Breaking News
recent

ಆಸ್ಕರ್ ರೇಸಿಗೆ ಬಾಹುಬಲಿ ಭಾರತದಿಂದ ಸೇರ್ಪಡೆ?

ಭಾರತದಿಂದ ಯಾವ ಸಿನಿಮಾವನ್ನು ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಕಳಿಸಬೇಕು ಎಂಬುದನ್ನು ನಿರ್ಧರಿಸುವ ಆಯ್ಕೆ ಪ್ರಕ್ರಿಯೆ ಹೈದರಾಬಾದಿನಲ್ಲಿ ಆರಂಭಗೊಂಡಿದೆ. ನಟ ಅಮೋಲ್ ಪಾಲೇಕರ್ ನೇತೃತ್ವದ ಸಮಿತಿ ಸುಮಾರು 45ಕ್ಕೂ ಅಧಿಕ ಚಿತ್ರಗಳನ್ನು ನೋಡಿ ಅಳೆದು ತೂಗಿ ಆಸ್ಕರ್ ಸ್ಪರ್ಧೆಗೆ ಭಾರತದ ಅಧಿಕೃತ ಎಂಟ್ರಿ ಯಾವ ಚಿತ್ರ ಎಂಬುದನ್ನು ಘೋಷಿಸಲಿದ್ದಾರೆ.
ರಾಜಮೌಳಿ ಅವರ ಬಾಹುಬಲಿ ಮಿಕ್ಕೆಲ್ಲಾ ಚಿತ್ರಗಳಿಗಿಂತ ಮುಂದಿರುವ ಸುದ್ದಿ ಬಂದಿದೆ. ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿಕೆ ಪ್ರಕಾರ ಆಸ್ಕರ್ ರೇಸಿಗೆ ಬಾಹುಬಲಿ ಅಧಿಕೃತ ಎಂಟ್ರಿ ಕೊಡಲಿದೆ ಎಂದಿದ್ದಾರೆ.
ಕೆ ವಿಶ್ವನಾಥ್ ಹಾಗೂ ಕಮಲ್ ಹಾಸನ್ ಅವರ ಕಾಂಬಿನೇಷ್ ನ ಸ್ವಾತಿ ಮುತ್ಯಂ ಚಿತ್ರದ ನಂತರ ಯಾವ ತೆಲುಗು ಚಿತ್ರವವೂ ಆಸ್ಕರ್ ಕನಸು ಕಂಡಿದ್ದಿಲ್ಲ. 


ಎಸ್ ಎಸ್ ರಾಜಮೌಳಿ ಅವರ ನಿರ್ದೇಶನದ ಬಾಹುಬಲಿ ಭಾರತದ ಅತ್ಯಂತ ದುಬಾರಿ ಚಿತ್ರ ಎನಿಸಿದ್ದು, ಭರ್ಜರಿ ಗಳಿಕೆ ಮೂಲಕ ಎಲ್ಲಾ ದಾಖಲೆಗಳನ್ನು ಮುರಿದಿದೆ. [ಗೀತೂ ಮೊದಲ ಚಿತ್ರವೇ ಆಸ್ಕರ್ ರೇಸಿಗೆ ಆಯ್ಕೆ]
ಇದಲ್ಲದೆ ವಿಶಾಲ್ ಭಾರದ್ವಾಜ್ ಅವರ 'ಹೈದರ್', ರಾಜಕುಮಾರ್ ಹಿರಾನಿ ಅವರ 'ಪಿಕೆ', ಅನುರಾಗ್ ಕಶ್ಯಪ್ ಅವರ 'ಅಗ್ಲಿ', ಒಮುಂಗ್ ಕುಮಾರ್ ಅವರ 'ಮೇರಿ ಕೋಮ್', ಮಸಾನ್ (ಹಿಂದಿ), ತಮಿಳಿನ ಕಾಕಾ ಮುಟ್ಟೈ ಚಿತ್ರಗಳು ಆಯ್ಕೆ ಸಮಿತಿ ಮುಂದಿದೆ. ಸೆಪ್ಟೆಂಬರ್ 25ಕ್ಕೆ ಆಯ್ಕೆ ಸಮಿತಿ ತನ್ನ ಫಲಿತಾಂಶವನ್ನು ಹೊರ ಹಾಕಲಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.