Breaking News
recent

'ಬಿಗ್ ಬಾಸ್-3'ಗೆ ಹೋಗೋದಿಲ್ವಂತೆ ಸುದೀಪ್ ಆಪ್ತ ಜೆ.ಕೆ

ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್-3' ಸದ್ಯದಲ್ಲೇ ಶುರುವಾಗಲಿದೆ. ಎಂದಿನಂತೆ ಕಿಚ್ಚ ಸುದೀಪ್ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಮೂಲಗಳ ಪ್ರಕಾರ ಈ ತಿಂಗಳಾಂತ್ಯಕ್ಕೆ 'ಬಿಗ್ ಬಾಸ್-3' ಶುರುವಾಗಲಿದೆ.
ಸ್ಪರ್ಧಿಗಳ ಆಯ್ಕೆಯಲ್ಲಿ ಕಾರ್ಯಕ್ರಮದ ನಿರ್ಮಾಪಕರು ತೊಡಗಿದ್ದಾರೆ. ಈಟಿವಿ ವಾಹಿನಿ ಮೂಲಗಳಿಂದ ಬಂದಿದ್ದ 'ಬಿಗ್ ಬಾಸ್-3' ಸ್ಪರ್ಧಿಗಳ ಪಟ್ಟಿಯನ್ನ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಬಹಿರಂಗ ಮಾಡಿತ್ತು. [ಎಕ್ಸ್ ಕ್ಲೂಸಿವ್ : 'ಬಿಗ್ ಬಾಸ್-3'ನಲ್ಲಿ 'ಇವರೆಲ್ಲಾ' ಇರ್ತಾರೆ ಸ್ವಾಮಿ.!]
ಆ ಪಟ್ಟಿಯಲ್ಲಿ 'ಅಶ್ವಿನಿ ನಕ್ಷತ್ರ' ಧಾರಾವಾಹಿ ಖ್ಯಾತಿಯ ಸೂಪರ್ ಸ್ಟಾರ್ ಜೆ.ಕೆ ಅಲಿಯಾಸ್ ಕಾರ್ತಿಕ್ ಜಯರಾಮ್ ಹೆಸರಿತ್ತು. ಹೀಗಾಗಿ 'ಬಿಗ್ ಬಾಸ್' ಮನೆಗೆ ಈ ಬಾರಿ ಕಾರ್ತಿಕ್ ಜಯರಾಮ್ ತೆರಳುತ್ತಾರೆ ಅಂತಲೇ ಭಾವಿಸಲಾಗಿತ್ತು. [ಫೇಸ್ ಬುಕ್ ನಲ್ಲಿ ಗರಂ ಆದ ಸೂಪರ್ ಸ್ಟಾರ್ ಜೆ.ಕೆ]
ಆದ್ರೆ, 'ಬಿಗ್ ಬಾಸ್-3'ನಲ್ಲಿ ಕಾರ್ತಿಕ್ ಜಯರಾಮ್ ಇರಲ್ಲ. ಇದನ್ನ ಖುದ್ದು ಜೆ.ಕೆ ಸ್ಪಷ್ಟಪಡಿಸಿದ್ದಾರೆ. ಹಿಂದಿ ವಾಹಿನಿ ಸ್ಟಾರ್ ಪ್ಲಸ್ ನ ಜನಪ್ರಿಯ ಧಾರಾವಾಹಿ 'Siya ka Raam'ನಲ್ಲಿ ನಟಿಸುತ್ತಿರುವ ಜೆ.ಕೆ, 'ಬಿಗ್ ಬಾಸ್-3'ಗೆ ಹೋಗೋದಿಲ್ಲ ಅಂತ ಹೇಳಿದ್ದಾರೆ.
ಅಲ್ಲಿಗೆ, 14ರ ಲೆಕ್ಕದಲ್ಲಿ ಒಬ್ಬರು ಹಿಂದೆ ಸರಿದಿದ್ದಾರೆ. ಬಾಕಿ ಇನ್ಯಾರ್ಯಾರು ಇರಲಿದ್ದಾರೋ...ಆ 'ಬಿಗ್ ಬಾಸೇ' ಬಲ್ಲ.
Fresh Kannada

Fresh Kannada

No comments:

Post a Comment

Google+ Followers

Powered by Blogger.