Breaking News
recent

ರಾಮ ಭಕ್ತನಾದ ಶ್ರೀನಗರ ಕಿಟ್ಟಿ

ಬೆಂಗಳೂರು: ಇಂತಿ ನಿನ್ನ ಪ್ರೀತಿಯ ಎಂದು ಸ್ಯಾಂಡಲ್‍ವುಡ್ ಸಿನಿರಸಿಕರಿಗೆ ಹತ್ತಿರವಾಗಿದ್ದ ನಟ ಶ್ರೀನಗರ ಕಿಟ್ಟಿ ಈಗ ಏ ರಾಮ್ ಎಂದು ರಾಮ ಭಕ್ತನ ಕಥೆ ಹೇಳಲು ಹೊರಟಿದ್ದಾರೆ. ಕಿಟ್ಟಿಗೆ ನಾಯಕಿಯಾಗಿ ನಯನಾ ಸಾಥ್ ಕೊಟ್ಟಿದ್ದಾರೆ.
ಕೋಲಾರ ಚಿತ್ರನಂತರ ನಿರ್ದೇಶನಕ್ಕೆ ಕೈ ಹಾಕಿರುವ ಮಹೇಶ್ ಏ ರಾಮ್ ಚಿತ್ರದಲ್ಲಿ ಹಿಂದು ಮುಸ್ಲಿಂ ನಡುವಿನ ಬಾಂಧವ್ಯ ಹೇಗಿರಬೇಕು ಎನ್ನುವ ಸಂದೇಶ ನೀಡುತ್ತಿದ್ದಾರೆ. ಚಿತ್ರದಲ್ಲಿ ಆಕ್ಷನ್ ದೃಶ್ಯಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆಯಂತೆ. ಸದ್ಯ ಬೆಂಗಳೂರಿನಲ್ಲಿ ಚಿತ್ರ ಸೆಟ್ಟೇರುವುದಕ್ಕೂ ಮುನ್ನ ಒಂದು ಟ್ರೇಲರ್ ಜೊತೆಗೆ ಫೋಟೋ ಶೂಟ್ ಮಾಡಿದ್ದಾರೆ.
ಚಿತ್ರತಂಡ ಮುಹೂರ್ತದ ದಿನ ಸಿನಿಮಾ ಟೀಸರ್ ಬಿಡುಗಡೆ ಮಾಡಲು ನಿರ್ಧರಿಸಿದೆ. ಯಾವುದೇ ಧರ್ಮದವರಿಗೂ ನೋಯಿಸುವುದು ನಮ್ಮ ಉದ್ಧೇಶವಲ್ಲ. ಎಲ್ಲರನ್ನೂ ರಂಜಿಸುವಂತಹ ಸಿನಿಮಾ ಮಾಡುವುದಾಗಿ ನಿರ್ದೇಶಕ ಮಹೇಶ್ ತಿಳಿಸಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.