Breaking News
recent

ಈ ವಾರ ಬಿಡುಗಡೆಯಾಗುತ್ತಿರುವ ಕನ್ನಡ ಚಿತ್ರಗಳು

ಶುಕ್ರವಾರ ಬಂತೂಂದ್ರೆ ಸಾಕು. ಸಿನಿ ಪ್ರೇಮಿಗಳಿಗೆ ಹಬ್ಬ. ಈ ಶುಕ್ರವಾರ ಕೂಡ ಸಿನಿ ರಸಿಕರಿಗೆ ಖುಷಿ ನೀಡುವ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತಿವೆ. ಆ ಎಲ್ಲಾ ಕನ್ನಡ ಚಿತ್ರಗಳ ಮಾಹಿತಿ ಇಲ್ಲಿದೆ ನೋಡಿ....
ಲಾಂಗ್ ಗ್ಯಾಪ್ ನಂತರ ದುನಿಯಾ ಸೂರಿ ನಿರ್ದೇಶಿಸಿರುವ ಚಿತ್ರ 'ಕೆಂಡಸಂಪಿಗೆ' (ಪಾರ್ಟ್ 2 ಗಿಣಿಮರಿ ಕೇಸ್) ನಾಳೆ (ಸೆಪ್ಟೆಂಬರ್ 11) ಬಿಡುಗಡೆ ಆಗುತ್ತಿದೆ. ವಿಕ್ಕಿ (ಸಂತೋಷ್), ಮಾನ್ವಿತ, ರಾಜೇಶ್ ನಟರಂಗ, ಚಂದ್ರಿಕ ಮುಂತಾದವರು ಮುಖ್ಯಭೂಮಿಕೆಯಲ್ಲಿದ್ದಾರೆ. [ಕಡೆಗೂ 'ಕೆಂಡಸಂಪಿಗೆ'ಗೆ ಸಿಕ್ತು ಬಿಡುಗಡೆ ಭಾಗ್ಯ]
ಕ್ರೈಂ ಥ್ರಿಲ್ಲರ್ ಆಗಿರುವ ಈ ಚಿತ್ರದ ಕಥೆ ರಚಿಸಿರುವವರು ಸುರೇಂದ್ರನಾಥ್. ವಿ.ಹರಿಕೃಷ್ಣ ಸಂಗೀತ ನಿರ್ದೇಶನದ ಹಾಡುಗಳು ಈಗಾಗಲೇ ಗಾಂಧಿನಗರದಲ್ಲಿ ಸಖತ್ ಸುದ್ದಿ ಮಾಡಿದೆ.
'ಕೆಂಡಸಂಪಿಗೆ' ಚಿತ್ರದ ಜೊತೆಗೆ ಈ ವಾರ 'ನಮಕ್ ಹರಾಮ್' ಚಿತ್ರ ಕೂಡ ತೆರೆಗೆ ಬರುತ್ತಿದೆ. ಗೋಲ್ಡನ್ ಸ್ಟಾರ್ ಗಣೇಶ್ ಸಹೋದರ ಮಹೇಶ್ ಚೊಚ್ಚಲ ಬಾರಿಗೆ ಬಣ್ಣ ಹಚ್ಚಿರುವ ಚಿತ್ರ ಇದು. ಆರ್.ಜೆ. ರ್ಯಾಪಿಡ್ ರಶ್ಮಿ ನಾಯಕಿಯಾಗಿ ನಟಿಸಿರುವ ಈ ಚಿತ್ರಕ್ಕೆ ನಾಗರಾಜ್ ಪೀಣ್ಯ ಆಕ್ಷನ್ ಕಟ್ ಹೇಳಿದ್ದಾರೆ.
ರೌಡಿಸಂ ಚಿತ್ರವಾಗಿರುವ 'ನಮಕ್ ಹರಾಮ್' ನಿಹಾಲ್ ಮೂವೀಸ್ ಲಾಂಛನದಲ್ಲಿ ರೆಡಿಯಾಗಿದೆ. ಸತೀಶ್ ಆರ್ಯನ್ ಸಂಗೀತ ನೀಡಿದ್ದಾರೆ. ಲಾಂಗು-ಮಚ್ಚುಗಳ ಅಬ್ಬರವನ್ನ ನೋಡುವ ಬಯಕೆ ಇದ್ದರೆ 'ನಮಕ್ ಹರಾಮ್' ಚಿತ್ರವನ್ನ ಮಿಸ್ ಮಾಡ್ಬೇಡಿ.
ಈಗಾಗಲೇ ಕುತೂಹಲ ಕೆರಳಿಸಿ ಅನೇಕ ನಿರ್ದೇಶಕರುಗಳ ಮೆಚ್ಚುಗೆಗೆ ಪಾತ್ರವಾಗಿರುವ 'ಗೀತಾ ಬ್ಯಾಂಗಲ್ ಸ್ಟೋರ್' ಚಿತ್ರ ಕೂಡ ಈ ಶುಕ್ರವಾರ ತೆರೆ ಕಾಣುತ್ತಿದೆ.
ಜತಿನ್ ಸಿನಿಮಾಸ್ ಸಂಸ್ಥೆಯಲ್ಲಿ ಸಿ.ಕೆಂಪರಾಜ್ ನಿರ್ಮಿಸಿರುವ ಚಿತ್ರ 'ಗೀತಾ ಬ್ಯಾಂಗಲ್ ಸ್ಟೋರ್'. ಮಂಜು ಮಿತ್ರ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿ.ಮನೋಹರ್ ರವರ ಸಂಗೀತ ಇದೆ. ಪ್ರಮೋದ್, ಸುಶ್ಮಿತಾ, ನೀನಾಸಂ ಅಶ್ವಥ್, ಮಂಡ್ಯ ರಮೇಶ್ ತಾರಾಗಣವಿದೆ.
ಹೊಸಬರ ಹೊಸ ಪ್ರಯತ್ನವಾಗಿರುವ 'ಬಿಲ್ಲಾ' ಚಿತ್ರ ಕೂಡ ಇದೇ ವಾರ ರಿಲೀಸ್ ಆಗುತ್ತಿದೆ. ಕೃಷ್ಣದೇವ್, ಅಂಜನ, ಶ್ರವಂತ್ ತಾರಾಗಣದಲ್ಲಿರುವ 'ಬಿಲ್ಲಾ' ಚಿತ್ರಕ್ಕೆ ರಾಮ್ ನಾರಾಯಣ್-ಮಾಮಣಿ ನಿರ್ದೇಶನ ಮಾಡಿದ್ದಾರೆ.
ಇನ್ನೂ ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಸಂಪೂರ್ಣ ಸಲಿಂಗ ಕಾಮಿಗಳ ಕುರಿತಾಗಿ ರೆಡಿಯಾಗಿರುವ ಭಾವಾಜಿ ನಿರ್ದೇಶನ ಹಾಗು ನಿರ್ಮಾಣದ '141' ಐ ಲವ್ ಯು ಚಿತ್ರ ಕೂಡ ನಾಳೆ ಬಿಡುಗಡೆ ಆಗಲಿದೆ. ರಷ್ಯ ದೇಶದ ತಾನ್ಯ, ಶಿವಮೊಗ್ಗದ ಕಾವ್ಯ, ಫಾರೂಖ್ ಖಾನ್, ಮಿಶ್ರ ಮುಂತಾದವರು '141' ತಾರಾಗಣದಲ್ಲಿದ್ದಾರೆ. [ಸೆ.11ರಂದು ಸಲಿಂಗ ಕಾಮ ಕುರಿತ ಕನ್ನಡ ಚಿತ್ರ ತೆರೆಗೆ]
ಈ ಶುಕ್ರವಾರ ಸಿನಿ ಪ್ರಿಯರ ಮುಂದೆ ಇರುವ ಆಯ್ಕೆಗಳಿವು. ಇದರಲ್ಲಿ ಯಾವ ಚಿತ್ರವನ್ನ ನೋಡ್ಬೇಕು ಅಂತ ನೀವೇ ಡಿಸೈಡ್ ಮಾಡಿ...ಹ್ಹಾ, ಹಾಗೆ..ನಿಮ್ಮ ಆಯ್ಕೆಯನ್ನ ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ನಮಗೆ ತಿಳಿಸಿ....
Fresh Kannada

Fresh Kannada

No comments:

Post a Comment

Google+ Followers

Powered by Blogger.