Breaking News
recent

'ರೀಲ್' ಹೀರೋ ಪ್ರಜ್ವಲ್ ದೇವರಾಜ್ 'ರಿಯಲ್' ಪ್ರೇಮ್ ಕಹಾನಿ

28 ರ ಹರೆಯದ ಪ್ರಜ್ವಲ್ ದೇವರಾಜ್ ಸ್ಯಾಂಡಲ್ ವುಡ್ ಗೆ ಕಾಲಿಟ್ಟು 8 ವರ್ಷಗಳಾಗಿವೆ. 'ಸಿಕ್ಸರ್', 'ಗೆಳೆಯ', 'ಮೆರವಣಿಗೆ', 'ಗಲಾಟೆ', 'ನೀನಾದೆ ನಾ' ಮುಂತಾದ ಚಿತ್ರಗಳಿಂದ ಗುರುತಿಸಿಕೊಂಡಿರುವ ಮರಿ ಡೈನಾಮಿಕ್ ಸ್ಟಾರ್ ಇದೀಗ ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ನಾಂದಿ ಹಾಡುವ ತವಕದಲ್ಲಿದ್ದಾರೆ. [ಪ್ರಜ್ವಲ್ ದೇವರಾಜ್ ಪೀ..ಪೀ..ಪೀ..ಡುಂ..ಡುಂಗೆ ರೆಡಿ]
ಡೈನಾಮಿಕ್ ಸ್ಟಾರ್ ದೇವರಾಜ್ ಪುತ್ರನಿಗೆ ಕಂಕಣ ಬಲ ಕೂಡಿ ಬಂದಿದೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮದುವೆ ಸಂಭ್ರಮದಲ್ಲಿದ್ದಾರೆ. ದೀರ್ಘಕಾಲದ ಗೆಳತಿ ರಾಗಿಣಿ ಚಂದ್ರನ್ ಜೊತೆ ಪ್ರಜ್ವಲ್ ವಿವಾಹ ನಿಶ್ಚಯವಾಗಿದೆ. [ಪ್ರಜ್ವಲ್ ದೇವರಾಜ್ ಮನದನ್ನೆ ರಾಗಿಣಿ ಚಂದ್ರನ್ ಕುರಿತು...]

ಕಥಕ್ ನೃತ್ಯಗಾರ್ತಿ ಕಮ್ ಮಾಡೆಲ್ ಆಗಿರುವ ರಾಗಿಣಿ ಚಂದ್ರನ್ ಮತ್ತು ಪ್ರಜ್ವಲ್ ದೇವರಾಜ್ ರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಸ್ಯಾಂಡಲ್ ವುಡ್ ನ ಸ್ಟಾರ್ ಹೀರೋ ಆಗಿರುವ ಪ್ರಜ್ವಲ್ ದೇವರಾಜ್ ಲವ್ವಿಲ್ಲಿ ಬಿದ್ದಿದ್ದು ಹೇಗೆ ಅನ್ನೋದರ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

9ನೇ ಕ್ಲಾಸ್ ನಲ್ಲಿ ಪರಿಚಯ
ಇಂದು ಹಸೆಮಣೆ ಏರುವುದಕ್ಕೆ ಸಿದ್ಧವಾಗಿರುವ ಪ್ರಜ್ವಲ್ ದೇವರಾಜ್, ಮನದನ್ನೆ ರಾಗಿಣಿ ಚಂದ್ರನ್ ರವರನ್ನ ಮೊಟ್ಟ ಮೊದಲ ಬಾರಿಗೆ ನೋಡಿದ್ದು 9ನೇ ಕ್ಲಾಸ್ ನಲ್ಲಿದ್ದಾಗ. ಆಗ ರಾಗಿಣಿ ಚಂದ್ರನ್ 6ನೇ ಕ್ಲಾಸ್ ನಲ್ಲಿದ್ದರು.

ಡ್ಯಾನ್ಸ್ ಕ್ಲಾಸ್ ನಲ್ಲಿ ಪರಿಚಯ
ಇಮ್ರಾನ್ ಸರ್ದಾರಿಯಾ ಡ್ಯಾನ್ಸ್ ಕ್ಲಾಸ್ ನಲ್ಲಿ ಫ್ರೀ ಸ್ಟೈಲ್ ನೃತ್ಯ ಕಲಿಯುತ್ತಿರುವಾಗ ಪ್ರಜ್ವಲ್ ದೇವರಾಜ್ ಗೆ ರಾಗಿಣಿ ಚಂದ್ರನ್ ಪರಿಚಯವಾಯ್ತು.

ಆಗ್ಲಿಂದ್ಲೇ ಫ್ರೆಂಡ್ ಶಿಪ್
ಅಂದಿನಿಂದಲೇ ರಾಗಿಣಿ ಚಂದ್ರನ್ ಮತ್ತು ಪ್ರಜ್ವಲ್ ದೇವರಾಜ್ ಕ್ಲೋಸ್ ಫ್ರೆಂಡ್ಸ್. ಇಬ್ಬರಿಗೂ ಕಾಮನ್ ಫ್ರೆಂಡ್ಸ್ ಹೆಚ್ಚು. ಒಂದೇ ಫ್ರೆಂಡ್ಸ್ ಗ್ರೂಪ್ ನಲ್ಲಿರುವ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿ ಈಗ ಹಸೆಮಣೆ ತನಕ ಬಂದಿದೆ.

ವೃತ್ತಿ ಬದುಕಿನಲ್ಲಿ ಬೆಳೆದ ಮೇಲೆ ಪ್ರೀತಿ
ಕಾಲೇಜ್ ಮುಗಿದ ಬಳಿಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟು ಪ್ರಜ್ವಲ್ ದೇವರಾಜ್ ಸ್ಟಾರ್ ನಟರಾದರು. ಹಾಗೇ, ರಾಗಿಣಿ ಚಂದ್ರನ್ ಕೂಡ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟರು. ವೃತ್ತಿ ಬದುಕ್ಕಲ್ಲಿ ಯಶಸ್ಸು ಹೊಂದಿದ ಬಳಿಕ ಇಬ್ಬರ ಹೃದಯದಲ್ಲಿ ಪ್ರೀತಿ ಮೊಳಕೆಯೊಡೆದಿದೆ.

ಇಬ್ಬರ ಪ್ರೀತಿಗೆ ಮನೆಯವರ ಸಮ್ಮತಿ
ಸ್ಕೂಲ್ ಡೇಸ್ ನಿಂದಲೇ ಇಬ್ಬರು ಫ್ರೆಂಡ್ಸ್ ಆಗಿದ್ದ ಕಾರಣ, ಇಬ್ಬರ ಪ್ರೀತಿಗೆ ಕುಟುಂಬದಲ್ಲಿ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಖುಷಿಯಿಂದಲೇ ದೇವರಾಜ್ ಮದುವೆಗೆ ಸಮ್ಮತಿ ನೀಡಿದ್ದಾರೆ. ಮುಂದಿನ ತಿಂಗಳು ಪ್ರಜ್ವಲ್ ದೇವರಾಜ್ ಮದುವೆ ಅದ್ದೂರಿಯಾಗಿ ನೆರವೇರಲಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.