Breaking News
recent

ಮಿಸ್ಟರಿ ಇಷ್ಟಪಡುವ ಅನುಪ್ ಚಿತ್ರಕ್ಕೆ ರಕ್ಷಿತ್ ಹೀರೋ?

ಸ್ಯಾಂಡಲ್ ವುಡ್ ನಲ್ಲೂ ಹೊಸಬರ ಚಿತ್ರ ಗಟ್ಟಿಯಾಗಿ ನೆಲೆಯೂರುತ್ತೆ ಅನ್ನೋದನ್ನ ತೋರಿಸಿಕೊಟ್ಟಿದ್ದು, ನಿರ್ದೇಶನದಿಂದ, ನಟನೆ ಹಾಗೂ ಎಲ್ಲ ಕೆಲಸಗಳನ್ನು ಹೊಸಬರೇ ಮಾಡಿರುವ ಈ ವರ್ಷದ ಬ್ಲಾಕ್ ಬಸ್ಟರ್ ಹಿಟ್ ಚಿತ್ರ 'ರಂಗಿತರಂಗ' ಇದೀಗ 'ರಂಗಿತರಂಗ' ಚಿತ್ರದ ನಿರ್ದೇಶಕ ಅನುಪ್ ಭಂಡಾರಿ ಅವರು ಫಿಲ್ಮಿಬೀಟ್ ಜೊತೆ ಮಾತಿಗೆ ಸಿಕ್ಕಿದ್ದು, ಅವರ ಸಂದರ್ಶನದ ಮುಂದುವರಿದ ಭಾಗ ಇಲ್ಲಿದೆ ನೋಡಿ... * ಚಿತ್ರದ ರಿಮೇಕ್ ರೈಟ್ಸ್ ಬಗ್ಗೆ ನಿವೇನಂತೀರಾ? -ರಿಮೇಕ್ ಬಗ್ಗೆ ಹೇಳ್ಬೇಕು ಅಂದ್ರೆ ಅವರ ಜೊತೆ ಡಿಸ್ಕಷನ್ ಶುರು ಮಾಡಿದ್ದೀವಿ. ಫಸ್ಟ್ ಲೆವೆಲ್ ಸ್ಕ್ರೀನಿಂಗ್ ಕೂಡ ಮಾಡಿದ್ದೀವಿ. ಇನ್ನೊಂದು ರೌಂಡ್ ಸ್ಕ್ರೀನಿಂಗ್ ಮಾಡಬೇಕಿದೆ. ಎಲ್ಲ ಓಕೆ ಅಂತಾದ್ರೆ ಮುಂದೆ ಫೈನಲ್ ಮಾಡೋದು ಅಂತ ನಿರ್ಧಾರ ಮಾಡಿದ್ದೀವಿ.
* 'ರಂಗಿತರಂಗ' ಚಿತ್ರದಲ್ಲಿ ನಿಮಗೆ ಆದ ಒಂದೊಳ್ಳೆ ರಿಯಾಕ್ಷನ್ ಜೊತೆಗೆ ಕೆಟ್ಟ ಅನುಭವ ಏನಾದ್ರೂ!! - ಶೂಟಿಂಗ್ ಟೈಮಲ್ಲಿ ಹೇಳಬೇಕೆಂದರೆ ಎಲ್ಲನೂ ಚೆನ್ನಾಗಿತ್ತು, ಇಡೀ ತಂಡದ ಜೊತೆ ಕೆಲಸ ಮಾಡೋದಂದ್ರೆ ಒಂಥರಾ ಖುಷಿ ಕೊಡ್ತಾ ಇತ್ತು, ಜೊತೆಗೆ ಚಾಲೆಂಜಂಸ್ ಕೂಡ ಸಿಕ್ಕಾ ಪಟ್ಟೆ ಇತ್ತು. ಸಾಮಾನ್ಯವಾಗಿ ಸುಮಾರು 80 ದಿನಗಳಲ್ಲಿ ಮಾಡುವ ಚಿತ್ರೀಕರಣವನ್ನು ನಾವು ಕೇವಲ 45 ದಿನಗಳಲ್ಲಿ ನಾವು ಮಾಡಿ ಮುಗಿಸಿದ್ದೇವೆ, ಅದು ತುಂಬಾ ಕಷ್ಟಕರವಾಗಿತ್ತು.[ಸಂದರ್ಶನ : ರಂಗಿತರಂಗ ಯಶಸ್ಸಿನ ಅಲೆಯ ನಾವಿಕ ಅನುಪ್] *ಬ್ಯಾಡ್ ರಿಯಾಕ್ಷನ್!! -ಕೆಲವೊಂದು ಸಲ ನಿದ್ದೆ, ಊಟ ಬಿಟ್ಟು, ಶೂಟಿಂಗ್ ಮಾಡ್ತಾ ಇದ್ವಿ. ಮಾತ್ರವಲ್ಲದೇ ಜಾಸ್ತಿ ಕಾಡಿನಲ್ಲಿ ಶೂಟಿಂಗ್ ಮಾಡುವಾಗ ಎಲ್ಲರೂ ಕಷ್ಟ ಪಟ್ಟಿದ್ದಾರೆ. ಹಾಗಂತ ಯಾರೂ ಯಾರನ್ನೂ ದೂರಿಲ್ಲ ಎಲ್ಲರೂ ಒಂದಾಗಿ ಸಂಭ್ರಮದಿಂದ ಸಿನೆಮಾ ಮಾಡಿದ್ದಾರೆ.[ಭಜರಂಗಿ ಬಾಹುಬಲಿಗೆ ಸೆಡ್ಡು ಹೊಡೆದ ರಂಗಿಯ ರಹಸ್ಯ?] ಇನ್ನೂ ಚಿತ್ರ ಪೂರ್ತಿ ಆದ ಮೇಲೆ ರಿಲೀಸ್ ಮಾಡೋದು ಒಂದು ದೊಡ್ಡ ಚಾಲೆಂಜ್ ಆಗಿತ್ತು, ಫಿಲ್ಮ್ ಮಾಡೋದೇ ಒಂದು ದೊಡ್ಡ ಚಾಲೆಂಜ್ ಅದರ ಹತ್ತುಪಟ್ಟು ದೊಡ್ಡ ಚಾಲೆಂಜ್ ಏನಪ್ಪಾ ಅಂದ್ರೆ ರಿಲೀಸ್ ಮಾಡೋದು. ರಿಲೀಸ್ ಆದ್ಮೇಲೂ ಸುಮಾರು ಸಮಸ್ಯೆ ಆಯ್ತು, ಒಂದ್ಸಾರಿ ಥಿಯೇಟರ್ ಸಿಕ್ರೆ ಮತ್ತೊಂದು ಬಾರಿ ಸಿಕ್ತಾ ಇರಲಿಲ್ಲಾ ಅದೊಂದು ದೊಡ್ಡ ಪ್ರಾಬ್ಲಂ. ಮತ್ತೆ ಅದರ ಜೊತೆಗೆ ಮತ್ತೊಂದು ಥಿಯೇಟರ್ ನಲ್ಲಿ ಚೆನ್ನಾಗಿ ಒಡ್ತಾ ಇದೆ ಅಂದ್ರೆ ಇನ್ನೊಂದು ಭಾಷೆಯ ಸಿನೆಮಾ ಬಂದಾಗ ಮತ್ತೆ ನಮ್ಮ ಸಿನೆಮಾಗೆ ತೊಂದರೆ. ಅಂತೂ ಎಲ್ಲಾ ಹಂತದಲ್ಲೂ ಚಾಲೆಂಜಿಂಗ್ ಆಗಿತ್ತು ಆದ್ರೂ ಗೆದ್ದೀದ್ದೀವಿ ಅಂತ ಹೇಳೋಕೆ ಖುಷಿ ಆಗ್ತಿದೆ.['ರಂಗಿತರಂಗ'ನೋಡಿ ಭೇಷ್ ಎಂದ ಅಲ್ಲು ಅರ್ಜುನ್] * ನಿಮಗೆ ಯಾವ ಥರದ ಸಿನೆಮಾಗಳು ಇಷ್ಟ? - ನನಗೆ ಎಲ್ಲಾ ಸಿನೆಮಾಗಳು ಇಷ್ಟ ಆಗ್ತವೆ ಒಳ್ಳೆ ಸಿನೆಮಾಗಳಾದ್ರೆ ಎಲ್ಲವನ್ನ ನೋಡ್ತೀನಿ, ಅದೇ ಬೇಕು ಇದೇ ಬೇಕು ಅಂತೇನಿಲ್ಲಾ. ನಾನು ಸಿನೆಮಾ ಮಾಡಿದ್ರು ಅಷ್ಟೆ ಇದೀಗ ಥ್ರಿಲ್ಲರ್ ಮಿಸ್ಟರಿ ಸಿನೆಮಾ ಮಾಡಿದ್ದೀನಿ ಇನ್ನು ಮುಂದೆ ಬೇರೆ ತರದ ಸಿನೆಮಾ ಮಾಡ್ತೀನಿ. ಹೆಚ್ಚಾಗಿ ಮೂಡ್ ಮೇಲೆ ಡಿಪೆಂಡ್ ಆಗಿರುತ್ತೆ, ಕೆಲವೊಂದು ಸಾರಿ ಮಿಸ್ಟರಿ ಫಿಲ್ಮ್ ನೋಡಬೇಕು ಅನಿಸುತ್ತೆ ಮತ್ತೆ ಕೆಲವೊಂದು ಸಾರಿ ಕಾಮಿಡಿ ನೋಡ್ಬೇಕು ಅನ್ಸುತ್ತೆ, ಒಟ್ನಲ್ಲಿ ಎಲ್ಲಾ ಮೂಡ್ ಮೇಲೆ ಡಿಪೆಂಡ್. * ನಿಮ್ಮ ಚಿತ್ರಗಳಿಗೆ ಸ್ಪೂರ್ತಿ ಯಾರು? ಭಾರತದ ಸಿನೆಮಾ ಹಾಗೂ ವರ್ಲ್ಡ್ ಸಿನೆಮಾಗಳಿಗೆ! - ಅಂದ್ರೆ ನನಗೆ ಸ್ಪೂರ್ತಿ ಅಂತ ತುಂಬಾ ಜನ ಇದ್ದಾರೆ. ನಾನು ಪರ್ಟಿಕ್ಯುಲರ್ ಆಗಿ ಒಬ್ಬ ವ್ಯಕ್ತಿಯನ್ನೇ ಸ್ಪೂರ್ತಿಯಾಗಿ ಇಟ್ಟುಕೊಳ್ಳೋದಿಲ್ಲ. ಒಮ್ಮೊಮ್ಮೆ ಅವರ ಕೆಲಸಗಳನ್ನು ನೋಡಿ ಇಷ್ಟ ಆಗುತ್ತೆ ಉದಾಹರಣೆಗೆ ಹೇಳಬೇಕೆಂದರೆ ಶಂಕರ್ ನಾಗ್ ಅವರ 'ಮಾಲ್ಗುಡಿ ಡೇಸ್', ಪುಟ್ಟಣ್ಣ ಕಣಗಾಲ್ ಅವರ 'ನಾಗರಹಾವು' ನೋಡಿ ಸ್ಪೂರ್ತಿಯಾಗಿದ್ದೇನೆ. ಆಮೇಲೆ ಮ್ಯೂಸಿಕ್ ನಲ್ಲಿ ನಾನು ಸ್ಪೂರ್ತಿ ಪಡೆದುಕೊಂಡಿದ್ದು, ಅಂದ್ರೆ ಹಂಸಲೇಖ ಅವರು ಯಾಕಂದ್ರೆ ಅವರ ಲಿರಿಕ್ಸ್ ಅಂದ್ರೆ ನನಗೆ ತುಂಬಾ ಇಷ್ಟ. ನಾನು ಯಾವುದೇ ಹಾಡು ಬರಿಬೇಕಾದ್ರೂ ಅವರನ್ನ ಒಂದು ಕ್ಷಣ ನೆನಪು ಮಾಡಿಕೊಳ್ಳುತ್ತೇನೆ. ಅವರಿಗೋಸ್ಕರ ಬರೆದ ಹಾಗೆ ಅವರಿಗೆ ಇಷ್ಟ ಆಗಬಹುದೇ ಅಂತ ಯೋಚನೆ ಮಾಡಿ ಬರೀತೀನಿ.[ರಂಗಿತರಂಗ ನೋಡಲು ಬಂದ ರೆಡ್ಡಿ ಅಂಡ್ ಗ್ಯಾಂಗ್] * 'ರಂಗಿತರಂಗ' ಚಿತ್ರಕ್ಕೆ ನಿಮ್ಮ ತಮ್ಮ ನಿರುಪ್ ಅವರನ್ನೇ ಯಾಕೆ ಸೆಲೆಕ್ಟ್ ಮಾಡಿದ್ರಿ? - ಆಕ್ಚುವಲಿ ಅವರು ಥಿಯೇಟರ್ ಆರ್ಟಿಸ್ಟ್, ಸುಮಾರು ನಾಲ್ಕು, ಐದು ವರ್ಷದಿಂದ ಥಿಯೇಟರ್ ಆರ್ಟಿಸ್ಟ್ ಆಗಿ ಕೆಲಸ ಮಾಡ್ತಾ ಇದ್ದಾರೆ. ನಾವು ಚಿತ್ರಕ್ಕೆ ಫಸ್ಟ್ ರಕ್ಷಿತ್ ಶೆಟ್ಟಿ ಅವರನ್ನು ಕೇಳಿದ್ವಿ ಆದ್ರೆ ಅವರು ಬೇರೆ ಚಿತ್ರಗಳಲ್ಲಿ ಬ್ಯುಸಿ ಇದ್ದದ್ದರಿಂದ ನಮ್ಮ ನಿರ್ಮಾಪಕರು ನಿರುಪ್ ಅವರನ್ನ ಸಜೆಸ್ಟ್ ಮಾಡಿದ್ರು. ಅವಕಾಶ ಸಿಕ್ಕರೆ ನಾನು ರಕ್ಷಿತ್ ಶೆಟ್ಟಿ ಅವರೊಂದಿಗೆ ಫಿಲ್ಮ್ ಮಾಡಬೇಕೆಂದಿದ್ದೇನೆ. ನಿರುಪ್ ಕೂಡ ಆಡಿಷನ್ ನಲ್ಲಿ ಪಾಲ್ಗೊಂಡಿದ್ದಾರೆ, ಸುಮಾರು 25 ಆರ್ಟಿಸ್ಟ್ ಗಳ ಅಡೀಷನ್ ನಲ್ಲಿ ನಿರುಪ್ ಸೆಲೆಕ್ಟ್ ಆದ್ರು. ಮಾತ್ರವಲ್ಲದೇ ನಿರುಪ್ ಅವರು ಒಳ್ಳೆ ಡಾನ್ಸರ್ ಕೂಡ ಆಗಿದ್ರು 'ಹಿಪ್ ಹಾಪ್' ಡಾನ್ಸ್ ತಂಡದಲ್ಲಿ ಡಾನ್ಸರ್ ಆಗಿದ್ರು. ಒಳ್ಳೆ ವಾಯ್ಸ್, ಗ್ಲಾಮರ್ ನೋಡಿದಾಗ ಪರ್ಫೆಕ್ಟ್ ಅನಿಸಿತು. * ನಿಮ್ಮ ಮುಂದಿನ ಚಿತ್ರಕ್ಕೆ ಮತ್ತೆ ನಿಮ್ಮ ತಮ್ಮ ನಿರುಪ್ ಅವರೇ ನಾಯಕನಾಗುತ್ತಾರ? - ಹಾಂ ಹೌದು ಅವರನ್ನೇ ಹಾಕಿಕೊಂಡು ಮಾಡ್ತೀನಿ, *ನಿಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಹೇಳಿ? - ಇನ್ನು ಒಂದರಿಂದ ಎರಡು ತಿಂಗಳು ಆಗುತ್ತೆ ಹೊಸ ಪ್ರಾಜೆಕ್ಟ್ ಶುರು ಮಾಡಲು ಸದ್ಯಕ್ಕೆ ನಾರ್ತ್ ಕರ್ನಾಟಕ ಟೂರ್ ಮಾಡ್ತಾ ಇದ್ದೀವಿ. ಶಿವಮೊಗ್ಗ, ಉಡುಪಿ, ಮೈಸೂರು ಕಡೆ, ಜೊತೆಗೆ ಯುಎಸ್ಎ, ಯುರೋಪ್ ಗಳಿಗೆ ಆಹ್ವಾನ ನೀಡ್ತಾ ಇದ್ದಾರೆ. ಅಲ್ಲಿನ ಕನ್ನಡದ ಪ್ರೇಕ್ಷಕರು ಮೀಟ್ ಮಾಡೋಕೆ. ಸೋ ಅದೆಲ್ಲಾ ಒಂದು ರೌಂಡ್ ಮುಗಿಸಿ ಅದಾದ ಮೇಲೆ ಮುಂದಿನ ಪ್ರಾಜೆಕ್ಟ್ ಕಡೆ ಗಮನ ಕೊಡೋದು.

Fresh Kannada

Fresh Kannada

No comments:

Post a Comment

Google+ Followers

Powered by Blogger.