Breaking News
recent

ಕಿಚ್ಚನ ದಾಂಪತ್ಯದಲ್ಲಿ ಕಿಚ್ಚು : ಸುದೀಪ್ ಹೇಳಿದ್ದೇನು?

ಕಿಚ್ಚ ಸುದೀಪ್ ಅಭಿಮಾನಿಗಳು ಸಹಿಸಿಕೊಳ್ಳೋಕೆ ಆಗದ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. 'ನಲ್ಲ'ನ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದೆ. 14 ವರ್ಷಗಳ ವೈವಾಹಿಕ ಜೀವನಕ್ಕೆ ಶುಭಂ ಹಾಡಲು ಸುದೀಪ್ ಮತ್ತು ಪತ್ನಿ ಪ್ರಿಯಾ ನಿರ್ಧರಿಸಿದ್ದಾರೆ.
ವಿಚ್ಛೇದನಕ್ಕೆ ಅರ್ಜಿ ಕೋರಿ ಸುದೀಪ್ ಪತ್ನಿ ಪ್ರಿಯಾ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಸ್ವತಃ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. [14 ವರ್ಷದ ಸುದೀಪ್ ದಾಂಪತ್ಯ ಜೀವನದಲ್ಲಿ ಬಿರುಗಾಳಿ: ಡೈವೋರ್ಸ್!]
''ಇದು ನನ್ನ ವೈಯುಕ್ತಿಕ ವಿಷಯ. ನನಗೆ ಈಗ ಫ್ಯಾಮಿಲಿ ಸ್ಪೇಸ್ ಬೇಕು. ಮನಸ್ತಾಪ-ಭಿನ್ನಾಭಿಪ್ರಾಯ ಎಲ್ಲರ ಕುಟುಂಬದಲ್ಲೂ ಇರುತ್ತದೆ. ಸರಿ ಹೋಗುತ್ತೆ ಅನ್ನುವ ಆಶಯ ಇದೆ. ಚಿಕ್ಕ ಮ್ಯಾಟರ್ ಇದು.''
''ವಾಹಿನಿಗಳಲ್ಲಿ ಬರುತ್ತಿರುವ ಹಾಗೆ ಜೀವನಾಂಶ ಕೊಡುವ ವಿಚಾರ ಸುಳ್ಳು. ಇದನ್ನ ಅನವಶ್ಯಕವಾಗಿ ದೊಡ್ಡದು ಮಾಡ್ಬೇಡಿ. ನನಗೆ ಒಳ್ಳೆಯದಾಗಲಿ ಅಂತ ಹಾರೈಸಿ. ಎಲ್ಲರಿಗೂ ಜೀವನ ಇದೆ. ಎಲ್ಲರಿಗೂ ಫ್ಯಾಮಿಲಿ ಇದೆ. ಸಂಸಾರದಲ್ಲಿ ಕಿತ್ತಾಟ ಇದ್ದೇ ಇರುತ್ತೆ. ಎಲ್ಲಾ ಸರಿಹೋಗುತ್ತೆ.''
''ನಮ್ಮಿಬ್ಬರ ನಡುವೆ ಸ್ನೇಹ-ಪ್ರೀತಿ ಚೆನ್ನಾಗಿದೆ. WE WILL BE FINE. ಎಲ್ಲಾ ಸಮಸ್ಯೆಗಳನ್ನು ಎದುರಿಸಿದ್ದೇನೆ. ಈಗಲೂ ನಾನೇ ರೆಸ್ಪಾನ್ಸ್ ಮಾಡುತ್ತಿದ್ದೇನೆ. ಸಮಾಜಕ್ಕೆ ತಪ್ಪು ಸಂದೇಶ ರವಾನೆ ಆಗಬಾರದು ಅನ್ನುವ ಕಾರಣಕ್ಕೆ.''
''ವೈಯುಕ್ತಿಕ ನೋವಿನಿಂದ ಸಾಮಾಜಿಕ ಜವಾಬ್ದಾರಿ ಮರೆಯಲ್ಲ. ವೈಯುಕ್ತಿಕ ನೋವಿದ್ದರೂ, ಜನರ ನೋವಿಗೆ ಸ್ಪಂದಿಸಿದ್ದೇನೆ. ನನ್ನ ವ್ಯಕ್ತಿತ್ವ, ನನ್ನ ಕೆಲಸ ಚೇಂಜ್ ಆಗಿಲ್ಲ. ಚೇಂಜ್ ಆಗಿರೋದು ನನ್ನ ಪರ್ಸನಲ್ ಲೈಫ್. ಚಿಕ್ಕ ವಿಷಯ ಇದು. ಸರಿ ಹೋಗುತ್ತದೆ.'' ಅಂತ ಕಿಚ್ಚ ಸುದೀಪ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.