Breaking News
recent

'ಯಶ'ಸ್ಸು ಸಿಕ್ಕ ಮೇಲೆ ಎಲ್ಲರೂ ಅಷ್ಟೇ ಅಂತೀರಾ?

ಸ್ಟಾರ್ ಪಟ್ಟಕ್ಕೇರೋದು ಅಂದ್ರೆ ಅಷ್ಟು ಸುಲಭಾನಾ? ಹತ್ತಿಪ್ಪತ್ತು ಸಿನಿಮಾದಲ್ಲಿ ಬೆವರು ಸುರಿಸ್ಬೇಕು, ಕೆಲವೊಂದ್ಸಾರಿ 'ರಕ್ತ'ವನ್ನೂ ಸುರಿಸ್ಬೇಕು. ಅಷ್ಟೆಲ್ಲವನ್ನೂ ಮಡಿದ್ರೂ ಅದೃಷ್ಟ ಚೆನ್ನಾಗಿದ್ರೆ ಮಾತ್ರ ಅವ್ನು ಸ್ಟಾರ್ ಆಗ್ತಾನೆ ಇಲ್ಲದಿದ್ರೆ ಅವನೊಬ್ಬ ನಟ ಅಥವಾ ಹೀರೋ ಅಷ್ಟೇ..
ಆದ್ರೆ ಹೀಗೆ ಬೆಳೆದು ನಿಂತ ಅದೆಷ್ಟೋ ನಟರು ಏರಿದ ಏಣಿಯನ್ನ ಒದೆಯೋ ಕೆಲಸ ಮಾಡಿದ್ದಾರೆ. ಮೈಮರೆತು ಮತ್ತೆ ಮತ್ತೆ ಮಕಾಡೆ ಮಗುಚಿ ಬಿದ್ದಿದ್ದಾರೆ. ಆದ್ರೆ ಜಟ್ಟಿ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅನ್ನೋ ಅಹಂಕಾರ ಮಾತ್ರ ಅವ್ರನ್ನ ಬಿಟ್ಟಿಲ್ಲ.['ಮಾಸ್ಟರ್ ಪೀಸ್' ಯಶ್ ಗೆ ಡೆಡ್ಲಿ ಆದಿತ್ಯ ವಿಲನ್.?]
ಇದು ಮಾಧ್ಯಮದವ್ರನ್ನ ಕೆರಳಿಸ್ತಾ ಇರುತ್ತೆ. ಅವ್ರ ಕೋಪಕ್ಕೆ ಸೊಪ್ಪೂ ಹಾಕದ ಸ್ಟಾರ್ಗಳು ನಮಗೊಂದು ಅಭಿಮಾನಿ ಬಳಗ ಇದೆ, ಅವ್ರು ಸಿನಿಮಾ ನೋಡ್ತಾರೆ ಅನ್ನೋ ಆತ್ಮವಿಶ್ವಾಸದ ಅಲೆಯಲ್ಲಿ ತೇಲ್ತಾರೆ. ಆದ್ರೆ ಗೊತ್ತಿಲ್ಲ ಆ ಅಲೆ ಯಾವಾಗ ಸುನಾಮಿ ಆಗಿ ರಿವರ್ಸ್ ಹೊಡೆಯತ್ತೆ ಅನ್ನೋದು! ಹೊಡೆತ ಬಿದ್ದ ಮೇಲೆ 'ಸೈಡಿಗೆ' ಹೋಗಲೇಬೇಕು.[ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಲುಕ್ ನಲ್ಲಿ ಯಶ್]
ಈಗ ಮಾಧ್ಯಮಗಳು ಇಂತಹ ಅನುಮಾನವನ್ನ ಮತ್ತೊಬ್ಬ ಸ್ಟಾರ್ ಮೇಲೆ ವ್ಯಕ್ತಪಡಿಸ್ತಿವೆ. ರಾಕಿಂಗ್ ಸ್ಟಾರ್ ಇತ್ತೀಚೆಗೆ ಮಾಧ್ಯಮದವ್ರ ಫೋನ್ ಕರೆಗೆ ಸಿಕ್ಕೋದಿರ್ಲಿ, ಅವ್ರು ಕರೆ ಮಾಡಿದ್ರೆ ಮತ್ತೆ ಯಾವಾಗಲಾದ್ರೂ ಕರೆ ಮಾಡುವ, ಇಲ್ಲದಿದ್ರೆ ಒಂದು ಮೆಸೇಜ್ ಹಾಕೋ ಕನಿಷ್ಠ ಸೌಜನ್ಯವನ್ನೂ ತೋರಿಸ್ತಿಲ್ಲವಂತೆ.
ಅದೂ ಕೂಡ ಯಶ್ ಇತ್ತೀಚೆಗೆ 'ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ' ಸಿನಿಮಾ ಭರ್ಜರಿ ಹಿಟ್ ಆದ ನಂತ್ರ ಬದಲಾಗಿದ್ದಾರೆ ಅಂತಿವೆ ಗಾಂಧಿನಗರದ ಪತ್ರಕರ್ತರ ಮೂಲಗಳು. ಯಶ್ ಯಾವ ಗಾಡ್ಫಾದರ್ ಇಲ್ಲದೇ ತಳಮಟ್ಟದಿಂದ ಕಷ್ಟಪಟ್ಟು ಬೆಳೆದು ಬಂದವರು. ಅವರೂ ಉಳಿದವ್ರ ತರಹ ಆದ್ರೆ ಯಾವತ್ತಾದ್ರೊಂದು ದಿನ ಪತ್ರಕರ್ತರು ಅವ್ರಿಗೆ ಟಾಂಗ್ ಕೊಡೋದ್ರಲ್ಲಿ ಅನುಮಾನವಿಲ್ಲ.
Fresh Kannada

Fresh Kannada

No comments:

Post a Comment

Google+ Followers

Powered by Blogger.