Breaking News
recent

ರೂಪಶ್ರೀಯನ್ನು ಚಿತ್ರರಂಗದಿಂದ ಬ್ಯಾನ್ ಮಾಡ್ಬೇಕಂತೆ.!

ನಟಿ ರೂಪಶ್ರೀ ವಿರುದ್ಧ ನಟಿ ಮೈತ್ರಿಯಾ ಗೌಡ ತಿರುಗಿ ಬಿದ್ದಿದ್ದಾರೆ. ಒಂದ್ಕಾಲದಲ್ಲಿ ಗಳಸ್ಯ ಕಂಠಸ್ಯದಂತಿದ್ದ ಇವರಿಬ್ಬರು ಇದೀಗ ಬೀದಿಗಿಳಿದಿದ್ದಾರೆ.
ಅತ್ತ ರೂಪಶ್ರೀ ವಿರುದ್ಧ ಮೈತ್ರಿಯಾ ಗೌಡ ಫೇಸ್ ಬುಕ್ ನಲ್ಲಿ ಮನಬಂದಂತೆ ಬೈದಿದ್ರೆ, ಇತ್ತ ಮೈತ್ರಿಯಾ ಗೌಡ ಡ್ರಾಮಾ ಮಾಡ್ತಿದ್ದಾರೆ ಅಂತ ರೂಪಶ್ರೀ ಹೇಳ್ತಿದ್ದಾರೆ. [ರೂಪಶ್ರೀ ಬಿಚ್ಚಿಟ್ಟ ಮೈತ್ರಿಯಾ ಗೌಡ 'ರಿಯಲ್' ಡ್ರಾಮಾ]
ರೂಪಶ್ರೀ ಬಿಚ್ಚಿಟ್ಟ ಮೈತ್ರಿಯಾ ಗೌಡ 'ರಿಯಲ್' ಡ್ರಾಮಾ
ಈಗ ಇವರಿಬ್ಬರ ಕೋಳಿ ಜಗಳ ಫಿಲ್ಮ್ ಚೇಂಬರ್ ಮೆಟ್ಟಿಲೇರಿದೆ. ನಟಿ ರೂಪಶ್ರೀಯನ್ನ ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡ್ಬೇಕಂತ ಮೈತ್ರಿಯಾ ಗೌಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.
''ನನ್ನ ಹಾಗೂ ಕಾರ್ತಿಕ್ ಗೌಡರವರ ನಡುವೆ ನಡೆಯುತ್ತಿರುವ ಕಾನೂನು ಸಮರದಲ್ಲಿ ರೂಪಶ್ರೀ ಅನಗತ್ಯವಾಗಿ ತಲೆತೂರಿಸುತ್ತಿದ್ದಾರೆ. ನನ್ನ ಚಾರಿತ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಹಾಗೂ ಸಾಕ್ಷಿ ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ.''
''ಹಿರಿಯ ನಟ ಅಂಬರೀಶ್ ಕುರಿತು ಹಾಗೂ ನನ್ನ ಮತ್ತು ಅವರ ಅಭಿಮಾನದ ವಿಷಯ ಕುರಿತು ಬಹಳ ಕೆಟ್ಟ ಟೀಕೆ ಮಾಡಿದ್ದಾರೆ. ಇದರಿಂದ ನನ್ನ ಮನಸ್ಸಿಗೆ ನೋವು ಉಂಟಾಗಿದೆ.'' [ನಟಿ ರೂಪಶ್ರೀಯನ್ನು ಬಾಯಿಗೆ ಬಂದಂತೆ ಬೈದ ಮೈತ್ರಿಯಾ ಗೌಡ]
''ನನ್ನ ನಡತೆ ಕರಪ್ಟ್ ಆಗಿದೆ ಅಂತ ಅಪಪ್ರಚಾರ ಮಾಡುತ್ತಿದ್ದಾರೆ. ಅವರು ನನ್ನ ಬಗ್ಗೆ ಮಾತನಾಡಿರುವ ಆಡಿಯೋ ರೆಕಾರ್ಡಿಂಗ್ ಕೂಡ ನನ್ನ ಬಳಿ ಇದೆ. ಹೀಗಾಗಿ ರೂಪಶ್ರೀ ಅವರನ್ನ ಚಿತ್ರರಂಗದಿಂದ ಬ್ಯಾನ್ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ'' ಅಂತ ನಟಿ ಮೈತ್ರಿಯಾ ಗೌಡ ಪತ್ರ ಬರೆದಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.