Breaking News
recent

ವಿಡಿಯೋ: ನೀವು ನೋಡಿರದ 'ರಂಗಿತರಂಗ'ದ ದೃಶ್ಯಗಳು

ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿದ ಹೊಸಬರ ಚಿತ್ರ 'ರಂಗಿತರಂಗ' ಗಾಂಧಿನಗರದಲ್ಲಿ ಕಮಾಲ್ ಮಾಡಿರೋದು ನಿಮಗೂ ಗೊತ್ತಲ್ವಾ?, ನಿರ್ದೇಶಕ ಅನುಪ್ ಭಂಡಾರಿ ಅವರು ನಿರ್ದೇಶಿಸಿರುವ ಈ ಚಿತ್ರ ಸ್ಯಾಂಡಲ್ ವುಡ್ ಬಾಕ್ಸಾಫೀಸ್ ನಲ್ಲಿ ಹೊಸ ಅಲೆಯನ್ನು ಎಬ್ಬಿಸಿತ್ತು.

ಇದೀಗ ಈ ಚಿತ್ರದ ಕೆಲವು ಡಿಲೀಟ್ ಮಾಡಿರುವ ದೃಶ್ಯಗಳು ನಮಗೆ ಲಭ್ಯವಾಗಿದ್ದು, ಆ ದೃಶ್ಯಗಳನ್ನು 'ರಂಗಿತರಂಗ' ಸಿನಿಮಾದಲ್ಲಿ ಅಳವಡಿಸಿಕೊಳ್ಳಲಾಗಲಿಲ್ಲ. ಆದರೆ ನಿರ್ದೇಶಕ ಅನುಪ್ ಭಂಡಾರಿ ಅವರು ಆ ದೃಶ್ಯಗಳನ್ನು ತಮ್ಮ ಫೇಸ್ ಬುಕ್ಕಿ ನಲ್ಲಿ ಹಂಚಿಕೊಂಡಿದ್ದಾರೆ.[ಚಿತ್ರ ವಿಮರ್ಶೆ : 'ರಂಗಿತರಂಗ' ಬಲು ರೋಚಕ]
ಸುಮಾರು 14 ಹೆಚ್ಚುವರಿ ದೃಶ್ಯಗಳನ್ನು ಸಿನಿಮಾದಲ್ಲಿ ಅಳವಡಿಸಿಕೊಳ್ಳಲಾಗಲಿಲ್ಲ. ಆ ದೃಶ್ಯಗಳು ಯಾವುದು ಎಂಬ ಕುತೂಹಲವಿದ್ದರೆ ಈ ವಿಡಿಯೋ ನೋಡಿ..

Download Dennana Dennana Full Video Song
MediaBunch

Rangitaranga (2015) Kannada Movie Mp3 Songs Free Download
http://www.freshkannada.com/2015/06/rangitaranga-2015-kannada-movie-mp3.html
ರಂಗಿತರಂಗ ನೋಡಲು ಬಂದ ರೆಡ್ಡಿ ಅಂಡ್ ಗ್ಯಾಂಗ್
http://www.freshkannada.com/2015/07/blog-post_30.html

ನಟನೆ-ನಿರ್ದೇಶನ-ಕಥೆ-ಚಿತ್ರಕಥೆ-ಸಾಹಿತ್ಯ-ಸಂಗೀತ ಸೇರಿದಂತೆ ಎಲ್ಲವನ್ನು ಹೊಸಬರೇ ಸೇರಿಕೊಂಡು ಮಾಡಿದ್ದು, ನೈಜತೆಗೆ ಹತ್ತಿರವಾದ ಕಲರ್ ಫುಲ್ 'ರಂಗಿತರಂಗ' ಕರ್ನಾಟಕದಲ್ಲಿ 100 ದಿನಗಳ ಸಂಭ್ರಮವನ್ನು ಆಚರಿಸಿಕೊಂಡಿದೆ. ಇನ್ನು ಈ ಚಿತ್ರ ಕರ್ನಾಟಕದ ಪ್ರೇಕ್ಷಕರಿಗೆ ಮಾತ್ರವಲ್ಲದೇ ವಿದೇಶದಲ್ಲಿರುವ ಕನ್ನಡಿಗರನ್ನು ಕಮಾಲ್ ಮಾಡಿತ್ತು. ಅಲ್ಲದೇ ಇಡೀ ವಿಶ್ವದ ಈ ವರ್ಷದ ಅತ್ಯುತ್ತಮ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.[ಚಂದನವನದ ಕೋಲ್ಮಿಂಚು 'ರಂಗಿತರಂಗ'ಕ್ಕೆ, ನೂರರ ಸಂಭ್ರಮ]
ಒಟ್ನಲ್ಲಿ 'ರಂಗಿತರಂಗ' ಚಿತ್ರದ ಮೂಲಕ ಹೊಸಬರಿಗೆ ಭರವಸೆಯ ಬೆಳಕು ಮೂಡಿಸಿದ ನಿರ್ದೇಶಕ ಅನುಪ್ ಭಂಡಾರಿ ಅವರು ಇಡೀ ಗಾಂಧಿನಗರವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಚಿತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್, ನಿರುಪ್ ಭಂಡಾರಿ, ರಾಧಿಕಾ ಚೇತನ್ ಹಾಗೂ ಆವಂತಿಕಾ ಶೆಟ್ಟಿ ಲೀಡ್ ರೋಲ್ ನಲ್ಲಿ ಮಿಂಚಿದ್ದರು.[ಅಂಕಲ್ ಸ್ಯಾಮ್ ಅಂಗಳದಲ್ಲಿ ರಂಗಿತರಂಗ 50 ದಿನದ ಸಂಭ್ರಮ!]
ಇನ್ನು ಇಲ್ಲಿ ಡಿಲೀಟ್ ಮಾಡಿರುವ ಇಷ್ಟು ಸೀನ್ ಗಳಲ್ಲಿ, ಯಾವ ಸೀನ್ ಸಿನಿಮಾದಲ್ಲಿ ಇರಬೇಕಿತ್ತು ಅಂತ ನಿಮಗನ್ನಿಸುತ್ತದೆ?, ನಿಮ್ಮ ಅಭಿಪ್ರಾಯವನ್ನು ಕೆಳಗಿರುವ ಕಾಮೆಂಟ್ ಬಾಕ್ಸ್ ಗೆ ಹಾಕಿ

Watch ವಿಡಿಯೋ: ನೀವು ನೋಡಿರದ 'ರಂಗಿತರಂಗ'ದ ದೃಶ್ಯಗಳು

Download ವಿಡಿಯೋ: ನೀವು ನೋಡಿರದ 'ರಂಗಿತರಂಗ'ದ ದೃಶ್ಯಗಳು
MediaBunch
Fresh Kannada

Fresh Kannada

No comments:

Post a Comment

Google+ Followers

Powered by Blogger.