Breaking News
recent

ನೀರ್ ದೋಸೆಗೆ ತುಂಬಿದ ತೊಂಡೆ ಹಣ್ಣಿನಂತಿರುವ ಹರಿಪ್ರಿಯಾ?

ತೆಳ್ಳಗಿರೋ ನೀರ್ ದೋಸೆಗೆ ಸ್ವಲ್ಪ ದಪ್ಪಗೆ ಮೈಕೈ ತುಂಬಿಕೊಂಡಿರೋ ನಾಯಕಿ ಬೇಕು. ಇವತ್ತಿನ ಹಾಗೆ ಸೈಜ್ ಜೀರೋ ಅಂತಿರೋ ನಾಯಕಿಯರು ವೇಶ್ಯೆಯ ಪಾತ್ರ ಮಾಡಿದ್ರೆ ಕೋಲಿಗೆ ಸೀರೆ ಉಡಿಸಿದ ಹಾಗಿರುತ್ತೆ!
ಈರೀತಿ ಪೊಗದಸ್ತಾಗಿರೋ ನಟಿಮಣಿಯರು ಅನೇಕರಿದ್ದಾರೆ ಸ್ಯಾಂಡಲ್ ವುಡ್ ನಲ್ಲಿ. ಸೋ ನೀರ್ದೋಸೆಗೆ ನಾಯಕಿಯಾಗಲಿರೋದು ಹರಿಪ್ರಿಯಾ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಓಡಾಡ್ತಿದೆ. ಹರಿಪ್ರಿಯಾ ಈ ವಿವಾದಾತ್ಮಕ ಸಿನಿಮಾ ಮಾಡೋಕೆ ಒಪ್ಪಿದ್ದಾರಾ ಇಲ್ವಾ ಗೊತ್ತಿಲ್ಲ. ಆದ್ರೆ ಈ ಹಿಂದೆ 'ನಾಟಿ ಕೋಳಿ' ರಾಗಿಣಿ ದ್ವಿವೇದಿ ಅಂತ ಚಿತ್ರತಂಡ ಲೆಕ್ಕಾಚಾರ ಹಾಕಿದ್ದೂ ಕೂಡ ಇದೇ ಕಾರಣಕ್ಕೆ. ರಮ್ಯಾರಷ್ಟೇ ಯಶಸ್ವೀ ನಾಯಕಿಯಾಗಿರೋ ರಾಧಿಕಾ ಪಂಡಿತ್ರನ್ನ ಈ ಚಿತ್ರತಂಡ ಸಂಪರ್ಕಿಸಿಲ್ಲ. ಇದಕ್ಕೆ ಕಾರಣ ದಪ್ಪ ಇರಬೇಕು ಅನ್ನೋದು. ಸೋ ಈಗ ತುಂಬಿದ ತೊಂಡೇ ಹಣ್ಣಿನಂತಿರೋ ಚೆಲುವೆ ಹರಿಪ್ರಿಯಾ ನೀರ್ದೋಸೆಗೆ ನಾಟಿ ಕೋಳಿ ಆಗ್ತಾರಾ ಇನ್ನಷ್ಟೇ ಗೊತ್ತಾಗ್ಬೇಕಿದೆ. [ನೀರ್ ದೋಸೆನಾ ಇಲ್ಲಾ ಬೆಣ್ಣೆ (ಮಸಾಲೆ) ದೋಸೇನಾ?] ಇನ್ನು ಹರಿಪ್ರಿಯಾ ಸದ್ಯ ಸ್ಯಾಂಡಲ್ವುಡ್ನಲ್ಲಿ ಸಾಲು ಸಾಲು ಸಿನಿಮಾಗಳನ್ನ ಕೈಯ್ಯಲ್ಲಿ ಇಟ್ಕೊಂಡಿರೋ ನಾಯಕಿ. ಇತ್ತೀಚೆಗೆ ಬಿಡುಗಡೆಯಾದ, ಶರಣ್ ನಾಯಕತ್ವದ 'ಬುಲೆಟ್ ಬಸ್ಯಾ' ಚಿತ್ರದಲ್ಲಿ ಹರಿಪ್ರಿಯಾ ಹೇಗೆ ಕಾಣಿಸಿಕೊಂಡಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಹರಿಪ್ರಿಯಾ ಕೈಗೆ ಮತ್ತೊಂದು ಸಿನಿಮಾ ಸಿಗ್ತಿರೋ ಸುದ್ದಿ ಬರ್ತಿದೆ.

Fresh Kannada

Fresh Kannada

No comments:

Post a Comment

Google+ Followers

Powered by Blogger.