Breaking News
recent

ಹೊಸ ಚಿತ್ರ 'ಕರುಣಾ-ನಿಧಿ'. ಇದು ಯಾರ ಕಥೆ..?

ಕನ್ನಡ ನಟ ಮೋಹನ್ ನಟಿಸಿ, ನಿರ್ಮಿಸಿ, ನಿರ್ದೇಶಿಸಿದ್ದ 'ಮಳೆ ನಿಲ್ಲುವವರೆಗೆ' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಬ್ಬರ ಸೃಷ್ಟಿಸಲಿಲ್ಲ. ಆದರೂ ಚಿಂತೆ ಇಲ್ಲ. ನಟ ಮೋಹನ್ ಹೊಸ ಸಿನಿಮಾ ಮಾಡುವ ಮನಸ್ಸು ಮಾಡಿದ್ದಾರೆ.
ಹೊಸ ಚಿತ್ರ 'ಕರುಣಾ-ನಿಧಿ'. ಇದು ಯಾರ ಕಥೆ..?


ಹಾಗೆ ಮೋಹನ್ ಕಾಣಿಸಿಕೊಳ್ಳುತ್ತಿರುವ ಹೊಸ ಚಿತ್ರದ ಹೆಸರು 'ಕರುಣಾ-ನಿಧಿ'. ಹೆಸರು ಕೇಳಿದ ಕೂಡಲೆ ಇದು ತಮಿಳುನಾಡು ಮಾಜಿ ಮುಖ್ಯಮಂತ್ರಿಯ ಜೀವನಚರಿತ್ರೆ ಆಧರಿಸಿದ ಸಿನಿಮಾನಾ ಅಂತ ಪ್ರಶ್ನೆ ಕೇಳ್ಬೇಡಿ.

ತಮಿಳುನಾಡು ಮಾಜಿ ಸಿ.ಎಂ ಕರುಣಾನಿಧಿಗೂ, 'ಕರುಣಾ-ನಿಧಿ' ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಕರುಣಾ ಮತ್ತು ನಿಧಿ ಅನ್ನುವ ಇಬ್ಬರು ವ್ಯಕ್ತಿಗಳ ನಡುವಿನ ಕಥೆ 'ಕರುಣಾ-ನಿಧಿ'. [ನಿರ್ದೇಶಕ, ಬರಹಗಾರ ಎಜಿ ಶೇಷಾದ್ರಿ ಸಂದರ್ಶನ]

ಅಂದ್ಹಾಗೆ, ಮೋಹನ್ ಇಲ್ಲಿ ಬರೀ ನಟನಾಗಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಕಿರುತೆರೆಯ ಪ್ರಸಿದ್ಧ ಬರಹಗಾರ ಹಾಗು ನಿರ್ದೇಶಕ ಎ.ಜಿ.ಶೇಷಾದ್ರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

ಶೀರ್ಷಿಕೆ ಮಾತ್ರದಿಂದಲೇ ಸೌಂಡ್ ಮಾಡುವುದಕ್ಕೆ ಶುರುಮಾಡಿರುವ 'ಕರುಣಾ-ನಿಧಿ' ಚಿತ್ರದ ಬಗ್ಗೆ ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಇಷ್ಟು. ಹೆಚ್ಚಿನ ಮಾಹಿತಿಗೆ 'ಫ್ರೆಶ್ ಕನ್ನಡ' ಓದುತ್ತಿರಿ.
Fresh Kannada

Fresh Kannada

No comments:

Post a Comment

Google+ Followers

Powered by Blogger.