Breaking News
recent

ಆರು ವಿಲನ್‌ಗಳೊಂದಿಗೆ ಸೆಣೆಸಲಿದ್ದಾರೆ ಕಿಚ್ಚ ಸುದೀಪ್!

ಅಬ್ಬಬ್ಬಾ ಅಂದ್ರೆ ಒಂದು ಚಿತ್ರದಲ್ಲಿ ಎಷ್ಟು ವಿಲನ್ ಗಳಿರಬಹುದು? ಒಂದು, ಎರಡು ಇಲ್ಲಾ ಮೂರು,, ಆದರೆ ಕಿಚ್ಚ ಸುದೀಪ್ ಅವರ ಮುಂದಿನ ಚಿತ್ರದಲ್ಲಿ ಬರೋಬ್ಬರಿ ಆರು ವಿಲನ್ ಗಳಿದ್ದಾರೆ. ಅವರು ಘಟಾನುಘಟಿಗಳು.
ಕಿಚ್ಚ ಸುದೀಪ್ ತಮ್ಮ ಮುಂದಿನ ಚಿತ್ರದಲ್ಲಿ ಆರು ವಿಲನ್ ಗಳೊಂದಿಗೆ ಸೆಣೆಸಲಿದ್ದಾರೆ. ವಿವಿಧ ಭಾಷೆಯಲ್ಲಿ ಚಿತ್ರ ತಯಾರಾಗುತ್ತಿದ್ದು ತಮಿಳಿನಲ್ಲಿ 'ಮುಡಿಂಜಾ ಇವನಾ ಪುಡಿ' ಎಂದು ನಾಮಕರಣ ಮಾಡಲಾಗಿದೆ. ಕನ್ನಡದಲ್ಲಿ 'ಕೋಟಿಗೊಬ್ಬ-2' ಹೆಸರು ಅಂತಿಮ ಎಂಬುದು ಗಾಂಧಿನಗರದ ವಾರ್ತೆ.
ಬಹುಭಾಷಾ ನಟ ಪ್ರಕಾಶ್ ರೈ, ಕೆಂಪೇಗೌಡದ ರವಿಶಂಕರ್, ನಾಜರ್, ಶರತ್ ಲೋಹಿತಾಶ್ವ, ಮುಖೇಶ್ ತಿವಾರಿ, ಅವಿನಾಶ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದು ಅಭಿಮಾನಿಗಳು ಡೈಲಾಗ್ ವೈಭವ ಅನುಭವಿಸುವುದ್ರಲ್ಲಿ ಅನುಮಾನವಿಲ್ಲ.[ಏನು..'ಬಿಗ್ ಬಾಸ್'ನಿಂದ ಸುದೀಪ್ ಹೊರ ನಡೆದ್ರಾ?]
ನಿರ್ದೇಶಕರು ಪಾತ್ರದ ಆಯ್ಕೆಗೆ ಯಾವ ತಂತ್ರ ಅನುಸರಿಸಿದ್ದಾರೆ ಅನ್ನೋದು ಸಿಕ್ರೇಟ್,  ಎಲ್ಲ ವರ್ಗದವರನ್ನು, ಭಾಷಿಕರನ್ನು ಚಿತ್ರಮಂದರಿಕ್ಕೆ ಸೆಳೆಯಬೇಕು ಎಂತಲೇ ಹೀಗೆ ಮಾಡಲಾಗಿದೆಯೇ? ಉತ್ತರವನ್ನು ನಿರ್ದೇಶಕರ ಬಳಿಯೇ ಕೇಳ್ಬೇಕು. ಹಾಗಾದ್ರೆ ಯಾರ್ಯಾರು ವಿಲನ್ ಆಗಿ ಕಾಣಿಸ್ಕೊಳ್ಳಲಿಕ್ಕಿದ್ದಾರೆ ನೋಡ್ಕಂಡು ಬರೋಣ...
Fresh Kannada

Fresh Kannada

No comments:

Post a Comment

Google+ Followers

Powered by Blogger.