Breaking News
recent

ಮತ್ತೊಂದು ರೀಮೇಕ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್?

'ಒಳ್ಳೆಯ ಚಿತ್ರಗಳನ್ನ ಯಾಕೆ ರೀಮೇಕ್ ಮಾಡಬಾರದು' ಅಂತ ಹಿಂದೊಮ್ಮೆ ಪತ್ರಿಕಾ ಮಿತ್ರರೊಂದಿಗೆ ಮಾತನಾಡುತ್ತಾ ಪುನೀತ್ ರಾಜ್ ಕುಮಾರ್ ಪ್ರಶ್ನೆ ಮಾಡಿದ್ದರು.
ಪರಭಾಷೆಯಲ್ಲಿ ಸೂಪರ್ ಹಿಟ್ ಆಗಿರುವ ಚಿತ್ರಗಳ ಕನ್ನಡ ಅವತರಣಿಕೆಯಲ್ಲಿ ಪುನೀತ್ ರಾಜ್ ಕುಮಾರ್ ಮಿಂಚಿದ್ದಾರೆ. ಈಗ ಅವರು ಅಭಿನಯಿಸುತ್ತಿರುವ 25ನೇ ಚಿತ್ರ 'ಚಕ್ರವ್ಯೂಹ' ಕೂಡ ತಮಿಳಿನ ಬ್ಲಾಕ್ ಬಸ್ಟರ್ 'ಇವನ್ ವೀರಮಾದಿರಿ' ಸಿನಿಮಾದ ರೀಮೇಕ್ ಅಂತ ಗುಲ್ಲೆಬ್ಬಿದೆ.
ಇದೀಗ ಮತ್ತೊಂದು ರೀಮೇಕ್ ಸುದ್ದಿ ಪುನೀತ್ ರಾಜ್ ಕುಮಾರ್ ಸುತ್ತ ಗಿರಕಿ ಹೊಡೆಯುತ್ತಿದೆ. ಕಳೆದ ತಿಂಗಳಷ್ಟೇ ರಿಲೀಸ್ ಆದ ತಮಿಳಿನ 'ಥನಿ ಒರುವನ್' ಸಿನಿಮಾದ ರೀಮೇಕ್ ನಲ್ಲಿ ಪುನೀತ್ ರಾಜ್ ಕುಮಾರ್ ನಟಿಸುತ್ತಾರಂತೆ. ಹಾಗಂತ ಗಾಸಿಪ್ ಹಬ್ಬಿದೆ. ['ಚಕ್ರವ್ಯೂಹ' ಭೇದಿಸಲಿರುವ ಪವರ್ ಸ್ಟಾರ್ ಪುನೀತ್]
ಜಯಂ ರವಿ, ನಯನತಾರಾ ಅಭಿನಯಿಸಿರುವ 'ಥನಿ ಒರುವನ್' ಚಿತ್ರಕ್ಕೆ ಕಾಲಿವುಡ್ ನಲ್ಲಿ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಈ ಚಿತ್ರದ ರೀಮೇಕ್ ರೈಟ್ಸ್ ಗಾಗಿ ಕನ್ನಡದ ನಿರ್ಮಾಪಕರು ದುಂಬಾಲು ಬಿದ್ದಿದ್ದಾರಂತೆ. 
'ಥನಿ ಒರುವನ್' ಚಿತ್ರದ ರೀಮೇಕ್ ನಲ್ಲಿ ನಟಿಸುತ್ತೇನೆ ಅಂತ ಪುನೀತ್ ರಾಜ್ ಕುಮಾರ್ ಹೇಳಿಲ್ಲ. ಆದ್ರೆ, ಜಯಂ ರವಿ ಪಾತ್ರ ಪುನೀತ್ ರಾಜ್ ಕುಮಾರ್ ರವರಿಗೆ ಪರ್ಫೆಕ್ಟ್ ಆಗಿ ಸೂಟ್ ಆಗುತ್ತೆ ಅಂತ ಅಭಿಪ್ರಾಯ ಪಟ್ಟಿರುವ ಕೆಲವರು, ಅಪ್ಪುಗಾಗಿ ರೀಮೇಕ್ ರೈಟ್ಸ್ ಪರ್ಚೇಸ್ ಮಾಡುವುದಕ್ಕೆ ಕ್ಯೂ ನಿಂತಿದ್ದಾರೆ.
ರೀಮೇಕ್ ಹಕ್ಕುಗಳನ್ನ ಕೊಂಡು ಬಂದವರಿಗೆ ಪುನೀತ್ ರಾಜ್ ಕುಮಾರ್ ಗ್ರೀನ್ ಸಿಗ್ನಲ್ ನೀಡ್ತಾರೆ ಅನ್ನೋ ಗ್ಯಾರೆಂಟಿ ಇಲ್ಲ. ಸದ್ಯಕ್ಕೆ ಅಪ್ಪು ಕೈಯಲ್ಲಿ 'ದೊಡ್ಮನೆ ಹುಡುಗ', 'ಚಕ್ರವ್ಯೂಹ' ಸೇರಿದಂತೆ ಸಾಲು ಸಾಲು ಚಿತ್ರಗಳಿವೆ. ಅವೆಲ್ಲ ಮುಗಿದ ಬಳಿಕವಷ್ಟೆ ಹೊಸ ಚಿತ್ರದ ಮಾತು.
Fresh Kannada

Fresh Kannada

No comments:

Post a Comment

Google+ Followers

Powered by Blogger.