Breaking News
recent

ಮೈಸೂರಿನ ಹುಡ್ಗ, ಸ್ಯಾಂಡಲ್ ವುಡ್ ನ ಸಕತ್ ಬ್ಯುಸಿ ನಟ

ಚಂದನವನದಲ್ಲಿ ಸದ್ಯಕ್ಕೆ ಬ್ಯುಸಿ ಆಕ್ಟರ್ ಯಾರು ಅಂತ ನಿಮಗೇನಾದ್ರು ಗೊತ್ತ, ಇಲ್ಲಾಂದ್ರೆ ನಾವು ನಿಮಗೆ ಹೇಳ್ತೀವಿ. ಅಂದಹಾಗೆ ಅವರು ಬೇರಾರು ಅಲ್ಲ 'ಡೈರೆಕ್ಟರ್ ಸ್ಪೆಷಲ್' ಹುಡುಗ 'ರಾಟೆ' ರಾಜ ಧನಂಜಯ್.
ಅದೇನಪ್ಪಾ ಅಂದ್ರೆ ನಮ್ಮ ಗಾಂಧಿನಗರದ 'ಡೈರೆಕ್ಟರ್ ಸ್ಪೆಷಲ್' ಹುಡುಗ ಧನಂಜಯ ಅವರು ಹಲವಾರು ಪ್ರಾಜೆಕ್ಟ್ ಗಳನ್ನು ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ.
ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಕೆಲವು ಚಿತ್ರಗಳಿದ್ದರೆ ಇನ್ನು ಕೆಲವು ಶೂಟಿಂಗ್ ಹಂತದಲ್ಲಿವೆ. 'ರಾಟೆ' ಚಿತ್ರದಲ್ಲಿ ಅಷ್ಟಾಗಿ ಯಶಸ್ಸು ಗಳಿಸದ ದನಂಜಯ್ ಸದ್ಯಕ್ಕೆ ಕೈ ತುಂಬಾ ಆಫರ್ ಗಳನ್ನು ಹಿಡಿದು ಓಡಾಡುತ್ತಿದ್ದಾರೆ. ['ಬಾಕ್ಸರ್' ಆದ ಧನಂಜಯ್ ಜಬರ್ದಸ್ತ್ ಸ್ಟಂಟ್ಸ್]
ಈಗಾಗಲೇ 'ಬಾಕ್ಸರ್', 'ಬದ್ಮಾಷ್', 'ಅಲ್ಲಮ', ಹಾಗು ಐತಿಹಾಸಿಕ ಚಿತ್ರ 'ವಿಜಯಾದಿತ್ಯ' ಜೊತೆಗೆ 'ಜೆಸ್ಸಿ' ಚಿತ್ರಗಳಲ್ಲಿ ಬ್ಯುಸಿಯಾಗಿರುವ ಧನಂಜಯ್ ಅವರ ಕಡೆಯಿಂದ ಲೇಟೇಸ್ಟ್ ಮಾಹಿತಿ ಏನಪ್ಪಾ ಅಂದ್ರೆ ಖ್ಯಾತ ನಿರ್ದೇಶಕ ಕಮ್ ನಿರ್ಮಾಪಕ ಓಂ ಪ್ರಕಾಶ್ ರಾವ್ ಅವರ ಹೊಸ 'ಹೀರೋ' ಚಿತ್ರಕ್ಕೆ ಸಹಿ ಹಾಕಿದ್ದಾರೆ.
ಈ ಮೊದಲು ನಿರ್ದೇಶಕ ಓಂ ಪ್ರಕಾಶ್ ರಾವ್ 'ಹುಚ್ಚ 2' ಚಿತ್ರಕ್ಕೆ ಧನಂಜಯ್ ಅವರನ್ನು ಕೇಳಿದ್ದರಂತೆ ಆದರೆ ಕಾರಣಾಂತರಗಳಿಂದ ಆ ಜಾಗಕ್ಕೆ 'ಮದರಂಗಿ' ಖ್ಯಾತಿಯ ಕೃಷ್ಣ ಆಯ್ಕೆಯಾಗಿ ಇದೀಗ ಅವರು ಚಿತ್ರವನ್ನು ಮುಗಿಸಿಕೊಟ್ಟಿದ್ದಾರೆ.
ಇದೀಗ 'ಹುಚ್ಚ 2' ಬಿಡುಗಡೆಗೆ ಮೊದಲೇ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಧನಂಜಯ್ 'ಹೀರೋ' ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ.
ಚಿತ್ರಕ್ಕೆ ನಿರ್ಮಾಪಕ ಉಮೇಶ್ ರೆಡ್ಡಿ ಅವರು ಬಂಡವಾಳ ಹಾಕಲಿದ್ದು, ಆಗಸ್ಟ್ 28 ವರಮಹಾಲಕ್ಷ್ಮಿ ಹಬ್ಬದಂದು ಚಿತ್ರ ಸೆಟ್ಟೇರುತ್ತಿದೆ. ಶರತ್ ಚಂದ್ರು, ಕೃಷ್ಣ, ಶೇಖರ್ ಕೋಟ್ಯಾನ್ ಮುಂತಾದವರು ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಂದಹಾಗೆ ಧನಂಜಯ್ ಅವರ 'ಬಾಕ್ಸರ್' ಚಿತ್ರದ ಫಸ್ಟ್ ಲುಕ್ ಟೀಸರ್ ಈಗಾಗಲೇ ತೆರೆ ಕಂಡಿದ್ದು, ಇನ್ನು ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಮುಂದಿನ ವಾರದಲ್ಲಿ ನೆರವೇರಲಿದೆ.
ಅಂತೂ ಇಂತೂ ಗಾಂಧಿನಗರದಲ್ಲಿ ಕೈ ತುಂಬಾ ಪ್ರಾಜೆಕ್ಟ್ ಹಿಡಿದು ಓಡಾಡುತ್ತಿರುವ ಧನಂಜಯ್ 4 ಚಿತ್ರಗಳ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಒಟ್ನಲ್ಲಿ ಇನ್ನಾದರೂ ಉತ್ತಮ ಯಶಸ್ಸು ಗಳಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭದ್ರವಾಗಿ ನೆಲೆವೂರಲಿ ಎಂದು ನಾವು ಆಶೀಸೋಣ.
Fresh Kannada

Fresh Kannada

No comments:

Post a Comment

Google+ Followers

Powered by Blogger.