Breaking News
recent

'ಕಿಲ್ಲಿಂಗ್ ವೀರಪ್ಪನ್', ಸೆಕೆಂಡ್ ಟ್ರೈಲರ್ ನ 10 ಕುತೂಹಲಕಾರಿ ಅಂಶಗಳು

ಅಕ್ಟೋಬರ್ 18, 2004 ರಂದು ಪೊಲೀಸ್ ಅಧಿಕಾರಿಗಳು ನೆಮ್ಮದಿಯ ಉಸಿರು ಬಿಟ್ಟಿದ್ದರು, ಯಾಕೆಂದರೆ ಅಂದು ಕುಖ್ಯಾತ ಕಾಡುಗಳ್ಳ, ದಂತಚೋರ ವೀರಪ್ಪನ್ ಶೂಟೌಟ್ ಆದ ದಿನ. 
'ಕಿಲ್ಲಿಂಗ್ ವೀರಪ್ಪನ್', ಸೆಕೆಂಡ್ ಟ್ರೈಲರ್ ನ 10 ಕುತೂಹಲಕಾರಿ ಅಂಶಗಳು

ತಮಿಳು ಪೊಲೀಸ್ ಒಬ್ಬರ ಗುಂಡೇಟಿಗೆ ಸ್ಮಗ್ಲರ್ ವೀರಪ್ಪನ್ ಸಿಕ್ಕಿಬಿದ್ದು ಪ್ರಾಣ ಬಿಟ್ಟಿದ್ದ.
ಈ ಮೊದಲು ಕಾಡುಗಳ್ಳ ವೀರಪ್ಪನ್ ನಿಜ ಜೀವನಚರಿತ್ರೆಯಾಧರಿತ ಸಿನಿಮಾ 'ಅಟ್ಟಹಾಸ', ಬಂದಿದ್ದರು ಕೂಡ ಇದೀಗ ಮತ್ತೊಮ್ಮೆ ವಿವಾದಾತ್ಮಕ ನಿರ್ದೇಶಕ ಎಂದೇ ಖ್ಯಾತಿ ಗಳಿಸಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು 'ಕಿಲ್ಲಿಂಗ್ ವೀರಪ್ಪನ್' ಎಂಬ ಚಿತ್ರದ ಮೂಲಕ ಯಥಾವತ್ತಾಗಿ ವೀರಪ್ಪನ್ ಆರ್ಭಟವನ್ನು ತೆರೆ ಮೇಲೆ ತಂದಿದ್ದಾರೆ.[ಟ್ರೈಲರ್: ದೊಡ್ಡ ಯುದ್ಧ ಗೆಲ್ಲ ಬೇಕು ಅಂದ್ರೆ, ಸಣ್ಣ ಸಣ್ಣ ಯುದ್ದ ಸೋಲಬೇಕು]
ಈಗಾಗಲೇ ಸಿನಿಮಾ ಕಂಪ್ಲೀಟ್ ಆಗಿದ್ದು, ಚಿತ್ರದ ಸೆಕೆಂಡ್ ಟ್ರೈಲರ್ ವೀರಪ್ಪನ್ ಮರಣ ಹೊಂದಿದ ದಿನ (ಅಕ್ಟೋಬರ್ 18, 2004) ಬಿಡುಗಡೆಯಾಗಿದೆ. ಸದ್ಯಕ್ಕೆ ಚಿತ್ರದ ಟ್ರೈಲರ್ ಎಲ್ಲೆಡೆ ಸಖತ್ ಸೌಂಡ್ ಮಾಡ್ತಾ ಇದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಪೆಷಲ್ ಪೊಲೀಸ್ ಆಫೀಸರ್ ಆಗಿ ವೀರಪ್ಪನ್ ಬೇಟೆಯಾಡಲು ಸಿದ್ದವಾಗಿದ್ದಾರೆ. ಇದೀಗ ಬಹುನಿರೀಕ್ಷಿತ ಚಿತ್ರ 'ಕಿಲ್ಲಿಂಗ್ ವೀರಪ್ಪನ್' ಬಿಡುಗಡೆಗೆ ಸಿದ್ದವಾಗಿದ್ದು, ನವೆಂಬರ್ 6 ರಂದು ಸುಮಾರು 3000 ಥಿಯೇಟರ್ ಗಳಲ್ಲಿ ತೆರೆ ಕಾಣಲಿದೆ.[ಶಿವಣ್ಣ 'ಕಿಲ್ಲಿಂಗ್ ವೀರಪ್ಪನ್', ಚಿತ್ರದಿಂದ ಒಂದು ಗುಡ್ ನ್ಯೂಸ್!]
ಇನ್ನು 'ಕಿಲ್ಲಿಂಗ್ ವೀರಪ್ಪನ್' ಸೆಕೆಂಡ್ ಟ್ರೈಲರ್ ನಲ್ಲಿರುವ ಸುಮಾರು 10 ಕುತೂಹಲಕಾರಿ ವಿಷಯಗಳನ್ನು ನಾವು ನಿಮಗೆ ತಿಳಿಸ್ತಿವಿ ನೋಡಲು ಕೆಳಗಿನ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ..
Fresh Kannada

Fresh Kannada

No comments:

Post a Comment

Google+ Followers

Powered by Blogger.