Breaking News
recent

ಚಾಮುಂಡೇಶ್ವರಿಗೆ ನಮಿಸಿ ಬಿಡುಗಡೆಗೆ ಸಿದ್ಧವಾದ ಮಿ. ಐರಾವತ

ಬಾಕ್ಸಾಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಕಾಯುತ್ತಿರುವ ಘಳಿಗೆ ಹತ್ತಿರವಾಗುತ್ತಿದೆ. ಯಾಕಂತೀರಾ?, ಯಾಕೆಂದರೆ 'ಅದ್ದೂರಿ' ನಿರ್ದೇಶಕ ಎ.ಪಿ ಅರ್ಜುನ್ ಆಕ್ಷನ್-ಕಟ್ ಹೇಳಿರುವ ಈ ವರ್ಷದ ಬಹು ನಿರೀಕ್ಷಿತ ಚಿತ್ರ 'ಮಿಸ್ಟರ್ ಐರಾವತ' ಅಕ್ಟೋಬರ್ 1 ರಂದು ತೆರೆ ಮೇಲೆ ಅಪ್ಪಳಿಸಲು ಸಜ್ಜಾಗಿದ್ದು, ಅಭಿಮಾನಿಗಳು ಕೌಂಟ್ ಡೌನ್ ಶುರು ಹಚ್ಚಿಕೊಂಡಿದ್ದಾರೆ. ಇನ್ನು ದರ್ಶನ್ ಅವರು ಖಾಕಿ ಬಟ್ಟೆಯಲ್ಲಿ ಕಾಣಿಸಿಕೊಂಡರೆ ಒಂಥರಾ ಖದರೇ ಬೇರೆ ಇರುತ್ತೆ ಅಂತ ಅಭಿಮಾನಿಗಳ ಅಭಿಪ್ರಾಯ. 'ಅಯ್ಯ', 'ಸ್ವಾಮಿ', ಹಾಗೂ 'ಅರ್ಜುನ್' ಚಿತ್ರದ ನಂತರ ಇದೀಗ ಮತ್ತೊಮ್ಮೆ ಪ್ರೇಕ್ಷಕರ ಎದುರು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಜಬರ್ದಸ್ತ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.[ದರ್ಶನ್ ಅಭಿನಯದ 'ಐರಾವತ' ಆಡಿಯೋ ವಿಮರ್ಶೆ] ನಿರ್ದೇಶಕ ಎ.ಪಿ ಅರ್ಜುನ್ ಅವರು ಆಕ್ಷನ್-ಕಟ್ ಹೇಳಿರುವ 'ಮಿಸ್ಟರ್ ಐರಾವತ' ಚಿತ್ರದಲ್ಲಿ ಪರಭಾಷಾ ನಟಿ ಊರ್ವಶಿ ರೌಟೇಲ ಅವರು ದರ್ಶನ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. ಈಗಾಗಲೇ ಅಭಿಮಾನಿಗಳ ಮನಗೆದ್ದಿರುವ ಟೀಸರ್, ಟ್ರೈಲರ್ ಗಳು ಸಾಮಾಜಿಕ ಜಾಲಾತಾಣಗಳಲ್ಲಿ ಸಖತ್ ರೆಸ್ಪಾನ್ಸ್ ಗಳಿಸುತ್ತಿದೆ.[ದರ್ಶನ್ ಕುತ್ತಿಗೆಗೆ ಕೈಹಾಕಿ ಆಚೆ ದಬ್ಬಿದವರು ಯಾರು?] ಇದೀಗ ಚಿತ್ರಕ್ಕೆ ಪೈನಲ್ ಟಚ್ ನೀಡಿರುವ ಎ.ಪಿ ಅರ್ಜುನ್ ಅವರು ಅಕ್ಟೋಬರ್ 1 ರಂದು ಚಿತ್ರವನ್ನು ತೆರೆ ಮೇಲೆ ತರುವುದಾಗಿ ತಿಳಿಸಿದ್ದಾರೆ. ಮುಂದೆ ಓದಿ..

Airavatha (2015) Kannada Movie Mp3 Songs Download
http://www.freshkannada.com/2015/08/airavatha-2015-kannada-movie-mp3-songs.html

'ಐರಾವತ'ನ ನಿರ್ದೇಶಕ ಎ.ಪಿ ಅರ್ಜುನ್ ಚಿತ್ರದ ಚಿತ್ರೀಕರಣ ಯಾವುದೇ ಅಡ್ಡಿ, ಆತಂಕಗಳಿಲ್ಲದೇ ಸರಾಗವಾಗಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಕ್ಯಾಮರಕ್ಕೆ ಆರತಿ ಬೆಳಗುವ ಮೂಲಕ ಪೂಜೆ ಸಲ್ಲಿಸಿದ ಚಿತ್ರದ ನಿರ್ದೇಶಕ ಎ.ಪಿ ಅರ್ಜುನ್

ಐರಾವತ ತಂಡದಿಂದ ವಿಕ್ಟರಿ ಚಿತ್ರದ ಕೊನೆಯ ಒಂದು ಸೀನ್ ನ ಶಾಟ್ ತೆಗೆಯಲು ಮೈಸೂರಿನ ಚಾಮುಂಡಿ ತಾಯಿಯ ಸನ್ನಿಧಾನಕ್ಕೆ ಬಂದ ಚಿತ್ರತಂಡ ವಿಕ್ಟರಿ ತೋರಿಸಿ ಸಂಭ್ರಮಿಸಿದ ಪರಿ.

'ಮಿಸ್ಟರ್ ಐರಾವತ' ಅಕ್ಟೋಬರ್ 1 ಕ್ಕೆ ತೆರೆಗೆ ಬಹುನಿರೀಕ್ಷೆಯ ಚಿತ್ರ 'ಐರಾವತ' ಅಕ್ಟೋಬರ್ 1 ರಂದು ಇಡೀ ಕರ್ನಾಟಕದಾದ್ಯಂತ ಎಲ್ಲೆಡೆ ತೆರೆಗೆ ಭರ್ಜರಿಯಾಗಿ ಅಪ್ಪಳಿಸುತ್ತಿದೆ. ಇದೇ ಖುಷಿಯಲ್ಲಿ ಚಿತ್ರತಂಡದ ಸಡಗರ

ನಿರ್ದೇಶಕ ಅರ್ಜುನನಿಂದ ದೇವಿಗೆ ಪ್ರಾರ್ಥನೆ ತಾಯಿ ಚಾಮುಂಡಿ ದೇವಿಯ ಸನ್ನಿಧಾನದಲ್ಲಿ ನಿರ್ದೇಶಕರು ಹಾಗು ಇಡೀ ಚಿತ್ರದ ಬಳಗ ಚಾಮುಂಡಿ ತಾಯಿಗೆ ಪ್ರಾರ್ಥನೆ ಸಲ್ಲಿಸಿದರು

'ಐರಾವತ'ನಿಗೆ ಫೈನಲ್ ಟಚ್ ಚಿತ್ರಕ್ಕೆ ಫೈನಲ್ ಟಚ್ ನೀಡಿ ಯಶಸ್ವಿಯಾಗಿ ಚಿತ್ರದ ಶೂಟಿಂಗ್ ಮುಗಿಸಿದ ಖುಷಿಯಲ್ಲಿ ಮೈಸೂರಿನಲ್ಲಿ ಸಂಭ್ರಮಪಟ್ಟ 'ಐರಾವತ' ತಂಡ

Mr Airavata Kannada Movie Trailer

Fresh Kannada

Fresh Kannada

No comments:

Post a Comment

Google+ Followers

Powered by Blogger.