Breaking News
recent

ಡಬ್ಬಿಂಗ್ ಬಗ್ಗೆ ಸ್ಯಾಂಡಲ್ ವುಡ್ ಕ್ವೀನ್ ಹೇಳಿದ್ದೇನು

ಬಹುದಿನಗಳ ನಂತರ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿರುವ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆ. ಚಿತ್ರದ ನಟನೆ, ಡಬ್ಬಿಂಗ್ ಮುಂತಾದ ವಿಚಾರಗಳ ಕುರಿತು ಶನಿವಾರ ರಮ್ಯ ಮಾಧ್ಯಮದ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಒಳ್ಳೆ ಸ್ಕ್ರಿಪ್ಟ್ ಸಿಕ್ಕರೆ ಮತ್ತೆ ನಟಿಸುತ್ತೇನೆ ಎಂದು ಹೇಳಿದ್ದಾರೆ. ಎಸ್.ಎಮ್.ಕೃಷ್ಣ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮಾದ್ಯಮದ ಜೊತೆ ಮಾತನಾಡಿದ ರಮ್ಯ "ಮನೋರಂಜನೆ ಜನರ ಇಚ್ಛೆಗೆ ಬಿಟ್ಟಿದ್ದು" ಎಂದು ಡಬ್ಬಿಂಗ್ ಬಗ್ಗೆ ಒಂದು ಸಾಲಿನ ಪ್ರತಿಕ್ರಿಯೆ ನೀಡಿದ್ದಾರೆ.
'ಬಾಹುಬಲಿ', 'ಭಜರಂಗಿ ಭಾಯ್ ಜಾನ್' ನಂತಹ ದೊಡ್ಡ ಮಟ್ಟದ ಚಿತ್ರಗಳು ಕನ್ನಡದಲ್ಲೂ ಬರಬೇಕು, ಜನರ ಅಭಿರುಚಿಗೆ ತಕ್ಕಂತೆ ಸಿನೆಮಾ ಮಾಡಬೇಕು ಎಂದು ಸ್ಯಾಂಡಲ್ ವುಡ್ ಕ್ವೀನ್ ಹೇಳಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ವಿರೋಧದ ಬಗ್ಗೆ ನಾನು ಮಾತನಾಡುವುದಿಲ್ಲ, ಕನ್ನಡ ಚಿತ್ರರಂಗವನ್ನು ಉಳಿಸುವ ನಿಟ್ಟಿನಲ್ಲಿ ಒಳ್ಳೊಳ್ಳೆ ಸಿನೆಮಾಗಳನ್ನು ಮಾಡಬೇಕು, ಮನೋರಂಜನೆ ಜನರ ಇಚ್ಛೆಗೆ ಬಿಟ್ಟದ್ದು, ಎಲ್ಲವನ್ನು ಜನರೇ ನಿರ್ಧರಿಸುತ್ತಾರೆ ಎಂದು ರಮ್ಯ ತಿಳಿಸಿದ್ದಾರೆ. ಸದ್ಯಕ್ಕೆ ಒಳ್ಳೆ ಅವಕಾಶದ ಜೊತೆಗೆ ಉತ್ತಮ ಕಥೆ ಸಿಕ್ಕರೆ ಖಂಡಿತವಾಗಲೂ ಮತ್ತೆ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗದಲ್ಲಿ ಕಾಣಸಿಕೊಳ್ಳುತ್ತೇನೆ ಎಂದು ರಮ್ಯಾ ತಿಳಿಸಿದ್ದಾರೆ. ಹಲವು ದಿನಗಳ ಕಾಲ ರಾಜಕೀಯ, ಸಿನೆಮಾದಿಂದ ದೂರವಾಗಿದ್ದ ರಮ್ಯ ಬೆಂಗಳೂರಿಗೆ ಬಂದ ನಂತರ ಮೊದಲ ಬಾರಿ ಸಿನೆಮಾ ಬಗ್ಗೆ ಮಾತನಾಡಿದ್ದಾರೆ. ಒಟ್ಟಿನಲ್ಲಿ ರಮ್ಯ ಮತ್ತೆ ನಟಿಸುತ್ತೇನೆ ಎಂದಿದ್ದು, ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಈಗಾಗಲೇ ರಮ್ಯ, ಪ್ರಜ್ವಲ್ ದೇವರಾಜ್ ಅಭಿನಯದ 'ದಿಲ್ ಕಾ ರಾಜಾ' ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದ್ದು, ಇನ್ನೇನು ಸ್ವಲ್ಪ ದಿನಗಳಲ್ಲಿ ತೆರೆ ಮೇಲೆ ಬರಲಿದೆ.

Fresh Kannada

Fresh Kannada

No comments:

Post a Comment

Google+ Followers

Powered by Blogger.