Breaking News
recent

ಗೆಳತಿ ಜೊತೆ 'ರಂಗಿತರಂಗ' ನಾಯಕ ನಿರೂಪ್ ನಿಶ್ಚಿತಾರ್ಥ

'ರಂಗಿತರಂಗ' ನಾಯಕ ನಿರೂಪ್ ಭಂಡಾರಿ ಹೊಸ ಜೀವನಕ್ಕೆ ಅಡಿಯಿಡಲು ಸಜ್ಜಾಗಿದ್ದಾರೆ. ಶೀಘ್ರದಲ್ಲೇ ತಮ್ಮ ದೀರ್ಘಕಾಲದ ಗೆಳತಿ ಧನ್ಯಾ ಅವರನ್ನ ನಿರೂಪ್ ವಿವಾಹವಾಗಲಿದ್ದಾರೆ. ಇತ್ತೀಚೆಗಷ್ಟೇ ಕುಟುಂಬದವರ ಸಮ್ಮುಖದಲ್ಲಿ ಧನ್ಯಾ-ನಿರೂಪ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನಿರೂಪ್ ಭಂಡಾರಿ ಹಾಗು ಧನ್ಯಾ ಸಾಫ್ಟ್ ವೇರ್ ಇಂಜಿನಿಯರ್ಸ್. ಹಲವು ವರ್ಷಗಳಿಂದ ಇಬ್ಬರು ಸ್ನೇಹಿತರು. ಇಬ್ಬರ ಸ್ನೇಹ ಪ್ರೀತಿಗೆ ತಿರುಗಿ, ಇದೀಗ ತಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಹಾಕಿಸಿಕೊಳ್ಳುವ ತವಕದಲ್ಲಿದ್ದಾರೆ. [ಚಿತ್ರ ವಿಮರ್ಶೆ : 'ರಂಗಿತರಂಗ' ಬಲು ರೋಚಕ]
ನಿರೂಪ್ ಗೆಳತಿ ಧನ್ಯಾ ಅಮೇರಿಕದ ಕಂಪನಿಯೊಂದರ ಉದ್ಯೋಗಿ. ರಜೆ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಕಾರಣ ನಿರೂಪ್-ಧನ್ಯಾ ನಿಶ್ಚಿತಾರ್ಥ ಮೈಸೂರಿನಲ್ಲಿ ಸರಳವಾಗಿ ನೆರವೇರಿದೆ.
ನಿರೂಪ್ ಗೆಳತಿ ಧನ್ಯಾ ಕೂಡ ಕಲಾವಿದೆ. ನ್ಯೂಯಾರ್ಕ್ ನ ಲೀ ಸ್ಟಾರ್ಸ್ ಬರ್ಗ್ ಥಿಯೇಟರ್ ಅಂಡ್ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ನಟನೆ ತರಬೇತಿ ಮಾಡಿದ್ದಾರೆ ಧನ್ಯಾ.
ಸದ್ಯಕ್ಕೆ 'ರಂಗಿತರಂಗ' ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಿರೂಪ್ ಭಂಡಾರಿ ಇನ್ನೊಂದು ವರ್ಷದಲ್ಲಿ ಧನ್ಯಾ ಅವರ ಜೊತೆ ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.