Breaking News
recent

ಕೆಂಡಸಂಪಿಗೆ ಪಾರ್ಟ್ -1 ಕಾಗೆ ಬಂಗಾರದ ಹೀರೋ ಯಾರು?

ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಸದ್ಯಕ್ಕೆ ಕಾಮಿಡಿ ರೋಲ್ ನಲ್ಲಿ ಮಿಂಚುತ್ತಿರುವ ಭಾರಿ ಬೇಡಿಕೆಯ ನಟ ಅಂದ್ರೆ ಅದು ಪ್ರಶಾಂತ್ ಸಿದ್ದಿ. ಹೌದು ಈ ಪ್ರಶಾಂತ್ ಸಿದ್ದಿ ಯಾರು ಅಂತ ನೀವು ಯೋಚನೆ ಮಾಡುತ್ತಿದ್ದೀರಾ?,
ಅದೇ 'ಅಣ್ಣಾಬಾಂಡ್', 'ಆರ್ ಎಕ್ಸ್ ಸೂರಿ' ಹಾಗೂ ಇತ್ತೀಚೆಗೆ ಬಿಡುಗಡೆಯಾಗಿ ಬಾಕ್ಸಾಫೀಸ್ ನಲ್ಲಿ ಒಳ್ಳೆ ಕಲೆಕ್ಷನ್ ಮಾಡುತ್ತಿರುವ ನಿರ್ದೇಶಕ ದುನಿಯಾ ಸೂರಿ ಅವರ 'ಕೆಂಡಸಂಪಿಗೆ' 'ಗಿಣಿಮರಿ ಕೇಸ್ ಪಾರ್ಟ್ 2' ಚಿತ್ರದಲ್ಲಿ ಒಬ್ಬ ಕಪ್ಪಗೆ, ಕುಳ್ಳಗೆ, ಒಂಥರಾ ಆಫ್ರಿಕನ್ ನೀಗ್ರೋಗಳ ತರ ಇರುವ ವ್ಯಕ್ತಿಯನ್ನು ನೀವು ನೋಡಿರಬೇಕಲ್ಲಾ. ಅವರೇ ಈ ಪ್ರಶಾಂತ್ ಸಿದ್ದಿ.
ಅಂದಹಾಗೆ ನಾವು ಇವರ ಬಗ್ಗೆ ಯಾಕಪ್ಪಾ ಇಷ್ಟೊಂದು ಪೀಠಿಕೆ ಹಾಕುತ್ತಿದ್ದೇವೆ ಅಂತ ನೀವು ಕನ್ ಫ್ಯೂಶನ್ ಆಗಿದ್ದೀರಾ?. ಯಾಕೆಂದರೆ ಡೈರೆಕ್ಟರ್ ದುನಿಯಾ ಸೂರಿ ಅವರ 'ಕೆಂಡಸಂಪಿಗೆ' ಗಿಣಿಮರಿ ಕೇಸ್ ಭಾಗ-2' ತೆರೆ ಕಂಡು ಭರ್ಜರಿ ಪ್ರದರ್ಶನ ಕಾಣುತ್ತಿರುವಾಗಲೇ ಚಿತ್ರದ ಮುಂದುವರಿದ ಭಾಗ ಅಂದರೆ ಭಾಗ-1' ಸದ್ಯದಲ್ಲೇ ತೆರೆ ಮೇಲೆ ಬರಲಿದೆ. ['ಕೆಂಡಸಂಪಿಗೆ' ವಿಮರ್ಶೆ - ಸೂರಿಯ ಹೊಸ 'ದುನಿಯಾ']
ಇದಕ್ಕಾಗಿ ನಿರ್ದೇಶಕರು ಈಗಾಗಲೇ ಚಿತ್ರಕ್ಕೆ ನಾಯಕನನ್ನು ಕೂಡ ಆಯ್ಕೆ ಮಾಡಿದ್ದಾರೆ. ಇದೀಗ ಮುಂದಿನ ಭಾಗಕ್ಕೆ 'ಕಾಗೆ ಬಂಗಾರ' ಎಂದು ಟೈಟಲ್ ಫಿಕ್ಸ್ ಮಾಡಿದ್ದು, ನಾಯಕನಾಗಿ ಮುಖ್ಯ ಪಾತ್ರದಲ್ಲಿ ಕಾಮಿಡಿ ನಟ ಸಿದ್ದಿ ಪ್ರಶಾಂತ್ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈಗಾಗಲೇ ಚಿತ್ರದ ಕೆಲವೊಂದು ಭಾಗದ ಶೂಟಿಂಗ್ ಮುಗಿದಿದ್ದು, ಇದೇ ನವೆಂಬರ್-ಡಿಸೆಂಬರ್ ನಲ್ಲಿ 'ಕಾಗೆ ಬಂಗಾರ' ಸಂಪೂರ್ಣ ಚಿತ್ರೀಕರಣ ಮುಕ್ತಾಯಗೊಳಿಸಿ ಫೈನಲ್ ಟಚ್ ನೀಡಲಿದ್ದು, ಮುಂದಿನ ವರ್ಷ ಅಂದರೆ 2016ರ ಫೆಬ್ರವರಿಯಲ್ಲಿ ಚಿತ್ರ ತೆರೆ ಮೇಲೆ ಅಪ್ಪಳಿಸಲಿದೆ. [ದುನಿಯಾ ಸೂರಿ 'ಕೆಂಡಸಂಪಿಗೆ'ಗೆ ಸಿಕ್ತಾ ವಿಮರ್ಶಕರ ಜೈಕಾರ?]
ನಿರ್ದೇಶಕ-ಸಾಹಿತಿ ಯೋಗರಾಜ್ ಭಟ್ಟರ ಎಲ್ಲಾ ಚಿತ್ರಗಳಲ್ಲೂ ಸಿದ್ದಿ ಪ್ರಶಾಂತ್ ಒಬ್ಬ ಕಾಮಿಡಿ ನಟನಾಗಿ ಕಾಣಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ನಾಯಕ ನಟನಾಗಿ ಮಿಂಚುತ್ತಿದ್ದಾರೆ.[ಕೆಂಡಸಂಪಿಗೆ ಟ್ವಿಟ್ಟರ್ ನಲ್ಲೂ ಘಮ ಘಮ ಪರಿಮಳ]
ಇನ್ನು ಸೂರಿ ಅವರು ಹೊಸಬರನ್ನು ಹಾಕಿಕೊಂಡು ಮಾಡುತ್ತಿರುವ ಪ್ರಯೋಗದಲ್ಲಿ ಎಲ್ಲಾ ಕಡೆ ಗೆಲುವು ಸಾಧಿಸಿದ್ದು, ಇದೀಗ ಈ ಚಿತ್ರದ ಮುಂದುವರಿದ ಭಾಗದಲ್ಲೂ ಕಮಾಲ್ ಮಾಡಲು ಹೊರಟಿದ್ದಾರೆ. ಚಿತ್ರಕ್ಕೆ ವಿ.ಹರಿಕೃಷ್ಣ ಅವರು ಸಂಗೀತ ನಿರ್ದೇಶನ ಮಾಡಲಿದ್ದು, ಸತ್ಯ ಹೆಗಡೆ ಕ್ಯಾಮರ ಹಿಡಿದಿದ್ದಾರೆ.['ಕೆಂಡಸಂಪಿಗೆ' ಆಯ್ತು, ಮುಂದೆ 'ಕಾಗೆ ಬಂಗಾರ'.!]
ಒಟ್ನಲ್ಲಿ ಪ್ರತಿಭಾವಂತ ನಿರ್ದೇಶಕ ಸೂರಿ ಅವರು ಹೊಸ ಪ್ರತಿಭೆಗಳನ್ನು ಹುಡುಕಿ ತೆಗೆದು ಅವರಿಗೆ ಅವಕಾಶ ನೀಡುವಲ್ಲಿ ನಿಸ್ಸೀಮರು ಅನ್ನೋದಕ್ಕೆ ಇನ್ನೊಂದು ನಿದರ್ಶನ ಬೇಕಾ?.
Fresh Kannada

Fresh Kannada

No comments:

Post a Comment

Google+ Followers

Powered by Blogger.