Breaking News
recent

ಬ್ಯಾಂಕಾಕ್ ನಲ್ಲಿ ಅಜೇಯ್ ರಾವ್ ಮತ್ತು ಅಮೂಲ್ಯಾ
 'ದಿಲ್ ವಾಲೆ' ಚಿತ್ರದ ಖ್ಯಾತಿಯ ನಿರ್ದೇಶಕ ಅನಿಲ್ ಕುಮಾರ್ ಅವರ ಆಕ್ಷನ್-ಕಟ್ ನಲ್ಲಿ ಮೂಡಿಬರುತ್ತಿರುವ 'ಕೃಷ್ಣ ರುಕ್ಕು' ಚಿತ್ರದ ಫಸ್ಟ್ ಶೆಡ್ಯೂಲ್ ಕಂಪ್ಲೀಟ್ ಆಗಿದೆ. ಚಿತ್ರತಂಡ ಬ್ಯಾಕಾಂಕ್ ಗೆ ಹಾರಿದ್ದು, ವಿದೇಶದಲ್ಲಿ ಸ್ಪೆಷಲ್ ಹಾಡಿನ ಚಿತ್ರೀಕರಣ ಮುಗಿಸಿದೆ.
ಬ್ಯಾಂಕಾಕ್ ನಲ್ಲಿ ಅಜೇಯ್ ರಾವ್ ಮತ್ತು ಅಮೂಲ್ಯಾ

ನಿರ್ಮಾಪಕ ಉದಯ್ ಮೆಹ್ತಾ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ನಲ್ಲಿ 'ಕೃಷ್ಣ' ಅಂತಾನೇ ಖ್ಯಾತಿ ಪಡೆದುಕೊಂಡಿರುವ ಅಜಯ್ ರಾವ್ ಹಾಗು ನಟಿ ಅಮೂಲ್ಯಾ ಅವರು ಲೀಡ್ ರೋಲ್ ನಲ್ಲಿ ಮಿಂಚಿದ್ದಾರೆ.
ಚಿತ್ರದ 'ಇಷ್ಕ್ ವಿಷ್ಕ್' ಎಂಬ ಸ್ಪೆಷಲ್ ಹಾಡಿನ ಚಿತ್ರೀಕರಣವು, ಬ್ಯಾಂಕಾಕ್ ನ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ನಡೆಯಿತು. ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಹಾಗೂ ಗಾಯಕ ಸೋನು ನಿಗಮ್ ಅವರು ಹಾಡಿರುವ ಈ ಸುಂದರ ಹಾಡಿಗೆ ಬ್ಯಾಂಕಾಕ್ ನ ಅದ್ಭುತ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಯಿತು.
ನಿರ್ದೇಶಕ ಅನಿಲ್ ಕುಮಾರ್ ಅವರ 'ಕೃಷ್ಣ ರುಕ್ಕು' ಚಿತ್ರಕ್ಕೆ ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಈ ಸ್ಪೆಷಲ್ ಹಾಡಿಗಾಗಿ ಯೋಗಿ ಅವರು ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ.
ಜೊತೆಗೆ ಡಾನ್ಸ್ ಮಾಸ್ಟರ್ ಮುರಳಿ ಅವರು 'ಇಷ್ಕ್ ವಿಷ್ಕ್' ಹಾಡಿಗೆ ಕೊರಿಯೋಗ್ರಫಿ ಮಾಡಿದ್ದು, ನಟಿ ಅಮೂಲ್ಯಾ ಹಾಗೂ ನಟ ಅಜೇಯ್ ರಾವ್ ಸಖತ್ ರಾಯಲ್ ಲುಕ್ ನಲ್ಲಿ ಮಿಂಚಿದ್ದಾರೆ. ಇನ್ನೇನು ಚಿತ್ರದ ಸೆಕೆಂಡ್ ಶೆಡ್ಯೂಲ್ ಸದ್ಯದಲ್ಲಿಯೇ ಬೆಂಗಳೂರಿನ ಸುತ್ತ-ಮುತ್ತ ನಡೆಯಲಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.