Breaking News
recent

'RX ಸೂರಿ' ಚಿತ್ರಕಥೆಯ ದುರಂತ ನಾಯಕಿ ಈಕೆಯೇ


ಕಳೆದ ಶುಕ್ರವಾರವಷ್ಟೇ ತೆರೆಕಂಡ ದುನಿಯಾ ವಿಜಯ್ ಅಭಿನಯದ 'RX ಸೂರಿ' ಚಿತ್ರವನ್ನ ನೀವು ನೋಡಿದ್ರೆ, ಚಿತ್ರದ ನಾಯಕಿ ಪಾತ್ರದ ಮೇಲೆ ನಿಮಗೆ ಸ್ವಲ್ಪ ಸಾಫ್ಟ್ ಕಾರ್ನರ್ ಮೂಡಿರಬಹುದು. ['RX ಸೂರಿ' ನಿರ್ದೇಶಕ ಶ್ರೀಜೈ ಕಂಡ ನೈಜ ಪ್ರೇಮ ಕಥೆ] RX Suri (A): ನಿಮ್ಮ ಟಿಕೆಟ್‌ ಅನ್ನು ಈಗಲೇ ಬುಕ್ ಮಾಡಿಕೊಳ್ಳಿ! ನಾಯಕ ರೌಡಿ ಅಂತ ಗೊತ್ತಿದ್ದರೂ, ಪ್ರಾಮಾಣಿಕವಾಗಿ ಪ್ರೀತಿ ಮಾಡುವ ಮುಗ್ಧ ಹುಡುಗಿ ಮೀರಾ ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಇದು ಜಸ್ಟ್ ಸಿನಿಮಾ ಸ್ಟೋರಿ ಆಗಿದ್ದರೆ ಪರ್ವಾಗಿಲ್ಲ. ನೈಜ ಘಟನೆ ಆಗಿರುವ ಕಾರಣ, ನಿಜವಾದ ಮೀರಾ (ಹೆಸರು ಬದಲಿಸಲಾಗಿದೆ) ಬಗ್ಗೆ ಹಲವರು ಮರುಗುತ್ತಿದ್ದಾರೆ. ['RX ಸೂರಿ' ಬಗ್ಗೆ ದುನಿಯಾ ವಿಜಯ್ ಬಿಚ್ಚಿಟ್ಟ ರಹಸ್ಯ] ಎಂಟು ವರ್ಷಗಳ ಹಿಂದೆ ಬೆಂಗಳೂರಿನ ಅವಲಹಳ್ಳಿಯಲ್ಲಿ ನಡೆದ ರೌಡಿಸಂ ಮತ್ತು ಪ್ರೇಮಕಥೆ ಈ 'RX ಸೂರಿ' ಚಿತ್ರ. ರಿಯಲ್ ಸೂರಿ ಬಗ್ಗೆ ಹೆಚ್ಚು ಮಾತನಾಡದ ಚಿತ್ರತಂಡ ರಿಯಲ್ ಮೀರಾ (ಹೆಸರು ಬದಲಿಸಲಾಗಿದೆ) ಯಾರು ಅನ್ನೋದನ್ನ ಹೊರಹಾಕಿದೆ. ಮುಂದೆ ಓದಿ....


ಮತ್ತೆ ಲಿಪ್ ಲಾಕ್ ಮಾಡಿ ಸಿಕ್ಕಿ ಬಿದ್ದ ಕರಿಯ

RX Soori (2015) Kannada Movie Mp3 Songs Free Download

Rx Suri Kannada Movie Official Trailer

ದುರಂತ ನಾಯಕಿ ಈಕೆಯೇ.... ನಿಜ ಜೀವನದಲ್ಲಿ ಸೂರಿ (ಹೆಸರು ಬದಲಿಸಲಾಗಿದೆ) ಅನ್ನುವ ರೌಡಿಯನ್ನ ಪ್ರೀತಿಸಿ , ಕೊನೆಗೆ ಆತ್ಮಹತ್ಯೆ ಮಾಡಿಕೊಂಡ ದುರಂತ ನಾಯಕಿ ಮೀರಾ (ಹೆಸರು ಬದಲಿಸಲಾಗಿದೆ) ಈಕೆಯೇ...


ಇಂದಿಗೂ ಶಾಕ್ ನಲ್ಲಿರುವ ಮೀರಾ ಸಹೋದರ ಮೀರಾ (ಹೆಸರು ಬದಲಿಸಲಾಗಿದೆ) ಸಾವು ಆಕೆಯ ಸಹೋದರ ಮುಖೇಶ್ ಗೆ ಇಂದಿಗೂ ನುಂಗಲಾರದ ಬಿಸಿ ತುಪ್ಪ. ಪ್ರತಿ ನಿತ್ಯ ಮೀರಾ ಫೋಟೋ ಮುಂದೆ ನಿಂತು ಸಹೋದರ ಮುಖೇಶ್ ಮಾತನಾಡುತ್ತಿರುತ್ತಾರಂತೆ.


ಮೀರಾ ಕುಟುಂಬವನ್ನ ಭೇಟಿ ಮಾಡಿದ ದುನಿಯಾ ವಿಜಯ್ ಮೀರಾ (ಹೆಸರು ಬದಲಿಸಲಾಗಿದೆ) ಕುಟುಂಬವನ್ನ ಖುದ್ದಾಗಿ ಭೇಟಿ ಮಾಡಿ ಬಂದಿದ್ದಾರೆ ದುನಿಯಾ ವಿಜಯ್.


ಮೀರಾ ತಾಯಿ ಕೊಟ್ಟ ಸಂದೇಶ.. ''ನನ್ನ ಮಗಳು ಪ್ರೀತಿ ಮಾಡ್ತಿದ್ದಾಳೆ ಅಂತ ಗೊತ್ತಿದ್ರೆ, ಖಂಡಿತವಾಗ್ಲೂ ನಾನು ಮದುವೆ ಮಾಡ್ತಿದ್ದೆ. ಅಂತವಳು ಸೂಸೈಡ್ ಮಾಡಿಕೊಂಡುಬಿಟ್ಟಳು. ಯಾರೇ ಪ್ರೀತಿ ಮಾಡಿದರೂ, ಮನೆಯವರಿಗೆ ತಿಳಿಸಬೇಕು.'' ಅಂತ ಮೀರಾ ಅವರ ತಾಯಿ ದುನಿಯಾ ವಿಜಯ್ ಅವರಿಗೆ ತಿಳಿಸಿದ್ದಾರೆ.

Fresh Kannada

Fresh Kannada

No comments:

Post a Comment

Google+ Followers

Powered by Blogger.