Breaking News
recent

ತೆಲುಗಿನಲ್ಲೂ ಸೌಂಡ್ ಮಾಡಲಿರುವ ದರ್ಶನ್ ರ, ಸಂಗೊಳ್ಳಿ ರಾಯಣ್ಣ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ನಟಿ ನಿಖಿತಾ ತುಕ್ರಾಲ್ ಲೀಡ್ ರೋಲ್ ನಲ್ಲಿ ನಟಿಸಿದ್ದ ಐತಿಹಾಸಿಕ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' 2012ರಲ್ಲಿ ತೆರೆ ಕಂಡು ಸೂಪರ್ ಡೂಪರ್ ಹಿಟ್ ಪಡೆದುಕೊಂಡಿದ್ದು, ನಿಮಗೆ ಗೊತ್ತೇ ಇದೆ. ಇದೀಗ ದರ್ಶನ್ ಅವರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಟಾಲಿವುಡ್ ಕ್ಷೇತ್ರದಲ್ಲಿ ಸದ್ದು ಮಾಡೋಕೆ ಹೊರಟಿದೆ.
ತೆಲುಗಿನಲ್ಲೂ ಸೌಂಡ್ ಮಾಡಲಿರುವ ದರ್ಶನ್ ರ, ಸಂಗೊಳ್ಳಿ ರಾಯಣ್ಣ

ಹೌದು ನಿರ್ದೇಶಕ ನಾಗಣ್ಣ ಆಕ್ಷನ್-ಕಟ್ ಹೇಳಿದ್ದ ಕ್ರಾಂತಿವೀರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರ ತೆಲುಗು ಭಾಷೆಗೆ ಡಬ್ ಆಗುತ್ತಿದೆ. ಸದ್ಯಕ್ಕೆ 'ಬಾಹುಬಲಿ' ಹಾಗೂ 'ರುದ್ರಮದೇವಿ'ಯಂತಹ ಐತಿಹಾಸಿಕ ಕಥೆಯುಳ್ಳ ಸಿನಿಮಾಗಳು ಟಾಲಿವುಡ್ ಕ್ಷೇತ್ರದಲ್ಲಿ ಯಶಸ್ಸಿನ ನಗೆ ಬೀರುತ್ತಿರುವುದರಿಂದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ನಿಗೂ ಒಳ್ಳೆ ರೆಸ್ಪಾನ್ಸ್ ಸಿಗಬಹುದು ಅನ್ನೋ ನಿರೀಕ್ಷೆ ಚಿತ್ರದ ನಿರ್ಮಾಪಕ ಆನಂದ್ ಅವರಿಗಿದೆ.
ಸದ್ಯಕ್ಕೆ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾದ ತೆಲುಗು ವರ್ಷನ್ ನ ಡಬ್ಬಿಂಗ್ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಟಾಲಿವುಡ್ ನಲ್ಲೂ ಸೌಂಡ್ ಮಾಡಲಿದ್ದಾರೆ.
ಅಂದ ಹಾಗೆ ತೆಲುಗಿನಲ್ಲಿ ಈ ಚಿತ್ರ ತೆರೆ ಕಾಣುತ್ತಿರುವುದಕ್ಕೆ ದರ್ಶನ್ ಅಭಿಮಾನಿಗಳು ಸಖತ್ ಖುಷ್ ಆಗಿದ್ದಾರಂತೆ. ಇನ್ನು ಚಿತ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರ ವಹಿಸಿದ್ದ ನಟಿ ಜಯಪ್ರದಾ ಅವರು ತೆಲುಗಿನಲ್ಲಿ ತಮ್ಮ ಪಾತ್ರಕ್ಕೆ ಸ್ವತಃ ತಾವೇ ಡಬ್ ಮಾಡಲಿದ್ದಾರಂತೆ. ಅಲ್ಲದೇ ಚಿತ್ರ ತೆಲುಗು ಭಾಷೆಯಲ್ಲಿ ತೆರೆ ಕಾಣುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಕನ್ನಡದಲ್ಲಿ ಸುಮಾರು 20 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿದ್ದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ರಾಜ್ಯಾದ್ಯಂತ ಒಂದು ವರ್ಷಗಳ ಕಾಲ ಭರ್ಜರಿ ಪ್ರದರ್ಶನ ಕಂಡಿರುವುದರಿಂದ, ತೆಲುಗಿನಲ್ಲೂ ಈ ಸಿನಿಮಾವನ್ನು ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.