Breaking News
recent

14 ವರ್ಷದ ಸುದೀಪ್ ದಾಂಪತ್ಯ ಜೀವನದಲ್ಲಿ ಬಿರುಗಾಳಿ: ಡೈವೋರ್ಸ್!

ಕನ್ನಡ ಚಿತ್ರೋದ್ಯಮದಲ್ಲಿ ಅಲ್ಲದೇ, ಪಕ್ಕದ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲೂ ಹೆಸರು ಮಾಡಿರುವ ಕಿಚ್ಚ ಸುದೀಪ್ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎಬ್ಬಿದೆ.
ಪ್ರೀತಿಸಿ ಮದುವೆಯಾಗಿದ್ದ ಸುದೀಪ್ ಮತ್ತು ಪ್ರಿಯಾ ರಾಧಾಕೃಷ್ಣನ್ ದಂಪತಿಗಳು ವಿವಾಹ ವಿಚ್ಚೇದನ ನೀಡಲು ಮುಂದಾಗಿರುವ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಕೇರಳದ ನಾಯರ್ ಕುಟುಂಬದ ಪ್ರಿಯಾ ಮತ್ತು ಸರೋವರ್ ಕುಟುಂಬದ ಸುದೀಪ್, ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ಓದುತ್ತಿರುವಾಗಲೇ ಒಬ್ಬರೊನ್ನೊಬ್ಬರು ಪ್ರೀತಿಸುತ್ತಿದ್ದರು.
ಈಗ ಹದಿನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಡೈವೋರ್ಸ್ ಮೂಲಕ ಮಂಗಳ ಹಾಡುವ ಶಾಕಿಂಗ್ ನ್ಯೂಸ್ ಶುಕ್ರವಾರ (ಸೆ 11) ರಾತ್ರಿ ಹರಿದಾಡುತ್ತಿದೆ. ಪರಸ್ಪರ ಒಪ್ಪಿಗೆಯಿಂದಲೇ ಇಬ್ಬರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.
ತಮಿಳು ಪುಲಿ ಚಿತ್ರದ ಡಬ್ಬಿಂಗಿಗಾಗಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬಂದಿರುವ ಸುದೀಪ್, ಸಂಸಾರದಲ್ಲಿನ ಬಿರುಕಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದು ನನ್ನ ವೈಯಕ್ತಿಕ ಜೀವನದ ವಿಷಯು ಎಂದಿದ್ದಾರೆ.(ಸುದೀಪ್ ಹೇಳಿಕೆ ಕೊನೆಯ ಸ್ಲೈಡಿನಲ್ಲಿದೆ)
ಮಾಧ್ಯಮಗಳಲ್ಲಿ ಬರುತ್ತಿರುವ ಕೆಲವೊಂದು ಲಭ್ಯ ಮಾಹಿತಿಗಳನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಮಗಳನ್ನು ತಾಯಿ ವಶಕ್ಕೆ ನೀಡಲು ಒಪ್ಪಿಗೆ 
ಹೆಚ್ಚಿನ ಕಾರ್ಯಕ್ರಮಗಳಲ್ಲಿ ತನ್ನ ಮಗಳ ಬಗ್ಗೆ ಸುದೀಪ್ ಬಹಳ ಪ್ರೀತಿಯ ಮಾತನ್ನಾಡುತ್ತಿದ್ದರು. ಈಗ ಮಗಳನ್ನು ತನ್ನ ಪತ್ನಿಯ ಸುಪರ್ದಿಗೆ ವಹಿಸಲು ಸುದೀಪ್ ಒಪ್ಪಿಗೆ ನೀಡಿದ್ದಾರೆ ಎನ್ನುವ ಸುದ್ದಿಯಿದೆ.
ಜೀವನಾಂಶ 
ಪತ್ನಿ ಪ್ರಿಯಾಗೆ 19 ಕೋಟಿ ಜೀವನಾಂಶ ನೀಡಲು ಸುದೀಪ್ ಒಪ್ಪಿಗೆ ಸೂಚಿಸಿದ್ದಾರೆ ಎನ್ನುವ ಮಾಹಿತಿಯೂ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಆದರೆ, ಇದು ಸರಿಯಾದ ಮಾಹಿತಿಯಲ್ಲ ಎಂದು ಸುದೀಪ್ ಹೇಳಿದ್ದಾರೆಯೇ ಹೊರತು ಸರಿಯಾದ ಜೀವನಾಂಶ ಮೊತ್ತವೆಷ್ಟು ಎಂದು ಹೇಳಲು ನಿರಾಕರಿಸಿದ್ದಾರೆ.
ಕೌಟುಂಬಿಕ ನ್ಯಾಯಾಲಯ 
ಸುದೀಪ್ ಪತ್ನಿ ಪ್ರಿಯಾ ಮತ್ತು ಸುದೀಪ್ ಪರವಾಗಿ ಅವರ ಸಹೋದರಿ ಕೌಟುಂಬಿಕ ನ್ಯಾಯಾಲಯದಲ್ಲಿ ಇಂದು ಹಾಜರಾಗಿ, ಡೈವೋರ್ಸಿಗೆ ಅರ್ಜಿ ಹಾಕಿದ್ದಾರೆ ಎನ್ನಲಾಗುತ್ತಿದೆ.
2001ರಲ್ಲಿ ಸಪ್ತಪದಿ 
ಸುದೀಪ್ ಮತ್ತು ಪ್ರಿಯಾ 2001ರಲ್ಲಿ ಸಪ್ತಪದಿ ತುಳಿದಿದ್ದರು. ಪ್ರೀತಿಸಿ ಮದುವೆಯಾಗಿದ್ದ ಇಬ್ಬರ ಹದಿನಾಲ್ಕು ವರ್ಷದ ಜೀವನ ವಿಚ್ಚೇದನಕ್ಕೆ ಬಂದಿರುವುದು ಕಿಚ್ಚ ಸುದೀಪ್ ಅವರ ಲಕ್ಷಾಂತರ ಅಭಿಮಾನಿಗಳಿಗೆ ಶಾಕ್ ನೀಡಿದೆ.
ಪತ್ನಿಗಾಗಿ ಈವೆಂಟ್ ಮ್ಯಾನೇಜ್ಮೆಂಟ್ 
ಮಹಿಳೆಯರು ಸ್ವಾವಲಂಬಿಯಾಗಿ ಬದುಕಬೇಕೆಂದು ಹಲವಾರು ಬಾರಿ ಹೇಳಿದ್ದ ಸುದೀಪ್, ಪತ್ನಿಗಾಗಿ '360 ಸ್ಟೇಜ್' ಎನ್ನುವ ಹೆಸರಿನಲ್ಲಿ ಈವೆಂಟ್ ಮ್ಯಾನೇಜ್ಮೆಂಟ್ ಕಂಪೆನಿ ತೆರೆದಿದ್ದರು.
ಸುದೀಪ್ ಹೇಳಿಕೆ 
ನಾನೊಬ್ಬ ಸೆಲೆಬ್ರಿಟಿ ಅನ್ನೋದನ್ನು ಬಲ್ಲೆ, ನನಗೆ ಅಭಿಮಾನಿಗಳು ಇದ್ದಾರೆನ್ನುವುದು ನಾನು ಬಲ್ಲೆ. ನನಗೂ ಅನ್ನೋದು ಒಂದು ಜೀವನವಿದೆ. ನನ್ನ ಪುಟ್ಟ ಕುಟುಂಬದ ಸಮಸ್ಯೆಯಿದು. ಈ ವಿಷಯವನ್ನು ದೊಡ್ಡದು ಮಾಡಬೇಡಿ. ಜೀವನಾಂಶದ ವಿಚಾರದಲ್ಲಿ ಪ್ರಸಾರವಾಗುತ್ತಿರುವ ಸುದ್ದಿಯ ಬಗ್ಗೆ ನನ್ನ ಸಹಮತವಿಲ್ಲ ಎಂದು ಸುದೀಪ್, ಪ್ರಜಾ ಟಿವಿಗೆ ದೂರವಾಣಿ ಮೂಲಕ ನೀಡಿದ ಕ್ವಿಕ್ ಸಂದರ್ಶನದಲ್ಲಿ ಹೇಳಿದ್ದಾರೆ.


Watch Kannada Actor Kiccha Sudeep And Wife Priya Files For Divorce. Sudeep Statement.
Fresh Kannada

Fresh Kannada

No comments:

Post a Comment

Google+ Followers

Powered by Blogger.