Breaking News
recent

45 ಲಕ್ಷ ಉಳಿಸಲು 'ಬೆತ್ತನಗೆರೆ' ನಿರ್ದೇಶಕರು ಮಾಡಿದ ಸಾಹಸ ನಿಮ್ಗೊತ್ತಾ?

ರಿಯಲ್ ರೌಡಿಗಳಾದ ಬೆತ್ತನಗೆರೆ ಸೀನ ಮತ್ತು ಶಂಕ್ರನ ರಕ್ತಸಿಕ್ತ ಅಧ್ಯಾಯ 'ಬೆತ್ತನಗೆರೆ' ಚಿತ್ರಕ್ಕೆ ಸೆನ್ಸಾರ್ ಅಂಗಳದಿಂದ 139 ಕಟ್ಸ್ ಸಿಕ್ಕಿದೆ, 149 ಕಡೆ ಕತ್ರಿ ಪ್ರಯೋಗ ಮಾಡಲಾಗಿದೆ ಅಂತೆಲ್ಲಾ ಸುದ್ದಿಯಾಗಿತ್ತು.
ಇದರೊಂದಿಗೆ 'ಬೆತ್ತನಗೆರೆ' ಚಿತ್ರದ ಗರಮಾಗರಂ ಐಟಂ ಸಾಂಗಿಗೂ ಸೆನ್ಸಾರ್ ಮಂಡಳಿ ಕೆಂಪು ಬಾವುಟ ತೋರಿಸಿತ್ತು. 'ಇಡೀ ಸಾಂಗ್ ನ ಕಟ್ ಮಾಡಿ' ಅಂತ ಸೂಚನೆ ನೀಡಿತ್ತು.
ಇದರಿಂದ ನಿರ್ಮಾಪಕ ಮತ್ತು ನಿರ್ದೇಶಕರು ಬೇಸರಗೊಂಡರು. 45 ಲಕ್ಷ ರೂಪಾಯಿ ಖರ್ಚು ಮಾಡಿ, ಅದ್ದೂರಿ ಡಾಬಾ ಸೆಟ್ ಹಾಕಿ ರೆಡಿಮಾಡಿದ್ದ ಸಾಂಗ್ ಅದು. ಅದನ್ನ ಒಂದೇ ನಿಮಿಷಕ್ಕೆ ಕತ್ತರಿಸಿ ಬಿಸಾಕಿ ಅಂದ್ರೆ ಯಾರು ತಾನೆ ಸುಮ್ಮನೆ ಇರ್ತಾರೆ.
ಒಂದಲ್ಲ ಎರಡಲ್ಲ...ಬರೋಬ್ಬರಿ 45 ಲಕ್ಷ ರೂಪಾಯಿಯನ್ನ ನೀರಲ್ಲಿ ಹೋಮ ಮಾಡಿದಂತಾಗುತ್ತಲ್ಲಾ ಅಂತ ನಿರ್ದೇಶಕರು ಹೊಸ ಪ್ಲಾನ್ ಮಾಡಿದರು. ಸೆನ್ಸಾರ್ ನವರಿಗೆ ಹಾಡಲ್ಲಿದ್ದ ಸಾಹಿತ್ಯ ''ಬಂಡಿ ಬಂಡಿ ಜಾರಬಂಡಿ...ಸೊಂಟ ಜಾರಬಂಡಿ'' ಬಗ್ಗೆ ಪ್ರಾಬ್ಲಂ ಇತ್ತು. ಅದಕ್ಕೆ ಇಡೀ ಹಾಡಿನ ಸಾಹಿತ್ಯವನ್ನೇ ಚೇಂಜ್ ಮಾಡಿಬಿಟ್ಟಿದ್ದಾರೆ ನಿರ್ದೇಶಕ ಮೋಹನ್. ['ಬೆತ್ತನಗೆರೆ' ಸೀನನ್ನ ಕೊಚ್ಚಿ ಹಾಕಿದ ಸೆನ್ಸಾರ್ ಮಂಡಳಿ]
ಹೊಸ ಹಾಡನ್ನ ಮತ್ತೆ ಶೂಟ್ ಮಾಡಿದ್ರೆ ಲಾಸ್ ಗ್ಯಾರೆಂಟಿ. ಹೀಗಾಗಿ ''ಬಂಡಿ ಬಂಡಿ..'' ಹಾಡಿಗೆ ಸಾಹಿತ್ಯ ಬರೆದಿದ್ದ ನಾಗೇಂದ್ರ ಪ್ರಸಾದ್ ಅವರಿಂದ ಹೊಸ ಸಾಹಿತ್ಯ ಬರೆಸಿದ್ದಾರೆ. ಈಗಾಗಲೇ ಹಾಡಿನ ಚಿತ್ರೀಕರಣ ಮುಗಿದಿರುವುದರಿಂದ, ಅದೇ ಹಾಡಿನ ಟ್ಯೂನ್ ಗೆ ಲಿಪ್ ಸಿಂಕ್ ಆಗುವ ಹಾಗೆ ಸಾಹಿತ್ಯ ಬರೆದು ಮ್ಯಾಚ್ ಮಾಡಲಾಗಿದೆ.
''45 ಲಕ್ಷ ರೂಪಾಯಿ ಖರ್ಚು ಮಾಡಿ ರಿಚ್ ಸಾಂಗ್ ಮಾಡಿದ್ವಿ. ಸೆನ್ಸಾರ್ ನವ್ರು ಕಟ್ ಮಾಡಿ ಅಂದ್ರು. ಅಷ್ಟು ಹಣವನ್ನ ವೇಸ್ಟ್ ಮಾಡೋಕೆ ಆಗುತ್ತಾ. ಅದಕ್ಕೆ ಸಾಹಿತ್ಯ ಚೇಂಜ್ ಮಾಡಿ, ಲಿಪ್ ಸಿಂಕ್ ಆಗುವ ಹಾಗೆ ಹೊಸ ಸಾಹಿತ್ಯ ಬರೆಸಿದ್ವಿ. ತುಂಬಾ ಕಷ್ಟ ಆಯ್ತು. ಸಾಹಸ ಮಾಡಿದ ಹಾಗೆ ಆಯ್ತು. ಈಗಾಗಲೇ ಶೂಟ್ ಮಾಡಿರುವ ಹಾಡಿಗೆ, ಹೊಸ ಸಾಹಿತ್ಯ ಬರೆಯುವುದು ಸುಲಭದ ಮಾತಲ್ಲ. ನಾಗೇಂದ್ರ ಪ್ರಸಾದ್ ರವರು ಮೂರು ದಿನಗಳನ್ನು ತೆಗೆದುಕೊಂಡು ಹಾಡು ಬರೆದುಕೊಟ್ಟಿದ್ದಾರೆ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ನಿರ್ದೇಶಕ ಮೋಹನ್ ತಿಳಿಸಿದರು.
ಹಳೆ ಹಾಡಿನ ಹೊಸ ಸಾಹಿತ್ಯಕ್ಕೆ ಸೆನ್ಸಾರ್ ಮಂಡಳಿ ಗ್ರೀನ್ ಸಿಗ್ನಲ್ ನೀಡಿದೆ. ಅಲ್ಲಿಗೆ, ನಿರ್ಮಾಪಕರ 45 ಲಕ್ಷ ಉಳಿಸಿದ ಖ್ಯಾತಿ ನಿರ್ದೇಶಕರಿಗೆ ಸಲ್ಲುತ್ತೆ. ಅಂದ್ಹಾಗೆ, ಸುಮಂತ್ ಶೈಲೇಂದ್ರ, ಅಕ್ಷಯ್ ನಟಿಸಿರುವ ಚಿತ್ರ ಇದು. ಈ ತಿಂಗಳಾಂತ್ಯದಲ್ಲಿ 'ಬೆತ್ತನಗೆರೆ' ರಿಲೀಸ್ ಆಗಲಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.