Breaking News
recent

ಅಕ್ಟೋಬರ್ 30ಕ್ಕೆ ರಕ್ತಸಿಕ್ತ 'ಬೆತ್ತನಗೆರೆ' ತೆರೆ ಮೇಲೆ

ರಿಯಲ್ ರೌಡಿಶೀಟರ್ ಬೆತ್ತನಗೆರೆ ಸೀನನ ನಿಜ ಜೀವನಚರಿತ್ರೆಯಾಧರಿತ 'ಬೆತ್ತನಗೆರೆ' ಸಿನಿಮಾ ಈ ಶುಕ್ರವಾರ (ಅಕ್ಟೋಬರ್ 30) ದಂದು ಕರ್ನಾಟಕದಾದ್ಯಂತ ಎಲ್ಲೆಡೆ ಭರ್ಜರಿಯಾಗಿ ತೆರೆ ಕಾಣುತ್ತಿದೆ.
ಅಕ್ಟೋಬರ್ 30ಕ್ಕೆ ರಕ್ತಸಿಕ್ತ 'ಬೆತ್ತನಗೆರೆ' ತೆರೆ ಮೇಲೆ

ಚೊಚ್ಚಲ ನಿರ್ದೇಶಕ ಮೋಹನ್ ಗೌಡ ಆಕ್ಷನ್-ಕಟ್ ಹೇಳಿರುವ 'ಬೆತ್ತನಗೆರೆ' ಚಿತ್ರದಲ್ಲಿ ರೌಡಿ ಶೀಟರ್ ಸೀನನ ಪಾತ್ರದಲ್ಲಿ ಸುಮಂತ್ ಶೈಲೇಂದ್ರ ಅವರು ಕಾಣಿಸಿಕೊಂಡಿದ್ದು, ಸೀನನ ಅಣ್ಣ ಶಂಕ್ರನ ಪಾತ್ರದಲ್ಲಿ ನಟ ಅಕ್ಷಯ್ ಅರ್ಜುನ್ ಕಾಣಿಸಿಕೊಂಡಿದ್ದಾರೆ.['ಬೆತ್ತನಗೆರೆ' ಚಿತ್ರ ಬಿಡುಗಡೆಗೆ ಹೊಸ ತಲೆನೋವು]

ಸವಿಕ ಎಂಟರ್ ಪ್ರೈಸಸ್ ಅಡಿಯಲ್ಲಿ ಮೂಡಿಬರುತ್ತಿರುವ ರಕ್ತ-ಸಿಕ್ತ ಕಥೆಯನ್ನಾಧರಿಸಿದ 'ಬೆತ್ತನಗೆರೆ' 'ಎ ರಾ ಸ್ಟೋರಿ! ಎಂಬ ಅಡಿಬರಹದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ, ಇಬ್ಬರು ಹೆಸರಾಂತ ನಿರ್ಮಾಪಕರುಗಳ ಮಕ್ಕಳಾದ ಸುಮಂತ್ ಶೈಲೇಂದ್ರ ಹಾಗೂ ಅಕ್ಷಯ್ ಅವರು ಸಹೋದರರಾಗಿ ಮಿಂಚಿದ್ದಾರೆ.

'ರೌಡಿಗಳಾಗಿ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ, ಮತ್ತೆ ಜೀವನಪರ್ಯಂತ ಕಷ್ಟಪಡಬೇಡಿ ಅಂತ ನಿರ್ದೇಶಕ ಮೋಹನ್ ಗೌಡ ಬೆತ್ತನಗೆರೆ ಅವರು 'ಬೆತ್ತನಗೆರೆ' ಚಿತ್ರದ ಮೂಲಕ ಸಮಾಜಕ್ಕೆ ಹಾಗೂ ಯುವಕರಿಗೆ ಸಂದೇಶ ನೀಡಿದ್ದಾರೆ.['ಬೆತ್ತನಗೆರೆ' ಚಿತ್ರ ಬಿಡುಗಡೆ ಇನ್ನು ನಿರಾಳ]

ಖ್ಯಾತ ಕ್ರಿಕೆಟ್ ಆಟಗಾರ ವಿನೋದ್ ಕಾಂಬ್ಳಿ ಅವರು ಇದೇ ಮೊದಲ ಬಾರಿಗೆ ಈ ಚಿತ್ರದ ಮೂಲಕ ಬಣ್ಣ ಹಚ್ಚಿದ್ದು, ವಿಶೇಷ ಪಾತ್ರವೊಂದರಲ್ಲಿ ಮಿಂಚಿದ್ದಾರೆ.

ನಟಿ ನಯನಾ ಅವರು ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಮುನಿರಾಜ್, ಶೋಭರಾಜ್, ಅವಿನಾಶ್, ಬುಲೆಟ್ ಪ್ರಕಾಶ್, ವೀಣಾ ಸುಂದರ್ ಹಾಗು ಮುಂತಾದ ಕಲಾವಿದರು ಪ್ರಮುಖ ತಾರಾಗಣದಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ಮಾಪಕ ಮುಕುಂದ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಡಿಫರೆಂಟ್ ಡ್ಯಾನಿ ಅವರ ಸಾಹಸ ಈ ಚಿತ್ರಕ್ಕಿದ್ದು, ಹೆಚ್.ಸಿ ವೇಣು ಅವರ ಕ್ಯಾಮರಾ ಕೈಚಳಕ ತೋರಿದ್ದಾರೆ.['ಬೆತ್ತನಗೆರೆ' ಚಿತ್ರಕ್ಕೆ ಡಿಮ್ಯಾಂಡಪ್ಪೋ..ಡಿಮ್ಯಾಂಡು.!]

ಒಟ್ನಲ್ಲಿ ಪೋಸ್ಟರ್ ಹಾಗೂ ಟ್ರೈಲರ್ ಮೂಲಕ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿರುವ 'ಬೆತ್ತನಗೆರೆ' ಸೀನನ ರಿಯಲ್ ಕಥೆ ರೀಲ್ ನಲ್ಲಿ ಮೂಡಿಬಂದಿದ್ದು, ಸಿನಿಪ್ರೀಯರಿಗೆ ಇಷ್ಟವಾಗಬಹುದೇ ಅನ್ನೋದನ್ನ ನೋಡಲು ಅಕ್ಟೋಬರ್ 30ರ ತನಕ ಕಾಯಬೇಕು.
Fresh Kannada

Fresh Kannada

No comments:

Post a Comment

Google+ Followers

Powered by Blogger.