Breaking News
recent

ಬಾಕ್ಸ್ ಆಫೀಸ್ ನಲ್ಲಿ 'Volcano' ಆಗಿ ಸಿಡಿದ ಉಪ್ಪಿ

''ವಾಲ್ಕೆನೋ ಸೈಲೆಂಟ್ ಆಗಿದೆ ಅಂತ ಅದರ ಅಕ್ಕ-ಪಕ್ಕ ಟೆಂಟ್ ಹಾಕಿ ನಂದೇ ಮಾರ್ಕೆಟ್ ಅಂದ್ರೆ ಅಷ್ಟೆ...'' ಹೀಗಂತ 'ಉಪ್ಪಿ-2' ಸಿನಿಮಾದ ''ನೋ ಎಕ್ಸ್ ಕ್ಯೂಸ್ ಮೀ ಪ್ಲೀಸ್...'' ಹಾಡಲ್ಲಿ ಉಪೇಂದ್ರ ಹೇಳಿದ್ದಾರೆ. ಹಾಡಿನ ಸಾಲಿನಂತೆ ಈ ಬಾರಿ ಗಾಂಧಿನಗರದ ಗಲ್ಲಪೆಟ್ಟಿಗೆಯಲ್ಲಿ ಉಪೇಂದ್ರ ವಾಲ್ಕೆನೋ ಆಗಿ ಸಿಡಿದಿದ್ದಾರೆ.
Uppi 2 (U/A): ನಿಮ್ಮ ಟಿಕೆಟ್‌ ಅನ್ನು ಈಗಲೇ ಬುಕ್ ಮಾಡಿಕೊಳ್ಳಿ! ಹೌದು, ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿ, ನಿರ್ದೇಶಿಸಿರುವ 'ಉಪ್ಪಿ-2' ಸಿನಿಮಾಗೆ ಬಿಗ್ ಓಪನ್ನಿಂಗ್ ಸಿಕ್ಕಿದೆ. ಕರ್ನಾಟಕ ಸೇರಿದಂತೆ ಆಂಧ್ರ, ಮುಂಬೈನಲ್ಲಿ 'ನಾನು-ನೀನು' ಜುಗಲ್ಬಂದಿ ನೋಡೋಕೆ ಪ್ರೇಕ್ಷಕರು ಮುಗಿಬೀಳ್ತಿದ್ದಾರೆ. ಮೊದಲ ದಿನ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಂಡ 'ಉಪ್ಪಿ-2' ಹೊಸ ಇತಿಹಾಸ ನಿರ್ಮಿಸಿದೆ. ರಾಜ್ಯದಾದ್ಯಂತ 250 ಥಿಯೇಟರ್ ಗಳಲ್ಲಿ ರಿಲೀಸ್ ಆದ 'ಉಪ್ಪಿ-2' ಕಲೆಕ್ಷನ್ ಮಾಡಿರುವುದು ಎಷ್ಟು ಗೊತ್ತಾ? ಬರೋಬ್ಬರಿ 9 ಕೋಟಿ. ಸ್ಯಾಂಡಲ್ ವುಡ್ ಇತಿಹಾಸದಲ್ಲೇ ಇದು ಹೊಸ ಹಿಸ್ಟ್ರಿ. [ರಿಯಲ್ ಸ್ಟಾರ್ ಉಪ್ಪಿಟ್ಟು ತಿಂದೋರು ಕೊಟ್ಟ ಕಾಸೆಷ್ಟು?] ಗಾಂಧಿನಗರದ ಕಲೆಕ್ಷನ್ ಪಂಡಿತರು ಲೆಕ್ಕ ಹಾಕಿರುವ ಪ್ರಕಾರ ಫಸ್ಟ್ ಡೇ 'ಉಪ್ಪಿ-2' 9 ಕೋಟಿ ಬಾಚಿದೆ. ಮೂರು ದಿನಗಳಲ್ಲಿ 25 ಕೋಟಿ ಕಲೆಕ್ಟ್ ಮಾಡುವ ನಿರೀಕ್ಷೆ ಇದೆ. ಉಪ್ಪಿಟ್ಟು ರುಚಿಗೆ ಎಲ್ಲರೂ ಕ್ಲೀನ್ ಬೌಲ್ಡ್ ಆಗಿದ್ದಾರೆ ಅನ್ನೋಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಾ?

Uppi 2 (2015) Kannada Movie Mp3 Songs Download
http://www.freshkannada.com/2015/07/uppi-2-2015-kannada-movie-mp3-songs.html

ಲೈಫ್ ಉಪ್ಪಿ 2 ಗುರು, ಸಕತ್ ಕಿಕ್ ಕೊಡೋ ವಿಡಿಯೋ
http://www.freshkannada.com/2015/08/2_14.html

ಉಪ್ಪಿ-2 ರುಚಿಯಾಗಿದೆ, ಆದ್ರೇ ಜೀರ್ಣ ಆಗೋದ್ ಕಷ್ಟ!
http://www.freshkannada.com/2015/08/2_15.html
Fresh Kannada

Fresh Kannada

No comments:

Post a Comment

Google+ Followers

Powered by Blogger.