Breaking News
recent

ಆಸ್ಕರ್ ರೇಸಿನಲ್ಲಿ ಕನ್ನಡ ಚಿತ್ರ 'ಕೇರ್ ಆಫ್ ಫುಟ್ಪಾತ್'-2

ಮಾಸ್ಟರ್ ಕಿಶನ್ ನಿರ್ದೇಶನದ ಕೇರ್ ಆಫ್ ಫುಟ್ ಪಾತ್ ಭಾಗ -2 ಚಿತ್ರ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ರೇಸಿಗೆ ಸೇರ್ಪಡೆಯಾಗಿದೆ. ಕನ್ನಡ ಭಾಷೆಯ ಚಿತ್ರವೊಂದು ಈ ರೀತಿ ನೇರವಾಗಿ ಆಸ್ಕರ್ ಗೆ ಸ್ಪರ್ಧಿಸುತ್ತಿರುವುದು ಇದೇ ಮೊದಲು.
ಆಸ್ಕರ್ ಪ್ರಶಸ್ತಿಗಾಗಿ ಡಿ.2ರಿಂದ ಈ ನಾಮನಿರ್ದೇಶನ ಪ್ರಕ್ರಿಯೆ ಶುರುವಾಗಲಿದೆ.ಆಸ್ಕರ್ ಪ್ರಶಸ್ತಿಯ 'ಅತ್ಯುತ್ತಮ ವಿದೇಶಿ ಭಾಷಾ ಚಿತ್ರ' ವಿಭಾಗಕ್ಕೆ ಭಾರತದಿಂದ ಯಾವ ಚಿತ್ರ ಸ್ಪರ್ಧಿಸಬೇಕು ಎಂಬುದನ್ನು ಅಮೋಲ್ ಪಾಲೇಕರ್ ನೇತೃತ್ವದ ಸಮಿತಿ ನಿರ್ಧರಿಸಿದೆ.

ಈ ಬಾರಿ ಮರಾಠಿ ಭಾಷೆಯ 'ಕೋರ್ಟ್' ಚಿತ್ರ ಭಾರತದಿಂದ ಅಧಿಕೃತವಾಗಿ ನಾಮನಿರ್ದೇಶನಗೊಂಡಿದೆ. ಚೊಚ್ಚಲ ನಿರ್ದೇಶಕರಾಗಿ ಚೈತನ್ಯ ತಮ್ಹಾನೆ ಮೊದಲ ಯತ್ನದಲ್ಲೇ ಆಸ್ಕರ್ ಗೆ ಲಗ್ಗೆ ಇಟ್ಟಿದ್ದಾರೆ. ವೀರ್ ಸಾಥಿದಾರ್ ಹಾಗೂ ವಿವೇಕ್ ಗೊಂಬೆರ್ ಚಿತ್ರದಲ್ಲಿದ್ದಾರೆ. [ಆಸ್ಕರ್ ರೇಸಿಗೆ ಬಾಹುಬಲಿ ಭಾರತದಿಂದ ಸೇರ್ಪಡೆ?]

ಎಸ್ ಎಸ್ ರಾಜಮೌಳಿ ಅವರ ನಿರ್ದೇಶನದ ಅತ್ಯಂತ ದುಬಾರಿ ಚಿತ್ರ 'ಬಾಹುಬಲಿ' ಜೊತೆಗೆ ವಿಶಾಲ್ ಭಾರದ್ವಾಜ್ ಅವರ 'ಹೈದರ್', ರಾಜಕುಮಾರ್ ಹಿರಾನಿ ಅವರ 'ಪಿಕೆ', ಅನುರಾಗ್ ಕಶ್ಯಪ್ ಅವರ 'ಅಗ್ಲಿ', ಒಮುಂಗ್ ಕುಮಾರ್ ಅವರ 'ಮೇರಿ ಕೋಮ್', ಮಸಾನ್ (ಹಿಂದಿ), ತಮಿಳಿನ ಕಾಕಾ ಮುಟ್ಟೈ ಚಿತ್ರಗಳು ಆಯ್ಕೆ ಸಮಿತಿ ಮುಂದಿತ್ತು.

ಕಿಶನ್ ಚಿತ್ರ ಆಯ್ಕೆ ಹೇಗೆ? : ಅಧಿಕೃತ ಎಂಟ್ರಿ ಜೊತೆಗೆ ಲ್ಯಾಟರಲ್ ಎಂಟ್ರಿ ಮೂಲಕ ಯಾರು ಬೇಕಾದರೂ ಸ್ವತಂತ್ರವಾಗಿ ತಮ್ಮ ಚಿತ್ರವನ್ನು ಸ್ಪರ್ಧೆಗೆ ಕಳಿಸಬಹುದು. ಆಯ್ಕೆದಾರರು ಮೆಚ್ಚಿದರೆ ಲ್ಯಾಟರಲ್ ಎಂಟ್ರಿಯಾಗಿ ಸ್ಪರ್ಧಿಸಲು ಅರ್ಹತೆ ಪಡೆದುಕೊಳ್ಳುತ್ತದೆ. ಈಗ ಮಾಸ್ಟರ್ ಕಿಶನ್ ನಿರ್ದೇಶನದ ಕೇರ್ ಆಫ್ ಫುಟ್ ಪಾತ್ ಚಿತ್ರ ಕೂಡಾ ಈ ರೀತಿ ಅರ್ಹತೆ ಪಡೆದುಕೊಂಡಿದೆ. [ಗೀತೂ ಮೊದಲ ಚಿತ್ರವೇ ಆಸ್ಕರ್ ರೇಸಿಗೆ ಆಯ್ಕೆ]
ಆಸ್ಕರ್ ಸಮಿತಿ ಅವರು ಅಕ್ಟೋಬರ್ ತಿಂಗಳಿನಲ್ಲಿ ಕೇರ್ ಆಫ್ ಫುಟ್ ಪಾತ್ 2 ಚಿತ್ರವನ್ನು ವೀಕ್ಷಿಸಲಿದ್ದಾರೆ. ಚಿತ್ರವನ್ನು ನವೆಂಬರ್​ನಲ್ಲಿ ರಾಜ್ಯಾದ್ಯಂತ ಹಾಗೂ ವಿದೇಶಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಕಿಶನ್ ಹೇಳಿದರು.
ಕಲರ್ಸ್ ವಾಹಿನಿ ಸಸುರಾಲ್ ಸಿಮಾರ್ ಕಾ, ಬಾಲಿಕಾ ವಧು ಖ್ಯಾತಿಯ ನಟಿ ಅವಿಕಾ ಗೋರ್, ಹೇಮಮಾಲಿನಿ ಪುತ್ರಿ ಇಶಾ ಡಿಯೋಲ್, ಈ ಟಿವಿ ಧಾರಾವಾಹಿ ಅಶ್ವಿನಿ ನಕ್ಷತ್ರ ಖ್ಯಾತಿಯ ಜೆಕೆ ಅವರು ಮುಖ್ಯಭೂಮಿಕೆಯಲ್ಲಿರುವ ಕೇರ್ ಆಫ್ ಫುಟ್ ಪಾತ್ ಚಿತ್ರದಲ್ಲಿ ನಟಿಸಿದ್ದಾರೆ.

ಕೇರ್ ಆಫ್ ಫುಟ್ ಪಾತ್ 2 ಚಿತ್ರದ ಮೋಷನ್ ಪೋಸ್ಟರ್ ಕೂಡಾ ಬಿಡುಗಡೆಯಾಗಿದ್ದು, ಭಾರತದಿಂದ ಯಾವ ಯಾವ ಭಾಷೆಯಿಂದ ಎಷ್ಟೆಷ್ಟು ಚಿತ್ರಗಳು ಆಸ್ಕರ್ ಸ್ಪರ್ಧೆಗೆ ಆಯ್ಕೆಯಾಗಿವೆ ಎಂಬ ಮಾಹಿತಿಯನ್ನು ನೀಡಲಾಗಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.