Breaking News
recent

ಬೆಣ್ಣೆ ದೋಸೆ ತಿರಸ್ಕರಿಸಿದ 'ಪೂಜಾರಿ' ಬೆಡಗಿ

'ಪೂಜಾರಿ' ಸಿನಿಮಾದಲ್ಲಿ 'ಬಿಡ್ಡಾ' ಆದಿಲೋಕೇಶ್ ಜೊತೆ 'ಕಣ್ಣಲ್ಲೇ ನನ್ನ ಚಿತ್ರ ಬರೆದೋನು' ಅಂತ ಡ್ಯುಯೆಟ್ ಹಾಡಿದ್ದ ನಟಿ ನೀತು ಅವರು 'ಬೆಂಗ್ಳೂರ್ ಬೆಣ್ಣೆ ದೋಸೆ' ಕಾಮಿಡಿ ಶೋ ಕಾರ್ಯಕ್ರಮದಿಂದ ಹೊರ ನಡೆದಿದ್ದಾರೆ.
ಬೆಣ್ಣೆ ದೋಸೆ ತಿರಸ್ಕರಿಸಿದ 'ಪೂಜಾರಿ' ಬೆಡಗಿ

ಖಾಸಗಿ ಚಾನಲ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ 'ಬೆಂಗ್ಳೂರ್ ಬೆಣ್ಣೆ ದೋಸೆ', ಕಾರ್ಯಕ್ರಮದಿಂದ ಕೆಲವು ಕಾರಣಗಳಿಂದ ನಟಿ ನೀತು ಅವರು ಹೊರ ನಡೆದಿದ್ದಾರೆ.
ಇದೀಗ ಕಾರ್ಯಕ್ರಮದಿಂದ ಹೊರ ನಡೆದಿರುವ ಬಗ್ಗೆ ನಟಿ ನೀತು ಅವರು ತಮ್ಮ ಫೇಸ್ ಬುಕ್ಕಿನಲ್ಲಿ ಸ್ಪಷ್ಟ ಮಾಹಿತಿ ನೀಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಕೆಲವು ಅನಿವಾರ್ಯ ಕಾರಣಗಳಿಂದ ಈ ಕಾಮಿಡಿ ಶೋ ಕಾರ್ಯಕ್ರಮದ ಒಂದು ಭಾಗವಾಗಲು ನನ್ನಿಂದ ಸಾಧ್ಯವಾಗುತ್ತಿಲ್ಲ, ಆದ್ದರಿಂದ 'ಬೆಂಗ್ಳೂರ್ ಬೆಣ್ಣೆ ದೋಸೆ' ಕಾರ್ಯಕ್ರಮದಿಂದ ಹೊರನಡೆಯುತ್ತಿದ್ದೇನೆ ಎಂದು ನಟಿ ನೀತು ಅವರು ಫೇಸ್ ಬುಕ್ಕಿನಲ್ಲಿ ಹೇಳಿದ್ದಾರೆ.
"ಇಲ್ಲಿಯವರೆಗೂ ನನಗೆ ಎಲ್ಲಾ ರೀತಿಯಲ್ಲೂ ಬೆಂಬಲ, ಸಲಹೆ ನೀಡುವ ಮೂಲಕ ನನ್ನನ್ನು ಹಾರೈಸಿದ ನನ್ನ ಎಲ್ಲಾ ಹಿತೈಷಿಗಳಿಗೂ ನಾನು ಈ ಕಾರ್ಯಕ್ರಮದಿಂದ ಹೊರನಡೆಯುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತಿದ್ದೇನೆ,['ಬೆಣ್ಣೆ ದೋಸೆ' ಹೋಟೆಲ್ ನಲ್ಲಿ ಮಾಲಾಶ್ರೀ ಆಟೋ ಸವಾರಿ]
ಈಗಾಗಲೇ ಕಾರ್ಯಕ್ರಮದ 4 ಎಪಿಸೋಡ್ ಗಳು ಕಂಪ್ಲೀಟ್ ಆಗಿದ್ದು, ಅದರಲ್ಲಿ ನಾನು ಕಾಣಿಸಿಕೊಂಡಿದ್ದೆ, ಇನ್ನು ಮುಂದಿನ ಎಪಿಸೋಡ್ ಗಳಲ್ಲಿ ನಾನು ಕಾಣಿಸಿಕೊಳ್ಳುತ್ತಿಲ್ಲ. ಇಲ್ಲಿಯವರೆಗೂ ಈ ಕಾರ್ಯಕ್ರಮವನ್ನು ನೋಡಿಕೊಂಡು ಬಂದಿರುವ ಎಲ್ಲಾ ವೀಕ್ಷಕರಿಗೂ ನನ್ನ ಧನ್ಯವಾದಗಳು". ಎಂದು ನೀತು ಅವರು ತಮ್ಮ ಫೇಸ್ ಬುಕ್ಕಿನಲ್ಲಿ ಹಾಕಿಕೊಂಡಿದ್ದಾರೆ.
ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ 'ಬೆಂಗ್ಳೂರ್ ಬೆಣ್ಣೆ ದೋಸೆ' ಕಾಮಿಡಿ ಕಾರ್ಯಕ್ರಮಕ್ಕೆ ನಟ ಅರುಣ್ ಸಾಗರ್ ಅವರು ನಿರ್ಮಾಪಕರಾಗಿದ್ದು, ನರ್ಸ್ ಜಯಲಕ್ಷ್ಮಿ ಮುಂತಾದವರು ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.