Breaking News
recent

ರಂಗಿತರಂಗ ಅಮೆರಿಕದಲ್ಲಿ ಕೋಟಿಗಟ್ಟಲೇ ಗಳಿಕೆ

Rangitaranga (2015) Kannada Movie Mp3 Songs Free Download
http://www.freshkannada.com/2015/06/rangitaranga-2015-kannada-movie-mp3.html
ರಂಗಿತರಂಗ ನೋಡಲು ಬಂದ ರೆಡ್ಡಿ ಅಂಡ್ ಗ್ಯಾಂಗ್
http://www.freshkannada.com/2015/07/blog-post_30.html

ಗಾಂಧಿನಗರದಲ್ಲಿ ಹಾಗೂ ವಿದೇಶದಲ್ಲೂ ಹೊಸಬರಾದ ಭಂಡಾರಿ ಬ್ರದರ್ಸ್ ಸಖತ್ ಕಮಾಲ್ ಮಾಡಿದ್ದು, ನಿಮಗೆ ಗೊತ್ತಿರುವ ವಿಷಯ.
ಅಂದಹಾಗೆ ಇದೀಗ ಭಂಡಾರಿ ಸಹೋದರರ ತಂಡದ 'ರಂಗಿತರಂಗ'ದಿಂದ ಖಾಸ್ ಖಬರ್ ಒಂದು ಹೊರಬಿದ್ದಿದೆ. ಅದೇನಪ್ಪಾ ಅಂದ್ರೆ ನಮ್ಮ ಅನುಪ್ ಭಂಡಾರಿ ನಿರ್ದೇಶನದ ರಂಗಿ ರಂಗಿನ್ ಅಮೇರಿಕಾದಲ್ಲಿ, ಯಶ್ ಅವರ 'ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ' ಹಾಗೂ ಸಲ್ಮಾನ್ 'ಭಜರಂಗಿ ಭಾಯ್ ಜಾನ್' ಚಿತ್ರವನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ.
ಇನ್ನೂ ಅಮೇರಿಕಾದಲ್ಲಿ ಚಿತ್ರ ಬಿಡುಗಡೆ ಮಾಡುವ ಸಂದರ್ಭದಲ್ಲಿ ಚಿತ್ರದ ವಿತರಕರು ಸುಮಾರು 32 ಲಕ್ಷ ಬಂಡವಾಳ ಹಾಕಿದ್ದರಂತೆ, ಆದರೆ ಇದೀಗ 'ರಂಗಿತರಂಗ' ಗಳಿಸಿರುವ ಒಟ್ಟು ಮೊತ್ತ ಬರೋಬ್ಬರಿ 1 ಕೋಟಿ ರೂಪಾಯಿ ಮೊತ್ತಕ್ಕಿಂತಲೂ ಅಧಿಕ. [ಚಿತ್ರ ವಿಮರ್ಶೆ : 'ರಂಗಿತರಂಗ' ಬಲು ರೋಚಕ]
ಅಮೇರಿಕಾ ಚಿತ್ರ ವಿತರಕರ ಪ್ರಕಾರ ಕನ್ನಡದ 'ರಂಗಿತರಂಗ' ಎಲ್ಲಾ 32 ಪ್ರದರ್ಶನಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆಯಂತೆ.
ಇದೀಗ 32 ಸ್ಥಳಗಳಲ್ಲಿ 'ರಂಗಿ' ಪ್ರದರ್ಶನಗೊಳ್ಳುತ್ತಿದ್ದು, ಎಲ್ಲೆಡೆ ಹೌಸ್ ಫುಲ್ ಕಲೆಕ್ಷನ್ ಮಾಡುತ್ತಿದೆ. ಈಗಾಗಲೇ ಪ್ರದರ್ಶಿತವಾಗುತ್ತಿರುವ ಸ್ಥಳಗಳಲ್ಲಿ ಸುಮಾರು 5,000 ಡಾಲರ್ ಗಳಿಸುವ ಮೂಲಕ ಕನ್ನಡಿಗರ ಕಂಪನ್ನು ಸಪ್ತಸಾಗರದಾಚೆಗೂ ಪಸರಿಸಿದೆ. ಇದೀಗ ಚಿತ್ರದ ಒಟ್ಟು ಗಳಿಕೆ ಬರೋಬ್ಬರಿ 32 x 5,000 = $160,000 (ಡಾಲರ್).[ಅಂಕಲ್ ಸ್ಯಾಮ್ ನೆಲದಲ್ಲಿ ರಂಗಿತರಂಗದ ಮಿಂಚು]
ಇನ್ನೂ ಚಿತ್ರ ವಿತರಕರಿಗೆ ಚಿತ್ರದ ಮುದ್ರಣಕ್ಕೆ ಹಾಗು ವಿತರಣೆಗೆ ತಗುಲಿದ ವೆಚ್ಚ ಸುಮಾರು 32 x 150 = $4800. ಚಿತ್ರಮಂದಿರದ ಬಾಡಿಗೆ ವೆಚ್ಚ ಶೇ.50%, ಜೊತೆಗೆ ಗಳಿಸಿದ $160,000 = $80,000 - 4800 = $75,200.ಲಾಭ ಗಳಿಸಿದೆ. ಇದರಲ್ಲಿ ಶೇ 30% ತೆರಿಗೆಗೆ ಒಳಪಟ್ಟು, 30% = $75,200 *. 30 =$22,560, ಇವಿಷ್ಟು 'ರಂಗಿಯ' ಗಳಿಕೆ.
ಆದ್ದರಿಂದ ಇದೀಗ $75,200 ರಲ್ಲಿ $22,560 ಮೈನಸ್ ಮಾಡಿದರೆ $52, 640. ಉಳಿಯುತ್ತದೆ, ಇನ್ನು ರೂಪಾಯಿಗಳಲ್ಲಿ ಲೆಕ್ಕ ಹಾಕಿದರೆ $52,640 x 62 = 32,63, ರೂ ಒಟ್ಟಾರೆ 680 ಚಿತ್ರ ವಿತರಕರಿಗೆ ದೊರೆಯುವ ಪಾಲು. [ಯುಎಸ್ ನಲ್ಲಿ "ರಂಗಿನ ತರಂಗ" ಅಮೆರಿಕನ್ನಡಿಗನ ಅನುಭವ]
ಅಮೇರಿಕಾದಲ್ಲಿ ಈ ವೀಕೆಂಡ್ ನಲ್ಲಿ ಅನುಪ್ ಭಂಡಾರಿ ಅವರ 'ರಂಗಿತರಂಗ' ಸುಮಾರು $200,802(1.31 ಕೋಟಿ ರೂಪಾಯಿ) ಗಳಿಕೆ ಮಾಡುವ ಮೂಲಕ ಅದ್ಭುತ ಓಪನ್ನಿಂಗ್ ಪಡೆದುಕೊಂಡಿದೆ ಎಂದು ಚಿತ್ರ ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಚಿತ್ರದಲ್ಲಿ ನಟನೆ, ನಿರ್ದೇಶನ, ಕ್ಯಾಮರಾ ಸೇರಿದಂತೆ ಎಲ್ಲಾ ವರ್ಗಗಳಲ್ಲೂ ಹೊಸಬರೇ ಸೇರಿ ಮಾಡಿರುವ ಚಿತ್ರದಲ್ಲಿ ನಿರುಪ್ ಭಂಡಾರಿ, ರಾಧಿಕಾ ಚೇತನ್, ಆವಂತಿಕಾ ಶೆಟ್ಟಿ, ವಿಶೇಷ ಪಾತ್ರದಲ್ಲಿ ಸಾಯಿಕುಮಾರ್ ಮುಂತಾದವರು ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು.
ಅದೇನೇ ಇರಲಿ ಅಂತೂ ಇಂತೂ ಭಂಡಾರಿ ಸಹೋದರರು ವಿದೇಶದಲ್ಲಿರುವ ಭಾರತೀಯರನ್ನು ಕೂಡ ಕಮಾಲ್ ಮಾಡುವಲ್ಲಿ ಯಶಸ್ವಿಯಾಗುವ ಮೂಲಕ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಒಂದು ಭದ್ರ ಬುನಾದಿಯನ್ನು ಹಾಕಿದ್ದಾರೆ ಅಂದ್ರು ತಪ್ಪಾಗ್ಲಿಕ್ಕಿಲ್ಲ.

Fresh Kannada

Fresh Kannada

No comments:

Post a Comment

Google+ Followers

Powered by Blogger.