Breaking News
recent

ಗುಳಿಕೆನ್ನೆ ಬೆಡಗಿ ರಚಿತಾ ರಾಮ್ ಗೆ ವಿಶ್ ಯೂ ಹ್ಯಾಪಿ ಬರ್ತ್ ಡೇ

ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಸ್ಯಾಂಡಲ್ ವುಡ್ ನ ದೊಡ್ಡ ದೊಡ್ಡ ಸ್ಟಾರ್ ಗಳೊಂದಿಗೆ ನಟಿಸಿ ಎಲ್ಲರಿಂದ ಭೇಷ್ ಅನ್ನಿಸಿಕೊಂಡು ಕನ್ನಡ ಚಿತ್ರರಂಗ ಕ್ಷೇತ್ರದಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಗೆ ಇಂದು (ಅಕ್ಟೋಬರ್ 03) ಹುಟ್ಟುಹಬ್ಬದ ಸಂಭ್ರಮ.
ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಲೀಡ್ ನಲ್ಲಿರುವ ಗ್ಲಾಮರ್ ಬೊಂಬೆ ರಚಿತಾ ರಾಮ್ ಅವರು ಶ್ರೀಮುರಳಿ ಅವರ ಮುಂದಿನ ಚಿತ್ರ 'ರಥಾವರ' ಕ್ಕೂ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಲ್ಲದೇ ಕರಾವಳಿ ಪ್ರದೇಶವಾದ ಮಂಗಳೂರಿನಲ್ಲಿ ನಾಯಕ ಶ್ರೀಮುರಳಿ ಹಾಗೂ ಇಡೀ ಚಿತ್ರತಂಡದೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ.
ಖಾಸಗಿ ವಾಹಿನಿ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಅರಸಿ' ದಾರಾವಾಹಿ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಈ ಗುಳಿಕೆನ್ನೆ ಬೆಡಗಿಯ ಇನ್ನೊಂದು ಹೆಸರು ಬಿಂದ್ಯಾ ರಾಮ್.[ಪವರ್ ಸ್ಟಾರ್ ಜೊತೆ ಚಕ್ರವ್ಯೂಹ ಭೇದಿಸಲು ರಚಿತಾ ರೆಡಿ ]
ಬಾಕ್ಸಾಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ಬುಲ್ ಬುಲ್' (2013) ಚಿತ್ರದಲ್ಲಿ ನಟಿಸಿದ ನಂತರ ಈಕೆಯ ಹೆಸರು ರಚಿತಾ ರಾಮ್ ಎಂದಾಯಿತು. ನಟಿಸಿದ ಮೊದಲ ಚಿತ್ರವೇ ಹಿಟ್ ಕಂಡಿದ್ದರಿಂದ ಕನ್ನಡ ಇಂಡಸ್ಟ್ರಿಯಲ್ಲಿ ಗ್ಲಾಮರ್ ಬೊಂಬೆಯ ಅದೃಷ್ಟ ಖುಲಾಯಿಸಿತು. ತದನಂತರ ತಮ್ಮ ಮುದ್ದಾದ ನಗುವಿನ ಮೂಲಕ ಗುಳಿಕೆನ್ನೆಯ ಬೆಡಗಿ ಎಂದೇ ಫೇಮಸ್ ಆದರು.
ಹಿರಿತೆರೆಗೆ ಕಾಲಿಟ್ಟಾಗಿನಿಂದ ಸ್ಯಾಂಡಲ್ ವುಡ್ ನ ದೊಡ್ಡ ದೊಡ್ಡ ಸ್ಟಾರ್ ನಟರೊಂದಿಗೆ ಡ್ಯುಯೆಟ್ ಹಾಡುತ್ತಿರುವ ರಚಿತಾ ರಾಮ್ 'ಬುಲ್ ಬುಲ್' ನಂತರ ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ 'ದಿಲ್ ರಂಗೀಲಾ' (2014) ಹಾಗೂ ಮತ್ತೆ ದರ್ಶನ್ ಜೊತೆ ಅಂಬರೀಶ (2014) ಚಿತ್ರದಲ್ಲಿ ಮಿಂಚಿದರು.['ಬುಲ್ ಬುಲ್' ಬೆಡಗಿ ರಚಿತಾಗೆ ಇರುವ ಏಕೈಕ ಆಸೆ ]
ನಂತರ ಕಿಚ್ಚ ಸುದೀಪ್ ಅವರೊಂದಿಗೆ ತೆಲುಗಿನ 'ಅತ್ತಾರೆಂಟಿಕಿ ದಾರೇದಿ' ಚಿತ್ರದ ರಿಮೇಕ್ ಆದ 'ರನ್ನ' ಚಿತ್ರದಲ್ಲಿ ರನ್ನನ ನಾಯಕಿಯಾಗಿ ಅದ್ಭುತ ಅಭಿನಯ ನೀಡುವ ಮೂಲಕ ಸಾವಿರಾರು ಅಭಿಮಾನಿಗಳ ಮೆಚ್ಚುಗೆ ಪಡೆದಿದ್ದಾರೆ. ಗ್ಲಾಮರ್ ಬೊಂಬೆ ರಚಿತಾ ರಾಮ್ ಅವರಿಗೆ ಕನ್ನಡದ ಮಾಣಿಕ್ಯ ಕಿಚ್ಚ ಸುದೀಪ್ ಅವರು ಟ್ವಿಟ್ಟರ್ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ತಂದೆ ರಾಮ್ ರಂತೆ ಭರತನಾಟ್ಯ ಕಲಾವಿದೆಯಾಗಿರುವ ರಚಿತಾ ರಾಮ್ ನಮ್ಮ ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಹುಡುಗಿ. ಜೊತೆಗೆ ಸುಮಾರು 50ಕ್ಕೂ ಹೆಚ್ಚು ಭರತನಾಟ್ಯ ಪ್ರದರ್ಶನಗಳನ್ನು ನೀಡಿದ್ದಾರೆ.[ರಚಿತಾ ರಾಮ್ ವಿರುದ್ಧ ಪುನೀತ್ ಫ್ಯಾನ್ಸ್ ಸಮರ ]
ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಂದಿಗೆ 'ಚಕ್ರವ್ಯೂಹ', ಶ್ರೀಮುರಳಿ ಅವರ 'ರಥಾವರ' ಹಾಗೂ ಧ್ರುವ ಸರ್ಜಾ ಅವರ 'ಭರ್ಜರಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಒಟ್ನಲ್ಲಿ ಒಂದರ ನಂತರ ಇನ್ನೊಂದು ಚಿತ್ರದಲ್ಲಿ ಬ್ಯುಸಿಯಾಗಿರುವ ಗುಳಿಕೆನ್ನೆಯ ಬೆಡಗಿ ಪ್ರೀತಿಯ ರಚ್ಚುಗೆ ನಮ್ಮ ಕಡೆಯಿಂದಲೂ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
Fresh Kannada

Fresh Kannada

No comments:

Post a Comment

Google+ Followers

Powered by Blogger.