Breaking News
recent

ರಿಯಾಲಿಟಿ ಶೋ ವಿರುದ್ಧ ರೊಚ್ಚಿಗೆದ್ದಿದ್ದ ನಿರ್ಮಾಪಕರು ಈಗೆಲ್ಲಿ?

ಕೆಲವೇ ತಿಂಗಳ ಹಿಂದಿನ ಮಾತು. 'ಕನ್ನಡ ಚಿತ್ರರಂಗದ ಅನ್ನದಾತರು' ಅಂತ ಕರೆಯಿಸಿಕೊಳ್ಳುವ ನಿರ್ಮಾಪಕರು ಬೀದಿಗಿಳಿದು ಉಪವಾಸ ಸತ್ಯಾಗ್ರಹ ಮಾಡಿದ್ರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಧರಣಿ ಕೂತಿದ್ರು.
ರಿಯಾಲಿಟಿ ಶೋ ವಿರುದ್ಧ ರೊಚ್ಚಿಗೆದ್ದಿದ್ದ ನಿರ್ಮಾಪಕರು ಈಗೆಲ್ಲಿ?

ಅದಕ್ಕೆಲ್ಲಾ ಕಾರಣ, ರಿಯಾಲಿಟಿ ಶೋಗಳು ಮತ್ತು ಅದರಲ್ಲಿ ಭಾಗವಹಿಸುವ ಸ್ಟಾರ್ ನಟರು.! ಕನ್ನಡದ ಸ್ಟಾರ್ ನಟರು ನಿರ್ಮಾಪಕರಿಗೆ ಕಾಲ್ ಶೀಟ್ ನೀಡುತ್ತಿಲ್ಲ. ರಿಯಾಲಿಟಿ ಶೋಗಳಲ್ಲೇ ಸ್ಟಾರ್ ನಟರು ಬಿಜಿಯಾಗಿದ್ದಾರೆ. ರಿಯಾಲಿಟಿ ಶೋಗಳು ಪ್ರೈಂ ಟೈಮ್ ನಲ್ಲಿ ಪ್ರಸಾರವಾಗುವುದರಿಂದ ಥಿಯೇಟರ್ ಗಳಲ್ಲಿ ಸೆಕೆಂಡ್ ಶೋಗಳು ಖಾಲಿ ಹೊಡೆಯುತ್ತಿವೆ. ನಿರ್ಮಾಪಕರು ಬೀದಿಗೆ ಬೀಳುತ್ತಿದ್ದಾರೆ ಅಂತ ಹಲವು ನಿರ್ಮಾಪಕರು ಗಲಾಟೆ ಮಾಡಿದ್ರು. [ಹೊಟ್ಟೆಪಾಡಿಗಾಗಿ ಬೀದಿಗಿಳಿದ ಕನ್ನಡ ನಿರ್ಮಾಪಕರು]
ನಿರ್ಮಾಪಕರ ಗದ್ದಲ ಸಿ.ಎಂ ಸಿದ್ದರಾಮಯ್ಯ ರವರವರೆಗೂ ತಲುಪಿತ್ತು. ಈಗ ಎಲ್ಲರೂ ಸೈಲೆಂಟ್ ಆಗಿದ್ದಾರೆ. ಹೀಗಿರುವಾಗಲೇ, ಕನ್ನಡ ಕಿರುತೆರೆಯ ಪ್ರಖ್ಯಾತ ರಿಯಾಲಿಟಿ ಶೋ 'ಬಿಗ್ ಬಾಸ್' ಮೂರನೇ ಆವೃತ್ತಿ ಶುರುವಾಗುತ್ತಿದೆ.
ಇದೇ ಭಾನುವಾರ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಸೋಮವಾರದಿಂದ ಪ್ರತಿ ದಿನ ರಾತ್ರಿ 9 ಗಂಟೆಗೆ 'ಬಿಗ್ ಬಾಸ್' ಪ್ರಸಾರವಾಗಲಿದೆ. ಅಲ್ಲಿಗೆ, ಬಹುತೇಕ ಎಲ್ಲರ ಮನೆಯಲ್ಲೂ 'ಬಿಗ್ ಬಾಸ್' ಹವಾ ಶುರುವಾಗಲಿದೆ. [ನಿರ್ಮಾಪಕರು ರೊಚ್ಚಿಗೇಳುವುದಕ್ಕೆ 'ಇವರುಗಳೇ' ಕಾರಣ.!]
ರಿಯಾಲಿಟಿ ಶೋಗಳ ವಿರುದ್ಧ ಸಮರ ಸಾರಿದ್ದ ನಿರ್ಮಾಪಕರು ಈಗೆಲ್ಲಿದ್ದಾರೆ, ಏನ್ಮಾಡ್ತಿದ್ದಾರೆ ಗೊತ್ತಿಲ್ಲ. ಆದ್ರೆ, ಕಲರ್ಸ್ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ಹಾಗು 'ಬಿಗ್ ಬಾಸ್' ಕಾರ್ಯಕ್ರಮದ ನಿರ್ದೇಶಕರಾಗಿರುವ ಪರಮೇಶ್ವರ ಗುಂಡ್ಕಲ್ ಹೇಳುವ ಪ್ರಕಾರ, ರಿಯಾಲಿಟಿ ಶೋಗಳಿಂದ ಸಿನಿಮಾ ಕಲೆಕ್ಷನ್ ಡಲ್ ಆಗುವುದಿಲ್ಲ.
''ಸಿನಿಮಾ ಇಲ್ಲದೆ ಟಿವಿ ಇಲ್ಲ ನಿಜ. ಆದ್ರೆ, ಟಿವಿ ಇಲ್ಲದೆ ಸಿನಿಮಾ ಇದೆ. ಕಿರುತೆರೆಗೆ ಪ್ರತ್ಯೇಕ ಆಡಿಯನ್ಸ್ ಇದ್ದಾರೆ. ರಿಯಾಲಿಟಿ ಶೋ ನಿಂದ ಕನ್ನಡ ಸಿನಿಮಾಗಳು ಓಡುತ್ತಿಲ್ಲ ಅನ್ನೋದು ಹೇಗೆ.? 'ರಂಗಿತರಂಗ' ಸಿನಿಮಾ ಹಿಟ್ ಆಗಿದೆ. ಅನೇಕ ವಾಹಿನಿಗಳಲ್ಲಿ ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿವೆ ಅಲ್ವಾ?'' ಅಂತ ಪ್ರಶ್ನೆ ಮಾಡುತ್ತಾರೆ ಪರಮೇಶ್ವರ ಗುಂಡ್ಕಲ್.
Fresh Kannada

Fresh Kannada

No comments:

Post a Comment

Google+ Followers

Powered by Blogger.