Breaking News
recent

ಮಾದ-ಮಾನಸಿ ಜೊತೆ 'ಬಿಗ್ ಬಾಸ್' ಅನುಶ್ರೀ ಟಪ್ಪಾಂಗುಚ್ಚಿ

ಬಾಯ್ತುಂಬಾ ಪಟ ಪಟ ಮಾತನಾಡುತ್ತಾ, ಕಿರುತೆರೆಯಲ್ಲಿ ಸಖತ್ ಫೇಮಸ್ ಆಗಿರುವ ಬೆಡಗಿ ಅನುಶ್ರೀ. 'ಬಿಗ್ ಬಾಸ್' ಮೂಲಕ ಎಲ್ಲರ ಮನೆ ಮನ ತಲುಪಿದ ಅನುಶ್ರೀ 'ಬೆಂಕಿಪಟ್ಣ' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದರು.
'ರಿಂಗ್ ಮಾಸ್ಟರ್' ಸೇರಿದಂತೆ ಹಲವು ಚಿತ್ರಗಳಲ್ಲಿ ಬಿಜಿಯಾಗಿರುವ ಅನುಶ್ರೀ ಈಗ ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕಿರುವುದು ಖಾಸ್ ಖಬರ್. ಪ್ರಜ್ವಲ್ ದೇವರಾಜ್ ಮತ್ತು ಶೃತಿ ಹರಿಹರನ್ ಮುಖ್ಯಭೂಮಿಕೆಯಲ್ಲಿರುವ 'ಮಾದ ಮತ್ತು ಮಾನಸಿ' ಚಿತ್ರದ ಹಾಡೊಂದಕ್ಕೆ ಅನುಶ್ರೀ ಸೂಪರ್ ಸ್ಟೆಪ್ಸ್ ಹಾಕಿದ್ದಾರೆ.
''ಮಾದ-ಮಾನಸಿಗೆ ಪ್ಯಾರ್ ಬಂತು...ಕಣ್ಣಿಗೆ ಲವ್ವು ಬಂತು...ಸುಮ್ ಸುಮ್ಗೆ ದಿಲ್ಗೆ ದುಖಾನ್ ಆದಂಗೆ...ಇವ್ರ್ ದುಕೆ ಅವ್ರ್ ಮ್ಯಾಲೆ ಪ್ಯಾರು...ಹಿಡ್ಕೊಂಡ್ರೆ ಪ್ರೀತಿ ತೇರು...ಎಲ್ಲಾರ್ದುಕೆ ಜಿಂದಗಿ ಜೋರು'' ಅನ್ನುವ ಇಂಟ್ರೋಡಕ್ಷನ್ ಹಾಡಿಗೆ ಅನುಶ್ರೀ ಸೊಂಟ ಬಳುಕಿಸಿದ್ದಾರೆ. ['ಬೆಂಕಿಪಟ್ಣ' ಅನುಶ್ರೀ ಜೊತೆ ಫಟಾಫಟ್ ಸಂದರ್ಶನ]
ಪ್ರಜ್ವಲ್ ದೇವರಾಜ್ ಮತ್ತು ಶೃತಿ ಹರಿಹರನ್ ಮೊದಲ ಬಾರಿ ಜೋಡಿಯಾಗಿರುವ ಚಿತ್ರ 'ಮಾದ ಮತ್ತು ಮಾನಸಿ'. 'ಅಭಿನೇತ್ರಿ' ಚಿತ್ರದ ನಂತ್ರ ಸತೀಶ್ ಪ್ರಧಾನ್ ನಿರ್ದೇಶನ ಮಾಡುತ್ತಿರುವ ಚಿತ್ರ ಇದು. ಸಂಗೀತ ನಿರ್ದೇಶಕ ಮನೋ ಮೂರ್ತಿ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿರುವುದು ವಿಶೇಷ. [ಸ್ಟಾರ್ ಆಂಕರ್ ಅನುಶ್ರೀ ಅಮ್ಮಾವ್ರೇ ಇದು ಹೌದಾ?]
ಮನೋ ಮೂರ್ತಿ ಸಂಗೀತ ನಿರ್ದೇಶನದ ಹಾಡು ಕೇಳಿ ಇಂಪ್ರೆಸ್ ಅದ್ಮೇಲೆ ಅನುಶ್ರೀ ಈ ಹಾಡಿಗೆ ಡ್ಯಾನ್ಸ್ ಮಾಡುವುದಕ್ಕೆ ಒಪ್ಪಿಕೊಂಡರಂತೆ. ಬೆಳ್ಳಿತೆರೆ ಮೇಲೆ ಸಖತ್ ಗ್ಲಾಮರಸ್ ಆಗಿ ಮಾರ್ಪಾಡಾಗಿರುವ ಅನುಶ್ರೀಗೆ ಇನ್ನಾದರೂ ಅದೃಷ್ಟ ಖುಲಾಯಿಸುತ್ತಾ ನೋಡ್ಬೇಕು.
Fresh Kannada

Fresh Kannada

No comments:

Post a Comment

Google+ Followers

Powered by Blogger.