸ್ಯಾಂಡಲ್ ವುಡ್ ನ ರಿಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶಕರ ಪಟ್ಟ ಹೊತ್ತುಕೊಂಡಿದ್ದು, 'ಉಪ್ಪಿ 2' ಚಿತ್ರವನ್ನು ಪ್ರೇಕ್ಷಕರಿಗೆ ಹಾಗೂ ತಮ್ಮ ಅಭಿಮಾನಿಗಳಿಗೆ ಗಿಫ್ಟಾಗಿ ನೀಡಿದರು.

ಉಪೇಂದ್ರ 'ಉಪ್ಪಿ-ಟ್ಟು' ಗೆ ವಿದೇಶದಲ್ಲಿ ಭಾರಿ ಪ್ರಶಂಸೆ

ಉಪೇಂದ್ರ ಅವರ ಹೋಮ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದ 'ಉಪ್ಪಿ 2' ಕರ್ನಾಟಕದಲ್ಲಿ ಮಾತ್ರವಲ್ಲದೇ ಅಮೇರಿಕಾದಲ್ಲೂ ಸಖತ್ ಕಮಾಲ್ ಸೃಷ್ಟಿಸಿತ್ತು. ಇದೀಗ ವಿದೇಶಗಳಲ್ಲೂ ಉಪೇಂದ್ರ ಅವರ 'ಉಪ್ಪಿ-ಟ್ಟು' ಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.[ಛೆ! ಉಪೇಂದ್ರ ಅಮೇರಿಕದಲ್ಲಿ ಹೀಗೆಲ್ಲಾ ಮಾಡಬಹುದೇ?]
ಪ್ರಚಾರದ ಸಲುವಾಗಿ ರಿಯಲ್ ಸ್ಟಾರ್ ಉಪೇಂದ್ರ ಅವರು ಅಮೇರಿಕಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಕನ್ನಡಿಗರ ಹಾಗೂ ಜನರ ಪ್ರೀತಿ ವಿಶ್ವಾಸಕ್ಕೆ ದಂಗಾಗಿದ್ದಾರೆ. ಅವರು ವಿದೇಶದಲ್ಲಿ ವಿದೇಶಿಕನ್ನಡಿಗರೊಂದಿಗೆ ನಡೆಸಿದ ಸಂವಾದವನ್ನು ನೋಡಲು ಈ ವಿಡಿಯೋ ನೋಡಿ..
ಇನ್ನು ಅಮೇರಿಕದಲ್ಲಿ ಕನ್ನಡ ಚಿತ್ರಗಳ ಮೇಲೆ ಅಭಿಮಾನಿಗಳು ವ್ಯಕ್ತಪಡಿಸಿದ ವೈಖರಿ ನೋಡಿ ಉಪ್ಪಿ ಅವರು ಫುಲ್ ಖುಷ್ ಆಗಿದ್ದಾರೆ. ಜೊತೆಗೆ ವಿದೇಶಿಗನ್ನಡಿಗರಿಗೆ ತಮ್ಮ ತುಂಬು ಹೃದಯದ ಧನ್ಯವಾದವನ್ನು ಸಲ್ಲಿಸಿದ್ದಾರೆ.[ಉಪೇಂದ್ರರ ಬಿಸಿ-ಬಿಸಿ 'ಉಪ್ಪಿ2'ಗೆ 50ರ ಸಂಭ್ರಮ ]
'ರಂಗಿತರಂಗ' ಚಿತ್ರದ ನಂತರ ವಿದೇಶದಲ್ಲಿ ಉಪ್ಪಿ ಚಿತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದು, ಅಮೇರಿಕದಲ್ಲಿ ಅಭಿಮಾನಿಗಳು ಉಪ್ಪಿ ಜೊತೆ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದರು. ಕಾರ್ಯಕ್ರಮದಲ್ಲಿ ಅಭಿಮಾನಿಗಳು ತಮ್ಮ ತಮ್ಮ ಅನುಮಾನಗಳನ್ನು ಪರಿಹರಿಸಿಕೊಂಡರು.
"ಚಿತ್ರದ ಯಶಸ್ಸಿನಿಂದ ನಿರ್ದೇಶನ ಜೊತೆಗೆ ನಿರ್ಮಾಣ ಮಾಡುವ ಇಂಗಿತ ಇದೆ. ಆದರೆ ಯಾವಾಗ ಅಂತ ಗೊತ್ತಿಲ್ಲ ಅಂತ ಉಪ್ಪಿ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದರು.[ಉಪೇಂದ್ರ ಜೊತೆ ರಾಧಿಕಾನಾ ಇಲ್ಲ ಪ್ರಿಯಾಮಣಿನಾ?]
ಇನ್ನು ವಿದೇಶದ ಬಗ್ಗೆ ಉಪ್ಪಿ ಅವರು ಅಲ್ಲಿರುವುದೆಲ್ಲಾ ದೊಡ್ಡ ದೇಶ, ಅಲ್ಲಿ ಕನ್ನಡದ ಚಿತ್ರಗಳು ಹೆಚ್ಚು ಹೆಚ್ಚು ಬರಬೇಕು. ಸುಮಾರು ಹದಿನೆಂಟು ಘಂಟೆ ಪ್ರಯಾಣ ಇರುತ್ತದೆ. ಸಮಯ ಹೊಂದಿಸಿಕೊಂಡು ನ್ಯೂಜೆರ್ಸಿ, ನ್ಯೂಜಿಲ್ಯಾಂಡ್, ಚಿಕಾಗೋ, ಬೋಸ್ಟನ್, ಕ್ಯಾಲಿಫೋರ್ನಿಯ ಮುಂತಾದ ಕಡೆ ಭೇಟಿ ನೀಡಲಾಯಿತು. ಅಲ್ಲದೇ ಅಲ್ಲಿನ ಕನ್ನಡಿಗರು ನನ್ನ ಕೈಯಲ್ಲಿ ಕನ್ನಡ ಸಂಘವನ್ನು ಉದ್ಘಾಟನೆ ಮಾಡಿಸಿದರು.
ಅಲ್ಲಿನ ನೋಟ, ಜನರನ್ನು ನೋಡುವುದೇ ಒಂದು ಆನಂದ. ಸದ್ಯಕ್ಕೆ ಕಾಂಚನಾ-2 ಚಿತ್ರದ ಜೊತೆಗೆ ಇನ್ನು 2 ಚಿತ್ರಗಳ ಮಾತುಕತೆ ನಡೆಯುತ್ತಿದೆ. ನಿರ್ದೇಶನ ಸದ್ಯಕ್ಕಿಲ್ಲ. ಇನ್ನು ಶ್ರೀಮತಿ ಪ್ರಿಯಾಂಕ ಅವರು ನಿರ್ದೇಶನ ಮಾಡಬೇಕಾದರೆ ಮಕ್ಕಳನ್ನು ಬೋರ್ಡಿಂಗ್ ಸ್ಕೂಲ್ ಗೆ ಸೇರಿಸಬೇಕಾಗುತ್ತದೆ ಅಂತ ನಗುತ್ತಾರೆ ರಿಯಲ್ ಸ್ಟಾರ್.
Fresh Kannada

Fresh Kannada

No comments:

Post a Comment

Google+ Followers

Powered by Blogger.