Breaking News
recent

ಚಿತ್ರಗಳು: ಸ್ಯಾಂಡಲ್ ವುಡ್ ನ ಮುಂಬರುವ ಜೋಡಿಗಳು ಇವರು!

ಸಿನಿಮಾಗಳಲ್ಲಿ ಪ್ರೀತಿ-ಲವ್-ಇಷ್ಕ್-ಕಾದಲ್-ಮೊಹಬ್ಬತ್ ಗೆ ಒಂದು ವಿಶೇಷವಾದ ಸ್ಥಾನಮಾನವಿದೆ. ಆದ್ರಿಂದ ಸಿನಿಮಾ ಪರದೆ ಮೇಲೆ ಲವ್ ಅನ್ನೋದು ಮುಖ್ಯ ಪಾತ್ರ ವಹಿಸುತ್ತದೆ.
ಇದೇನು ನಾವು ಲವ್ ವಿಷ್ಯ ಮಾತಾಡ್ತ ಇದ್ದೀವಿ ಅನ್ಕೊಂಡ್ರಾ?, ಹೌದು ಪ್ರೀತಿ ವಿಷ್ಯ ಮಾತಾಡುವಾಗ, ಕನ್ನಡ ಚಿತ್ರರಂಗದಲ್ಲಿರುವ ಕೆಲವು ಬೆಸ್ಟ್ ಜೋಡಿಗಳು ಕನ್ನಡ ಚಿತ್ರ ಪ್ರೇಮಿಗಳನ್ನು ಇಂಪ್ರೆಸ್ ಮಾಡಿದ್ದಾರೆ. ಅವರ ಬಗ್ಗೆ ನಾವು ಖಂಡಿತ ಮರೆಯಬಾರದು.[ಹಲ್ಲಿಗೆ ಹಲ್ಲು, ಕಣ್ಣಿಗೆ ಕಣ್ಣು, ರಕ್ತಕ್ಕೆ ರಕ್ತ - ರಿಕ್ಕಿ ಟ್ರೈಲರ್ ನೋಡಿ]
ವರನಟ ಡಾ.ರಾಜ್ ಕುಮಾರ್ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಡಾ.ರಾಜ್ ಕುಮಾರ್-ಲೀಲಾವತಿ, ಅನಂತ್ ನಾಗ್-ಲಕ್ಷ್ಮಿ, ಶಂಕರ್ ನಾಗ್-ಭವ್ಯಾ, ಮಾಲಾಶ್ರೀ-ಸುನೀಲ್, ಸುಹಾಸಿನಿ-ವಿಷ್ಣುವರ್ಧನ್ ಮುಂತಾದವರು ಕನ್ನಡ ಸಿನಿಪ್ರೀಯರನ್ನು ರಂಜಿಸಿದ್ದಾರೆ.


ಹೆಚ್ಚಿನ ಜೋಡಿಗಳು ಪ್ರೇಕ್ಷಕರಿಗೆ ಫೇವರೆಟ್ ಆಗೋದ್ರಿಂದ ಫಿಲ್ಮ್ ಮೇಕರ್ ಗಳಿಗೆ ಇದೊಂದು ವರದಾನ ಅಂದ್ರೂ ತಪ್ಪಾಗ್ಲಿಕ್ಕಿಲ್ಲ. ಯಾಕೆಂದರೆ ತೆರೆಯ ಮೇಲೆ ಸಖತ್ ಕೆಮಿಸ್ಟ್ರಿ ವರ್ಕೌಟ್ ಆದ ಬೆಸ್ಟ್ ಜೋಡಿಗಳು ಅಭಿನಯಿಸಿದ ಚಿತ್ರಗಳು ಬಾಕ್ಸಾಫೀಸ್ ನಲ್ಲಿ ಬಿಗ್ ಹಿಟ್ ಪಡೆದುಕೊಂಡಿವೆ.[ಪವರ್ ಸ್ಟಾರ್ ಜೊತೆ ಚಕ್ರವ್ಯೂಹ ಭೇದಿಸಲು ರಚಿತಾ ರೆಡಿ]
ಇದರಿಂದ ಕೆಲವು ಫಿಲ್ಮ್ ಮೇಕರ್ ಗಳು ಅದೇ ಹಿಟ್ ಜೋಡಿಗಳನ್ನು ಹಾಕಿಕೊಂಡು ಮತ್ತೆ ಮತ್ತೆ ಸಿನಿಮಾ ಮಾಡುತ್ತಾರೆ. ಇದು ಹಳೇ ವರ್ಷನ್ ಕಥೆಯಾದರೆ, ಇನ್ನು ಹೊಸ ವರ್ಷನ್ ನಲ್ಲಿ ಲೀಡ್ ಜೋಡಿಗಳನ್ನು ಹಾಕಿಕೊಂಡು ಚಿತ್ರ ನಿರ್ಮಾಪಕರು ಕೆಲವು ಪ್ರಯೋಗಗಳನ್ನು ಮಾಡುತ್ತಾರೆ.
ಸದ್ಯಕ್ಕೆ ಈಗಿನ ವರ್ಷನ್ ನಲ್ಲಿ ತೆರೆ ಮೇಲೆ ಸಖತ್ ಆಗಿ ಕೆಮಿಸ್ಟ್ರಿ ವರ್ಕ್ ಆಗೋ ಬೆಸ್ಟ್ ಜೋಡಿಗಳೆಂದರೆ ಪುನೀತ್ ರಾಜ್ ಕುಮಾರ್-ರಮ್ಯಾ, ಯಶ್-ರಾಧಿಕಾ ಪಂಡಿತ್, ಸುದೀಪ್-ರಾಗಿಣಿ ದ್ವಿವೇದಿ, ದರ್ಶನ್-ರಕ್ಷಿತಾ ಇವರೆಲ್ಲ ನಟಿಸಿದ ಚಿತ್ರಗಳು ಒಂದು ಕಾಲದಲ್ಲಿ ಬಾಕ್ಸಾಫೀಸ್ ನಲ್ಲಿ ಹಿಟ್.
ಇದೀಗ ಸ್ಯಾಂಡಲ್ ವುಡ್ ಗೆ ಹೊಸ ಹೊಸ ಮುಖಗಳ ಪರಿಚಯವಾಗಿದ್ದು, ಹೊಸ ಜೋಡಿಗಳು ಚಂದನವನಕ್ಕೆ ಎಂಟ್ರಿಯಾಗಿದೆ, ಆ ಜೋಡಿಗಳು ಯಾರು ಎಂಬುದನ್ನು ನೋಡಲು ಕೆಳಗಿನ ಸ್ಲೈಡ್ ಕ್ಲಿಕ್ ಮಾಡಿ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್-ರಚಿತಾ ರಾಮ್
ಇದೇ ಮೊದಲ ಬಾರಿಗೆ ಮುಂಬರುವ ಹೊಸ ಚಿತ್ರ 'ಚಕ್ರವ್ಯೂಹ' ದಲ್ಲಿ ಪವರ್ ಸ್ಟಾರ್ ಜೊತೆ ಗುಳಿಕೆನ್ನೆ ಬೆಡಗಿ ರಚಿತಾ ರಾಮ್ ನಾಯಕಿಯಾಗಿ ಮಿಂಚಿದ್ದು, ತೆರೆ ಮೇಲೆ ಇವರಿಬ್ಬರ ಕೆಮಿಸ್ಟ್ರಿ ಹೇಗೆ ವರ್ಕ್ ಆಗುತ್ತೆ ಅಂತ ಕಾದು ನೋಡಬೇಕು

ಕಿಚ್ಚ ಸುದೀಪ್ ಮತ್ತು ನಿತ್ಯಾ ಮೆನನ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಬಹುಭಾಷಾ ತಾರೆ ನಿತ್ಯಾ ಮೆನನ್ ಅವರು ನಿರ್ದೇಶಕ ಕೆ.ಎಸ್ ರವಿಕುಮಾರ್ ಅವರ ಇನ್ನು ಹೆಸರಿಡದ ಕನ್ನಡ ಚಿತ್ರ ಹಾಗೂ ಇದೇ ಚಿತ್ರ ತಮಿಳು ಭಾಷೆಗೆ ಡಬ್ ಆಗುತ್ತಿದ್ದು, ತಮಿಳು ವರ್ಷನ್ 'ಮುಡಿಂಜ ಇವನ ಪುಡಿ' ಚಿತ್ರದಲ್ಲಿ ಒಂದಾಗಿದ್ದು, ಈ ಜೋಡಿ ಕಮಾಲ್ ಮಾಡುತ್ತಾ ನೋಡೋಣ

ರಮ್ಯಾ ಮತ್ತು ಪ್ರಜ್ವಲ್ ದೇವರಾಜ್
ಶಿವರಾಜ್ ಕುಮಾರ್ ಜೊತೆ 'ಆರ್ಯನ್' ಚಿತ್ರದಲ್ಲಿ ಕಾಣಿಸಿಕೊಂಡ ನಂತರ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಹಾಗೂ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಇದೇ ಮೊದಲ ಬಾರಿಗೆ 'ದಿಲ್ ಕಾ ರಾಜ' ಚಿತ್ರದಲ್ಲಿ ಮಿಂಚಿದ್ದಾರೆ

'ಉಗ್ರಂ' ಶ್ರೀಮುರಳಿ ಮತ್ತು ರಚಿತಾ ರಾಮ್
ಬಹು ಬೇಡಿಕೆಯ ನಟಿ 'ಬುಲ್ ಬುಲ್' ಬೆಡಗಿ ರಚಿತಾ ರಾಮ್ ಹಾಗೂ 'ಉಗ್ರಂ' ಖ್ಯಾತಿಯ ಶ್ರೀಮುರಳಿ ಅವರು 'ರಥಾವರ' ಚಿತ್ರದಲ್ಲಿ ಮಿಂಚಿದ್ದು, ಚಿತ್ರದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ. ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ಪಾಸಿಟಿವ್ ರೆಸ್ಪಾನ್ಸ್ ಕೇಳಿಬರುತ್ತಿದೆ.

ರಕ್ಷಿತ್ ಶೆಟ್ಟಿ-ಹರಿಪ್ರಿಯ
'ಉಗ್ರಂ' ಬೆಡಗಿ ಹರಿಪ್ರಿಯ ಅವರು ನಟ ಕಮ್ ನಿರ್ದೇಶಕ ರಕ್ಷಿತ್ ಶೆಟ್ಟಿ ಅವರೊಂದಿಗೆ ಇದೇ ಮೊದಲ ಬಾರಿಗೆ 'ರಿಕ್ಕಿ' ಚಿತ್ರದ ಮೂಲಕ ಒಂದಾಗಿದ್ದಾರೆ. ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಭಾರಿ ರೆಸ್ಪಾನ್ಸ್ ಗಳಿಸುತ್ತಿದೆ.

ಯಶ್ ಮತ್ತು ರಾಧಿಕಾ ಪಂಡಿತ್
ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಪಾಪ್ಯುಲರ್ ಜೋಡಿ ಎಂದೇ ಹೆಸರಾಗಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರು 'ಮೊಗ್ಗಿನ ಮನಸು' 'ಡ್ರಾಮಾ' ಹಾಗೂ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದಲ್ಲಿ ಒಂದಾಗಿದ್ದರು. ಇದೀಗ ಮೂಲಗಳ ಪ್ರಕಾರ ನಿರ್ಮಾಪಕ ಕೆ.ಮಂಜು ಅವರ ಮುಂದಿನ ಚಿತ್ರದಲ್ಲಿ ಯಶ್ ರಾಧಿಕಾ ಪಂಡಿತ್ ಒಂದಾಗಲಿದ್ದಾರೆ.

ಧನಂಜಯ್ ಹಾಗೂ ಪಾರುಲ್ ಯಾದವ್
ಡೈರೆಕ್ಟರ್ ಸ್ಪೆಷಲ್ ಹುಡುಗ ಧನಂಜಯ್ ಹಾಗೂ ಪ್ಯಾರ್ಗೆ ಆಗ್ಬುಟ್ಟೈತೆ ಬೆಡಗಿ ಪಾರುಲ್ ಯಾದವ್ ಅವರು ನಿರ್ದೇಶಕ ಪವನ್ ಒಡೆಯರ್ ಅವರ ರೋಮ್ಯಾಂಟಿಕ್ ಚಿತ್ರ 'ಜೆಸ್ಸಿ' ಮೂಲಕ ಒಂದಾಗಿದ್ದಾರೆ.

ಪುನೀತ್ ಹಾಗು ರಾಧಿಕಾ ಪಂಡಿತ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಧಿಕಾ ಪಂಡಿತ್ ಅವರು ಬ್ಲಾಕ್ ಬಸ್ಟರ್ ಹಿಟ್ 'ಹುಡುಗರು' ಚಿತ್ರದ ನಂತರ ಮತ್ತೆ ನಿರ್ದೇಶಕ ದುನಿಯಾ ಸೂರಿ ಅವರ 'ದೊಡ್ಮನೆ ಹುಡುಗ' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿರಂಜೀವಿ ಸರ್ಜಾ ಮತ್ತು ಅಮೂಲ್ಯಾ
ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಹಾಗು ಗೋಲ್ಡನ್ ಕ್ವೀನ್ ಅಮೂಲ್ಯ ಅವರು ಇದೇ ಮೊದಲ ಬಾರಿಗೆ 'ರಾಮ್ ಲೀಲಾ' ಚಿತ್ರದ ಮೂಲಕ ಒಂದಾಗಿದ್ದಾರೆ. ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಸದ್ಯದಲ್ಲೇ ತೆರೆ ಮೇಲೆ ಅಪ್ಪಳಿಸಲಿದೆ

ಕಾದು ನೋಡೋಣ
ಇದೀಗ ನೀವು ನೋಡಿದ ಎಲ್ಲಾ ಜೋಡಿಗಳ ಚಿತ್ರ ಇನ್ನೇನು ಕೆಲವೇ ದಿನಗಳಲ್ಲಿ ತೆರೆ ಮೇಲೆ ಬರಲಿದ್ದು, ಈ ಲೀಡ್ ಜೋಡಿಗಳು ಪ್ರೇಕ್ಷಕರನ್ನು ಕಮಾಲ್ ಮಾಡ್ತಾರ ಅಂತ ಕಾದು ನೋಡೋಣ
Fresh Kannada

Fresh Kannada

No comments:

Post a Comment

Google+ Followers

Powered by Blogger.