Breaking News
recent

ಪವರ್ ಸ್ಟಾರ್ ಗಾಯನದ ಆದಾಯ 'ಚಾರಿಟೇಬಲ್ ಟ್ರಸ್ಟ್'ಗೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕೇವಲ ನಟರಾಗಿ ಮಾತ್ರವಲ್ಲದೇ ಗಾಯಕರಾಗಿಯೂ ಕನ್ನಡ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡವರು. ಈಗಾಗಲೇ ಸುಮಾರು 45ಕ್ಕೂ ಹೆಚ್ಚು ಚಿತ್ರಕ್ಕೆ, ಹಾಡುಗಳನ್ನು ಪುನೀತ್ ರಾಜ್ ಕುಮಾರ್ ಅವರು ಹಾಡಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ಪ್ರತಿಯೊಂದು ಚಿತ್ರಕ್ಕೂ ಪುನೀತ್ ಅವರು ತಮ್ಮ ಧ್ವನಿ ನೀಡಿದ್ದು, ಸದ್ಯಕ್ಕೆ ನಿರ್ಮಾಪಕರಿಗೆ ಪವರ್ ಸ್ಟಾರ್, ಪವರ್ ಫುಲ್ ವಾಯ್ಸ್ ಲಕ್ಕಿ ವಾಯ್ಸ್ ಆಗಿದೆ.[ಅಣ್ಣನ ಚಿತ್ರದ ಹಾಡಿಗೆ ಮುದ್ದು ತಮ್ಮನಿಂದ, ಪವರ್ ಫುಲ್ ವಾಯ್ಸ್]
ಇದೀಗ ಪುನೀತ್ ಅವರ ಧ್ವನಿಗೆ ಬೇಡಿಕೆ ಹೆಚ್ಚುತ್ತಿದ್ದು, ಬಹುತೇಕ ಸಿನಿಮಾಗಳಲ್ಲಿ ಕನಿಷ್ಠ ಒಂದು ಹಾಡಿಗಾದರೂ ಪವರ್ ಸ್ಟಾರ್ ಪುನೀತ್ ಅವರು ತಮ್ಮ ಧ್ವನಿ ನೀಡುತ್ತಾರೆ.[ರಾಮ್ ಲೀಲಾ ಹಾಡಿಗೆ ಪವರ್ ಸ್ಟಾರ್ ಪವರ್ ಫುಲ್ ವಾಯ್ಸ್]
ಇನ್ನು ತಮ್ಮ ಗಾಯನದಿಂದ ಬರುವ ಸಂಭಾವನೆಯನ್ನು ಪುನೀತ್ ಅವರು ಸಾಮಾಜಿಕ ಕಾರ್ಯಗಳಿಗಾಗಿ ವಿನಿಯೋಗಿಸುತ್ತಿದ್ದಾರೆ. ವರನಟ ಡಾ. ರಾಜ್ ಕುಮಾರ್ ಅವರ ಹೆಸರಿನಲ್ಲಿ ನಡೆಯುತ್ತಿರುವ ಚಾರಿಟೇಬಲ್ ಟ್ರಸ್ಟ್ ಗೆ ಪುನೀತ್ ಅವರು ಹಣ ನೀಡುತ್ತಿದ್ದಾರೆ.
ತಮ್ಮ ಪ್ರೀತಿಯ ಅಪ್ಪಾಜಿ ಹೆಸರಿನಲ್ಲಿ ನಡೆಯುತ್ತಿರುವ ಟ್ರಸ್ಟ್ ಗೆ ಪುನೀತ್ ಅವರು ತಮ್ಮ ಗಾಯನದಿಂದ ಬರುವ ಆದಾಯವನ್ನು ನೀಡುತ್ತಿದ್ದು, ಈ ಆದಾಯದಿಂದ ನೆರವಿನ ಅಗತ್ಯ ಇರುವ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸಲಾಗುತ್ತಿದೆ.[ನೀನಾಸಂ ಸತೀಶ್ 'ರಾಕೆಟ್'ಗೆ ಪುನೀತ್ ಪವರ್]
ಈಗಾಗಲೇ ಚಾರಿಟೇಬಲ್ ಟ್ರಸ್ಟ್ ನಿಂದ ನೆರವು ಪಡೆದಿರುವ ವಿದ್ಯಾರ್ಥಿಯೊಬ್ಬ ಡಾಕ್ಟರ್ ಆಗಿದ್ದು, ಈ ವರ್ಷ ಯುವತಿಯೊಬ್ಬಳು ಎಂ.ಟೆಕ್ ಸೇರಲು ಟ್ರಸ್ಟ್ ನೆರವಾಗಿದೆ.
ಒಟ್ನಲ್ಲಿ ಡೌನ್ ಟು ಅರ್ಥ್ ನೇಚರ್ ನ ಪುನೀತ್ ಅವರು ತಮ್ಮ ನಟನೆಯ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದು ಮಾತ್ರವಲ್ಲದೇ, ಇದೀಗ ಸಮಾಜ ಸೇವಕನಾಗಿಯೂ ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಪಡೆದುಕೊಂಡಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.