Breaking News
recent

ಗಾಂಧಿನಗರಕ್ಕೆ ಕಾಲಿಟ್ಟ 'ಕಿರಗೂರಿನ ಗಯ್ಯಾಳಿಗಳು'!

ಖ್ಯಾತ ಬರಹಗಾರರಾದ ಪೂರ್ಣಚಂದ್ರ ತೇಜಸ್ವಿ ಅವರ 'ಕಿರಗೂರಿನ ಗಯ್ಯಾಳಿಗಳು' ಕಾದಂಬರಿಯನ್ನು ನಿರ್ದೇಶಕಿ ಸುಮನಾ ಕಿತ್ತೂರು ಅವರು ಹಾಗೆ ತೆರೆ ಮೇಲೆ ಕಲರ್ ಫುಲ್ ಆಗಿ ಹೊರತಂದಿದ್ದಾರೆ.
ಗಾಂಧಿನಗರಕ್ಕೆ ಕಾಲಿಟ್ಟ 'ಕಿರಗೂರಿನ ಗಯ್ಯಾಳಿಗಳು'!

'ಎದೆಗಾರಿಕೆ' ಚಿತ್ರದ ನಂತರ ಮತ್ತೊಮ್ಮೆ ಗಾಂಧಿನಗರಕ್ಕೆ ವಾಪಸಾಗಿರುವ ಸುಮನಾ ಕಿತ್ತೂರು ಅವರು 'ಕಿರಗೂರಿನ ಗಯ್ಯಾಳಿಗಳು' ಚಿತ್ರದ ಮೂಲಕ ಮತ್ತೆ ನಿರ್ದೇಶನದ ಕಡೆ ಹೊರಳಿದ್ದಾರೆ. ಇದೀಗ ದಸರಾ ಹಬ್ಬದ ಪ್ರಯುಕ್ತ ಸಿನಿಮಾದ ಫಸ್ಟ್ ಲುಕ್ ಫೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ದಸರಾ ಸ್ಪೆಷಲ್ ಗಿಫ್ಟ್ ಪ್ರೆಸೆಂಟ್ ಮಾಡಿದ್ದಾರೆ.

ಅಗ್ನಿ ಶ್ರೀಧರ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಕಿರಗೂರಿನ ಗಯ್ಯಾಳಿಗಳು' ಮೇಘ ಮೂವೀಸ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿದೆ. ಈಗಾಗಲೇ ಚಿತ್ರದ ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಡಬ್ಬಿಂಗ್ ಕಾರ್ಯಗಳು ಕೂಡ ಕೊನೆಯ ಹಂತದಲ್ಲಿದೆ.

ಬರೀ ಹೆಂಗಸರಿಗೆ ಹೆಚ್ಚು ಪ್ರಾಮುಖ್ಯತೆ ನೀಡಿರುವ ಈ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ನ ಅನೇಕ ಹಿಟ್ ಸ್ಟಾರ್ ನಟರು ಅಭಿನಯಿಸಿದ್ದಾರೆ. ಇದೀಗ ಚಿತ್ರದ ಎಲ್ಲಾ ನ್ಯೂ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಪೋಸ್ಟರ್ ಗಳು ಭಾರಿ ಕುತೂಹಲ ಹುಟ್ಟಿಸುತ್ತಿವೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.