Breaking News
recent

ನವೆಂಬರಲ್ಲಿ ತರ್ಲೆ ನನ್ ಮಕ್ಳು ಬರ್ತಿದ್ದಾರೆ ಹುಷಾರ್!

ಸ್ಯಾಂಡಲ್ವುಡ್ನಲ್ಲಿ ತರ್ಲೆ ನನ್ಮಕ್ಳು ಅನ್ನೋ ಸಿನಿಮಾ ಶುರುವಾಗಿ ಎರಡು ವರ್ಷ ಆಯ್ತು. 
ನವೆಂಬರಲ್ಲಿ ತರ್ಲೆ ನನ್ ಮಕ್ಳು ಬರ್ತಿದ್ದಾರೆ ಹುಷಾರ್!
ಸಿನಿಮಾ ಬೆಂಗಳೂರಲ್ಲಿ ಸೆನ್ಸಾರ್ ಆಗಿ ಸಿಕ್ಕಾಪಟ್ಟೆ ಕಟ್ಸ್ ಯರ್ರಾಬಿರ್ರಿ ಮ್ಯೂಟ್ಸ್ ಜೊತೆಗೆ ಎ ಸರ್ಟಿಫಿಕೇಟನ್ನೂ ತೊಗೊಂಡಿತ್ತು. ಅದಾದ ನಂತ್ರ ದೆಹಲಿಯ ಟ್ರಿಬ್ಯೂನಲ್ ಮುಂದೆ ಚಿತ್ರ ಮರು ಸೆನ್ಸಾರ್ಗೆ ಕ್ಯೂ ನಿಂತಿತ್ತು.

ಇತ್ತೀಚೆಗೆ ಕೇವಲ ಕೆಲವೇ ಕಟ್ಸ್ ಒಂದೆರೆಡು ಮ್ಯೂಟ್ಸ್ಗಳೊಂದಿಗೆ ಈಸಿಯಾಗಿ ಪಾಸಾಗಿದೆ. ಅಂದಹಾಗೆ ಚಿತ್ರದ ನಿರ್ದೇಶಕ ಪ್ರೇಮ್ ಶಿಷ್ಯ ರಾಕೇಶ್ ನಿಟ್ಟುಸಿರುಬಿಟ್ಟಿದ್ದಾರೆ. ತರ್ಲೆ ನನ್ಮಕ್ಳು ಚಿತ್ರಕ್ಕೆ ಮುಹೂರ್ತ ಇಟ್ಟಿದ್ದು ರಿಯಲ್ ಸ್ಟಾರ್ ಉಪ್ಪಿ, ನವರಸ ನಾಯಕ ಜಗ್ಗೇಶ್. ಈಗ ಈ ಇಬ್ಬರೂ ಸಂಬಂಧಕ್ಕೆ ಎಳ್ಳುನೀರು ಬಿಟ್ಟಿದ್ದಾಗಿದೆ.[ರವಿಚಂದ್ರನ್ ಕಾಪಿ ಮಾಡಿರುವ 'ತರ್ಲೆ ನನ್ಮಕ್ಳು'ಗೆ ಸೆನ್ಸಾರ್ ತರ್ಲೆ]

ಆದ್ರೆ ತರ್ಲೆ ನನ್ಮಕ್ಳು ಅನ್ನೋ ಮೋಡಿ ಮಾಡೋ ಟೈಟಲ್ನಲ್ಲಿ ಚಿತ್ರ ಬರ್ತಿದೆ ಅಂದ್ರೆ ಅದಕ್ಕೆ ತಕ್ಕದಾದ ಕಥೆ ಇರ್ಬೇಕು. ಇನ್ನು ಜಗ್ಗೇಶ್ ಪುತ್ರ ಅಭಿನಯಿಸಿದ್ದಾರೆ ಅಂದಮೇಲೆ ಚಿತ್ರದ ಬಗ್ಗೆ ನಿರೀಕ್ಷೆ ಡಬಲ್ ಆಗಿದೆ. ಆದ್ರೆ ನಿಜ್ವಾಗ್ಲು ಚಿತ್ರದ ಬಗ್ಗೆ ಹೊಸದೇ ಮಾತುಗಳು ಗಾಂಧಿನಗರದಲ್ಲಿ ಕೇಳಿಬರ್ತಿವೆ.

ಈ ಕೆಟ್ಟ ಚಿತ್ರವನ್ನು ನೋಡಿ ನೀವು ಬಯ್ಕೊಳ್ಳೋದು ಗ್ಯಾರಂಟಿ ಅಂತ ಸಾತ್ವಿಕರು ಮಾತಾಡಿಕೊಳ್ತಿದ್ರೆ, ಚಿತ್ರ ಇಷ್ಟು ಲೇಟಾಗೋಕೆ ಬೇರೆ ತರ್ಲೆಗಳು ಕಾರಣ ಅಂತಿದ್ದಾರೆ ನಿರ್ದೇಶಕ ರಾಕೇಶ್. ಏನು ನಿಜವಾದ ಮ್ಯಾಟ್ರು. ನಿಜವಾದ ತರ್ಲೆ ಏನು ಅಂಥ ನೀವೇ ನೋಡ್ತಾ ಹೋಗಿ...
Fresh Kannada

Fresh Kannada

No comments:

Post a Comment

Google+ Followers

Powered by Blogger.