Breaking News
recent

ನಟ ನಟಿಯರಾಗೋ ಕನಸು ಕಂಡಿದ್ದೀರಾ? ಎಚ್ಚರ...

ಬಣ್ಣದ ಲೋಕ ಯಾರನ್ನ ತಾನೇ ಸೆಳೆಯೋಲ್ಲ ಹೇಳಿ? ಅದೆಷ್ಟೋ ಯುವಕ ಯುವತಿಯರು ಪ್ರತಿನಿತ್ಯ ಗಾಂಧಿನಗರದಲ್ಲಿ ಚಪ್ಪಲಿ ಸವೆಸಿ ಸವೆಸಿ ನಿರ್ದೇಶಕ, ನಿರ್ಮಾಪಕರ ಆಫೀಸ್ ತಿರುಗಿ ತಿರುಗಿ ಸುಸ್ತಾಗ್ತಾರೆ. ಆದ್ರೆ ನಟ ನಟಿಯಾಗೋಕೆ ಮಾತ್ರ ಅವಕಾಶ ಸಿಕ್ಕೋದು ಕಷ್ಟ ಕಷ್ಟ. ಆದ್ರೆ ಇತ್ತೀಚೆಗೆ ಫೇಸ್ಬುಕ್ನಲ್ಲಿ ಮತ್ತು ಪತ್ರಿಕೆಗಳಲ್ಲಿ ಕೆಲವು ಜಾಹಿರಾತುಗಳು ಕಾಣಿಸ್ತವೆ. ನಿಮಗೆ ಸಿನಿಮಾದಲ್ಲಿ ನಾಯಕ/ನಾಯಕಿ ಆಗೋ ಆಸೆ ಇದೆಯಾ ಬನ್ನಿ ಆಡಿಷನ್ನಲ್ಲಿ ಭಾಗವಹಿಸಿ ಅಂತ ಆಡಿಷನ್ ನಡೆಯೋ ಸ್ಥಳವನ್ನೂ ಹೆಸರಿಸಿರ್ತಾರೆ.[ಕಾಮಿಡಿ ಕಿಲಾಡಿ ಚಿಕ್ಕಣ್ಣನ ಮಾತಿಗೆ ಬೆರಗಾದೀರಿ..ಜೋಕೆ.!]
ನೀವು ಆಡಿಷನ್ಗೆ ಅಂತ ಅಲ್ಲಿಗೆ ಹೋದಾಗ ಆಡಿಷನ್ಗೆ ಅಂತ 200 ರುಪಾಯಿ ತೆಗೆದುಕೊಂಡು ಕ್ಯಾಮೆರಾ ಮುಂದೆ ಕರೀತಾರೆ. ನಿಮ್ಗೆ ಒಂದು ಡೈಲಾಗ್ ಸ್ಕ್ರಿಪ್ಟ್ ಕೊಡ್ತಾರೆ. ಇಲ್ಲದಿದ್ರೆ ನಿಮ್ಮ ಇಷ್ಟದ ಸೀನ್ ಒಂದನ್ನ ಅಭಿನಯಿಸಿ ಅಂತಾರೆ. ಆಡಿಷನ್ಗೆ ಬಂದವರು ಪ್ರತಿಭೆಯನ್ನ ಒರೆಗೆ ಹಚ್ಚಿ ಅಭಿನಯಿಸ್ತಾರೆ.[ಆರತಿ: ಪ್ರೇಮ ವೈಫಲ್ಯ, ಆತ್ಮಹತ್ಯೆ ಯತ್ನ, ವಿಚ್ಛೇದನ, ಸಾವು] ಸರಿ ಚೆನ್ನಾಗಿ ಅಭಿನಯಿಸಿದ್ದೀರಾ, ನಿಮ್ಗೆ ಎರಡೇ ದಿನದಲ್ಲಿ ಫೋನ್ ಬರುತ್ತೆ ನೀವಿನ್ನು ಹೊರಡಿ ಅಂತಾರೆ ಅಸಿಸ್ಟೆಂಟ್ ಡೈರೆಕ್ಟರ್ಗಳು. ಅಲ್ಲಿ ಆಡಿಷನ್ಗೆ ನಿಂತಿರೋ ಹನುಮಂತನ ಬಾಲದಂತಹಾ ಸರತಿ ಸಾಲು ನೋಡ್ತಾ ದೇವರಿಗೊಂದು ಹರಕೆ ಸಲ್ಲಿಸ್ತಾ ನೀವು ಮನೆಯ ಕಡೆ ಸರಿದು ಹೋಗ್ತೀರಾ. ನನ್ನ ಆಡಿಷನ್ನ ರಿಸಲ್ಟ್ ಇವತ್ತು ಬರುತ್ತೆ, ನಾಳೆ ಬರುತ್ತೆ ಅಂತಾ ಅಂತ ಚಾತಕ ಪಕ್ಷಿ ತರಹ ಕಾಯ್ತಾ ಇರ್ತೀರಾ. ನೀವೂ ಒಂದೆರಡು ಸಾರಿ ಫೋನನ್ನೂ ಮಾಡ್ತೀರಾ. ಆ ಕಡೆಯಿಂದ ಮೂರನೇ ದಿನ ನೀವು ಸೆಲೆಕ್ಟ್ ಆಗಿಲ್ಲ ಅಂತ ಉತ್ತರ ಬರುತ್ತೆ. ನೀವು, ಅಯ್ಯೋ ಹೋಗ್ಲಿ ಬಿಡಿ, ಇನ್ನೊಂದು ಕಡೆ ಟ್ರೈ ಮಾಡಿದ್ರಾಯ್ತು.. ಇದೇನು ಮೊದಲನೇ ಸಾರೀನಾ ಅಂತ ಸುಮ್ಮನಾಗ್ತೀರಾ. ಆದ್ರೆ ಅಷ್ಟರೊಳಗೆ ನೀವು ಒಂದನ್ನಂತೂ ಕಳ್ಕೊಂಡಿರ್ತೀರಾ. ಅದು ನೀವು ಕಟ್ಟಿದ ಆಡಿಷನ್ ಫೀಸ್ 200 ರುಪಾಯಿ.['ಬಿಸಿಲುಕುದುರೆ' ನಟಿ ರೇಪ್ ಪ್ರಕರಣಕ್ಕೆ ಹೊಸ ತಿರುವು] ಇಷ್ಟಕ್ಕೂ ಅದು ನಿಮಗೆ ನಿಮ್ಮ 200 ರುಪಾಯಿ ಮಾತ್ರ ಆದ್ರೆ ನಿಮ್ಮ ತರಹಾ ಅಲ್ಲಿ 500 ಜನ್ರು ಆಡಿಷನ್ಗೆ ಬಂದಿರ್ತಾರೆ. ಆ 500 ಜನರಿಂದ ಒಬ್ಬೊಬ್ಬರ ಹತ್ರಾನೂ 200 ರುಪಾಯಿ ಕಲೆಕ್ಟ್ ಮಾಡಿ 1 ಲಕ್ಷ ರುಪಾಯಿ ಮಾಡಿಕೊಂಡು ನಿರ್ದೇಶಕರು ಅಂಡ್ ಟೀಂ ಆರಾಮಾಗಿ ಮಜಾ ಮಾಡ್ತಿರ್ತಾರೆ. ಇತ್ತೀಚೆಗೆ ಇದೂ ಒಂದು ಬ್ಯುಸಿನೆಸ್ ಆಗಿದೆ. ಸೋ ಇನ್ನೊಂದ್ಸಾರಿ ಆಡಿಷನ್ ಇದೆ ಅಂದ್ರೆ ಹುಷಾರಾಗಿರಿ.

Fresh Kannada

Fresh Kannada

No comments:

Post a Comment

Google+ Followers

Powered by Blogger.