Breaking News
recent

ನಟಿ ರೂಪಶ್ರೀಯನ್ನು ಬಾಯಿಗೆ ಬಂದಂತೆ ಬೈದ ಮೈತ್ರಿಯಾ ಗೌಡ

ನಟಿ ಮೈತ್ರಿಯಾ ಗೌಡ ಮತ್ತೆ ಹೆಡ್ ಲೈನ್ಸ್ ಮಾಡಿದ್ದಾರೆ. ಅದು ಮತ್ತೊಂದು ಕಿರಿಕ್ ನಿಂದಲೇ.
'ಕಾರ್ತಿಕ್ ಗೌಡ ನನ್ನ ಗಂಡ' ಅಂತ್ಹೇಳಿ ನ್ಯಾಷನಲ್ ಲೆವೆಲ್ ವರೆಗೂ ಸೌಂಡ್ ಮಾಡಿದ್ದ ನಟಿ ಮೈತ್ರಿಯಾ ಗೌಡ ಇದೀಗ ನಟಿ ರೂಪಶ್ರೀ ವಿರುದ್ಧ ತಿರುಗಿ ಬಿದ್ದಿದ್ದಾರೆ. [ಗೌಡರ ಪದಚ್ಯುತಿಗೊಳಿಸಲು ರಾಷ್ಟ್ರಪತಿಗೆ ಮೈತ್ರಿಯಾ ಪತ್ರ]
ಕಾರ್ತಿಕ್ ಗೌಡ ಕೇಸ್ ಆಗುವುದಕ್ಕೆ ನಟಿ ರೂಪಶ್ರೀ ಕಾರಣ! ಅಂತ ನೇರ ಆರೋಪ ಮಾಡಿರುವ ಮೈತ್ರಿಯಾ ಗೌಡ, ರೂಪಶ್ರೀ ವೈಯುಕ್ತಿಕ ವಿಚಾರಗಳನ್ನ ಬೀದಿಗೆಳೆದಿದ್ದಾರೆ. [ಯಾರೀ ಮೈತ್ರಿಯಾ ಗೌಡ? ರಿಯಲ್ ಕಹಾನಿ]

ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟಿ ರೂಪಶ್ರೀಗೆ ಈಗಾಗಲೇ ಮದುವೆಯಾಗಿ ಒಂದು ಮಗು ಇದೆ ಅಂತ ಮೈತ್ರಿಯಾ ಗೌಡ ಹೊಸ ಬಾಂಬ್ ಸಿಡಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ನಟಿ ರೂಪಶ್ರೀಯನ್ನ ನಿಂದಿಸಿದ್ದಾರೆ ನಟಿ ಮೈತ್ರಿಯಾ ಗೌಡ. ಮುಂದೆ ಓದಿ....
ರೂಪಶ್ರೀ ಬಿಚ್ಚಿಟ್ಟ ಮೈತ್ರಿಯಾ ಗೌಡ 'ರಿಯಲ್' ಡ್ರಾಮಾ
ರೂಪಶ್ರೀಯನ್ನು ಚಿತ್ರರಂಗದಿಂದ ಬ್ಯಾನ್ ಮಾಡ್ಬೇಕಂತೆ.!
ಒಂದ್ಕಾಲದಲ್ಲಿ ಫ್ರೆಂಡ್ ಶಿಪ್, ಈಗ ದುಶ್ಮನಿ 
ಈಟಿವಿ ಕನ್ನಡ ಚಾನೆಲ್ ನ ಡ್ಯಾನ್ಸ್ ಶೋ ಒಂದರಲ್ಲಿ ಪರಿಚಯವಾಗಿ ಕ್ಲೋಸ್ ಫ್ರೆಂಡ್ಸ್ ಆಗಿದ್ದ ನಟಿ ರೂಪಶ್ರೀ ಮತ್ತು ನಟಿ ಮೈತ್ರಿಯಾ ಗೌಡ ಇದೀಗ ಕಚ್ಚಾಡಿಕೊಳ್ತಿದ್ದಾರೆ. ನಟಿ ರೂಪಶ್ರೀ ವಿರುದ್ಧ ಮೈತ್ರಿಯಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸಮರ ಸಾರಿದ್ದಾರೆ. ಫೇಸ್ ಬುಕ್ ನಲ್ಲಿ ನಟಿ ಮೈತ್ರಿಯಾ ಗೌಡ ಹಾಕಿರುವ ಸ್ಟೇಟಸ್ ತಿಳಿದುಕೊಳ್ಳುವುದಕ್ಕೆ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...
ಚೀಪ್ ಕ್ಯಾರೆಕ್ಟರ್.! 
''ರೂಪಶ್ರೀ ಯದ್ದು ಇಂಥ ಚೀಪ್ ಕ್ಯಾರೆಕ್ಟರ್ ಅಂತ ನಾನೆಂದೂ ಊಹಿಸಿರಲಿಲ್ಲ. ಆಕೆಯನ್ನ ನಟಿ ಅಂತ ಕರೆಯುವುದಕ್ಕೆ ನನಗೆ ಅಸಹ್ಯವಾಗುತ್ತದೆ. ಆದ್ರೆ, ನಾನು ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿದ್ದೇನೆ. ಎಲ್ಲಾ ನಟಿಯರಿಗೆ ನಾನು ಗೌರವ ಕೊಡುತ್ತೇನೆ.'' - ಮೈತ್ರಿಯಾ ಗೌಡ

ಅಪಪ್ರಚಾರ ಮಾಡುತ್ತಿದ್ದಾರೆ.! 
''ನನ್ನ ಬಗ್ಗೆ ರೂಪಶ್ರೀ ಅಪಪ್ರಚಾರ ಮಾಡುತ್ತಿದ್ದಾರೆ. ಅವಕಾಶಕ್ಕಾಗಿ ಆಕೆ ಹೇಗೆ ಮಾಡುತ್ತಿದ್ದಾರೆ. ಆಕೆ ನನ್ನ ಸ್ನೇಹಿತೆ. ಆಕೆಗೆ ನಾನು ಊಟ ಮಾಡಿಸಿದ್ದೇನೆ. ಪಾರ್ಟಿಯಲ್ಲಿ ಅತಿಯಾಗಿ ಕುಡಿದು ಬಿದ್ದಾಗ, ಆಕೆಯನ್ನ ಕೈಹಿಡಿದು ಎತ್ತಿದವಳು ನಾನು ಅಂತ ಹೇಳಿಕೊಳ್ಳುವುದಕ್ಕೆ ನಾಚಿಕೆ ಆಗುತ್ತದೆ. ಸ್ವಂತ ಸಹೋದರಿಯಂತೆ ಆಕೆಯನ್ನ ನೋಡಿಕೊಂಡಿದ್ದು ನನ್ನ ತಪ್ಪು. ಆಕೆಯಿಂದಲೇ ಇಂದು ನಾನು ಮಾನಸಿಕ ಯಾತನೆ ಅನುಭವಿಸುತ್ತಿದ್ದೇನೆ. ದೇವರೇ ನಿನಗೆ ಪಾಠ ಕಲಿಸುತ್ತಾನೆ. ಆ ದಿನಕ್ಕಾಗಿ ನಾನು ಕಾಯುತ್ತಿರುತ್ತೇನೆ.'' - ಮೈತ್ರಿಯಾ ಗೌಡ

ರೂಪಶ್ರೀಗೆ ಮದುವೆ ಆಗಿ ಮಗು ಇದೆ.! 
'ಸಂಕ್ರಾಂತಿ', 'ಜಟಾಯು', 'ಚಡ್ಡಿ ದೋಸ್ತ್', 'ಸಿಗರೇಟ್' ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ''ರೂಪಶ್ರೀಗೆ 35 ವರ್ಷ ಆಗಿರಬಹುದು. ಆದ್ರೆ ಯಾರ ಹತ್ತಿರವೂ ಹೇಳಿಕೊಂಡಿಲ್ಲ. ಅವರಿಗೆ ಈಗಾಗಲೇ ಮದುವೆ ಆಗಿ ಒಂದು ಮಗು ಇದೆ. ಗಂಡ ತುಂಬಾ ಬಡವ. ಲಕ್ಷುರಿ ಲೈಫ್ ಲೀಡ್ ಮಾಡೋಕೆ ಆಗಲ್ಲ ಅಂತ್ಹೇಳಿ, ಡೈವೋರ್ಸ್ ಮಾಡಿ ತನ್ನ ಸ್ವಂತ ಮಗುವಿನಿಂದ ಅಕ್ಕ ಅಂತ ಕರೆಸಿಕೊಳ್ಳುತ್ತಾರೆ. ಎಲ್ಲರೂ ಹೇಳಿದ್ದರು ರೂಪಶ್ರೀ ಸರಿಗಿಲ್ಲ, ಹುಷಾರಾಗಿರು ಅಂತ. ಆದ್ರೆ, ಚೆನ್ನಾಗಿ ಮಾತನಾಡುತ್ತಿದ್ದರು ಅಂತ ನಾನು ಮಾತಾಡ್ತಿದ್ದೆ'' ಅಂತ ಪಬ್ಲಿಕ್ ಟಿವಿಗೆ ಮೈತ್ರಿಯಾ ಗೌಡ ಹೇಳಿಕೆ ನೀಡಿದ್ದಾರೆ. [ಸದ್ದಿಲ್ಲದೇ ಎಂಗೇಜ್ ಆದ ನಟಿ ರೂಪಶ್ರೀ]

ಕೇಸ್ ಆಗುವುದಕ್ಕೆ ರೂಪಶ್ರೀ ಕಾರಣ.! 
''ಸ್ನೇಹಿತರು ಅಂದ್ರೆ ಕಷ್ಟದಲ್ಲಿದ್ದಾಗ ಸಹಾಯ ಮಾಡಬೇಕು. ಆದ್ರೆ ನನ್ನ ಕೇಸ್ ಆಗುವುದಕ್ಕೆ ಈಕೆಯೇ ಕಾರಣ. ಆದರೂ ಅವರ ಹೆಸರನ್ನ ನಾನೆಲ್ಲೂ ತರಲಿಲ್ಲ.'' ಅಂತ ಖಾಸಗಿ ವಾಹಿನಿಗಳಿಗೆ ಮೈತ್ರಿಯಾ ಗೌಡ ಹೇಳಿದ್ದಾರೆ.

ಅಷ್ಟಕ್ಕೂ ಈಗ ಜಗಳ ಯಾಕೆ? 
ತಮ್ಮ ಪರವಾಗಿ ಸಾಕ್ಷಿ ಹೇಳುವಂತೆ ನಟಿ ಮೈತ್ರಿಯಾ ಗೌಡ, ರೂಪಶ್ರೀಯನ್ನ ಕೇಳಿಕೊಂಡಿದ್ದರು. ಆದ್ರೆ, ಅದಕ್ಕೆ ರೂಪಶ್ರೀ ನಿರಾಕರಿಸಿದ್ದಾರೆ. ಇದರಿಂದ ಬೇಸರಗೊಂಡಿರುವ ಮೈತ್ರಿಯಾ ಗೌಡ, ರೂಪಶ್ರೀ ವಿರುದ್ಧ ಹರಿಹಾಯ್ದಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.