Breaking News
recent

ವರ್ಷ ಓಡಿದ್ರೂ ಲೈಫಲ್ಲಿ ಕೆಂಡಸಂಪಿಗೆ ನೋಡಲ್ಲ ಅಂದೋರು ಯಾರು?

"ನೀನು ಮಾಡಿರೋ 'ಕೆಂಡಸಂಪಿಗೆ' 25 ದಿನ ಅಲ್ಲ 25 ವಾರ ಓಡಿದ್ರೂ ನಾನು ನೋಡಲ್ಲ, ಯಾಕೋ ನೋಡಲ್ಲ, ಯಾಕೆ ಅಂದ್ರೆ ನನಗೆ ಇಷ್ಟ ಇಲ್ಲ ನೋಡೋದಿಕ್ಕೆ. 'ದುನಿಯಾ' ಅಂತ ಒಂದೊಳ್ಳೆ ಸಿನಿಮಾ ನನಗೆ ಮಾಡಿ ಯಾರೋ ಹೊಸಬರಿಗೆ ಎಲ್ಲಾ ನೀವು ಒಳ್ಳೊಳ್ಳೆ ಸಿನಿಮಾ ಮಾಡ್ತಾ ಇದ್ರೆ ನನಗೂ ಹೊಟ್ಟೆ ಉರಿಯಲ್ವಾ"?.
'ನನಗೂ ಹೊಟ್ಟೆ ಉರಿಯುತ್ತೆ ಜೊತೆಗೆ ನೋಡಬಾರದು ಅನ್ನೋ ಆಸೆ ತುಂಬಾನೇ ಜಾಸ್ತಿ ಇದೆ. ಈ ಸಿನಿಮಾ ಒಂದು ವರ್ಷ ಓಡಿದ್ರೂನೂ ನನ್ನ ಲೈಫಲ್ಲಿ ನನ್ನ ಮಕ್ಕಳಿಗೂ ಕರ್ಕೊಂಡು ಹೋಗಿ ಈ ಸಿನಿಮಾ ನಾನು ತೋರಿಸಲ್ಲ'.
ನಿನ್ಗೆ ಇವಾಗ ಏನಾಗಬೇಕು?, ನನ್ಗೂ ಒಂದು ಸಿನಿಮಾ ಮಾಡು, ನಿನ್ನ ಎಲ್ಲಾ ಇಡೀ ಆಲ್ ಓವರ್ ವರ್ಲ್ಡ್ ಲ್ಲಿ ರಿಲೀಸ್ ಮಾಡ್ತಾ ಇದ್ದೀಯಾ, ಅದೇನೋ ಆಸ್ಟ್ರೇಲಿಯಾಕ್ಕೂ ಕಳಿಸ್ತಾ ಇದ್ದೀಯಾ, ಅಯ್ಯಯ್ಯೋ ಅದನ್ನೆಲ್ಲ ನೋಡಿ ನನ್ಗೂ ಅನ್ನಿಸುತ್ತೆ 'ದುನಿಯಾ' ಮಾಡಿದವ್ರು ನಾವು ಮತ್ತೊಂದು ಸಿನಿಮಾ ಯಾಕಾಗ್ತಾ ಇಲ್ಲ ಅಂತ.
ನನಗೆ ಪರ್ಸನಲಿ ನೋಡೋಕೆ ಇಷ್ಟ ಇಲ್ಲ, ನಾನು ನೋಡೋದು ಇಲ್ಲ. ಆದಷ್ಟು ಜಲ್ದಿ ನನಗೆ ಸಿನಿಮಾ ಮಾಡಿದ್ರೆ ಮಾತ್ರ, ಆವಾಗ ನೀನು ಮಾಡಿದ ಸಿನಿಮಾ ಮಿಕ್ಕಿದ್ದು ಎಲ್ಲಾ ನಾನು ನೋಡ್ತಿನಿ. ಇಲ್ಲಾಂದ್ರೆ ಅಲ್ಲಿಯವರೆಗೂ ನನಗೆ ನಿನ್ನ ಯಾವುದೇ ಸಿನಿಮಾ ನೋಡೋಕೆ ನನ್ಗೆ ಇಷ್ಟ ಇಲ್ಲ.
ಹೋ ನಿನಗೆ ನಾನು ಸಿನಿಮಾ ಮಾಡಿದ್ರೆ ನನ್ನ ಸಿನಿಮಾ ನೋಡ್ತೀಯಾ?, ಹಡ್ರೆಂಡ್ ಪರ್ಸೆಂಟ್ ನೋಡ್ತಿನಿ. ಯಾಕಂದ್ರೆ ನನಗೆ ಕೇಳೋ ಅಧಿಕಾರ ಇದೆ ನೀನು ಮಾಡ್ಲೇ ಬೇಕು.
'ಕೆಂಡಸಂಪಿಗೆ' ಆಯ್ತು, ಮುಂದೆ 'ಕಾಗೆ ಬಂಗಾರ'.!

Kendasampige Kannada Movie Full Video Song

Kendasampige (2015) Kannada Movie Mp3 Songs Download

Kendasampige (2015) Kannada Movie HD Teaser
ಸರಿ ಮಾಡ್ತೀನಿ. ಆದಷ್ಟು ಜಲ್ದಿ ಶುರು ಮಾಡು
ಇಷ್ಟೆಲ್ಲಾ ಮಾತಾಡಿರೋದು ಯಾರು?. ಈ ಸಂಭಾಷಣೆ ಯಾರ ನಡುವೆ ನಡೆದಿದೆ ಅಂತ ನೋಡೋ ಕುತೂಹಲ ಇದ್ರೆ ಈ ವಿಡಿಯೋ ನೋಡಿ..
ಹೌದು ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್, ಬಾಕ್ಸಾಫೀಸ್ ನಲ್ಲಿ ಉತ್ತಮ ಗಳಿಕೆ ಮಾಡುತ್ತಿರುವ 'ಕೆಂಡಸಂಪಿಗೆ' ನಿರ್ದೇಶಕ ದುನಿಯಾ ಸೂರಿ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಅವರೊಂದಿಗೆ ನಡೆದಿರುವ ಸಂಭಾಷಣೆಯ ಒಂದು ಫನ್ನಿ ವಿಡಿಯೋ ನೋಡಿ ಎಂಜಾಯ್ ಮಾಡಿದ್ರಲ್ವಾ ನೀವು.
ಅಂದಹಾಗೆ 'ದುನಿಯಾ' ಚಿತ್ರದ ಮೂಲಕ ಹೀರೋ ಆಗಿ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಕಾಲಿಟ್ಟ ದುನಿಯಾ ವಿಜಯ್ ಅವರಿಗಿರುವ ನಟನಾ ಕೌಶಲ್ಯವನ್ನು ಕನ್ನಡ ಚಿತ್ರರಂಗಕ್ಕೆ ತೋರಿಸಿಕೊಟ್ಟ ನಿರ್ದೇಶಕ ದುನಿಯಾ ಸೂರಿ ಅವರು ರೀಸೆಂಟ್ ಹಿಟ್ 'ಕೆಂಡಸಂಪಿಗೆ'ಯಲ್ಲೂ ಹೊಸಬರನ್ನೇ ಪರಿಚಯಿಸಿದ್ದಾರೆ.
ಇದೀಗ ಈ ವಿಡಿಯೋ ದಲ್ಲಿ ದುನಿಯಾ ವಿಜಯ್ ಅವರು ಚಿತ್ರದ ಬಗ್ಗೆ ಪಾಸಿಟಿವ್ ರೆಸ್ಪಾನ್ಸ್ ಕೊಟ್ಟಿದ್ದು, ಉತ್ತಮ ಬೆಳವಣಿಗೆ, ಜೊತೆಗೆ ಇಲ್ಲಿ ದುನಿಯಾ ವಿಜಿ ಅವರು ಚಿತ್ರವನ್ನು ಒಳ್ಳೆ ಸಿನಿಮಾ ಎಂದಿದ್ದಾರೆ. ಒಟ್ನಲ್ಲಿ ಇವರಿಬ್ಬರ ಜುಗಲ್ ಬಂದಿಯಲ್ಲಿ ಮತ್ತೊಮ್ಮೆ ಒಂದೊಳ್ಳೆ ಸಿನಿಮಾ ಬಂದ್ರೂ ಬರಬಹುದು ಕಾದು ನೋಡೋಣ.
Fresh Kannada

Fresh Kannada

No comments:

Post a Comment

Google+ Followers

Powered by Blogger.