Breaking News
recent

ವರಮಹಾಲಕ್ಷ್ಮಿ ಹಬ್ಬದಂದು ಸಂತೋಷ್ ನಲ್ಲಿ 'ಆಟಗಾರ'ನ ಅಸಲಿ ಆಟ

ಚಂದನವನದ ನಟ ಕಮ್ ನಿರ್ಮಾಪಕ ಹಾಗೂ ನಿರ್ದೇಶಕರಾಗಿರುವ 'ಪ್ರಚಂಡ ಕುಳ್ಳ' ದ್ವಾರಕೀಶ್ ಅವರ 49ನೇ ಚಿತ್ರ 'ಆಟಗಾರ' ಆಗಸ್ಟ್ 28 ವರಮಹಾಲಕ್ಷ್ಮಿ ಹಬ್ಬದಂದು ಸಂತೋಷ್ ಚಿತ್ರಮಂದಿರದಲ್ಲಿ ಅಸಲಿ ಆಟ ಶುರು ಹಚ್ಚಿಕೊಳ್ಳಲಿದೆ.
ಅಂದಹಾಗೆ ಬೆಂಗಳೂರಿನ ಮುಖ್ಯ ಚಿತ್ರಮಂದಿರವಾದ ಸಂತೋಷ್ ಥಿಯೇಟರ್ ದ್ವಾರಕೀಶ್ ಅವರಿಗೆ ಲಕ್ಕಿ ಥಿಯೇಟರ್ ಅಂತೆ. ಈಗಾಗಲೇ ಸಂತೋಷ್ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರ 'ಬುಗುರಿ' ಜಾಗಕ್ಕೆ 'ಆಟಗಾರ' ಲಗ್ಗೆ ಇಡುತ್ತಿದ್ದಾನೆ.[ವರಮಹಾಲಕ್ಷ್ಮಿ ಕೃಪೆಗಾಗಿ ಕಾದಿರುವ 'ಆಟಗಾರ' ದ್ವಾರಕೀಶ್! ]
ದ್ವಾರಕೀಶ್ ಅವರ 'ವಿಷ್ಣುವರ್ಧನ', 'ಆಪ್ತಮಿತ್ರ', ಚಿತ್ರಗಳು ಮುಖ್ಯ ಥಿಯೇಟರ್ ಸಂತೋಷ್ ನಲ್ಲಿ ತೆರೆ ಕಂಡಿದ್ದು, ಯಶಸ್ವಿ ಪ್ರದರ್ಶನ ಕಂಡಿದೆ. ಆದ್ದರಿಂದ ದ್ವಾರಕೀಶ್ ಅವರು ತುಂಬಾ ದಿನಗಳ ಹಿಂದೆಯೇ ಈ ಚಿತ್ರಮಂದಿರವನ್ನು ಬುಕ್ ಮಾಡಿಟ್ಟುಕೊಂಡಿದ್ದರಂತೆ.
ಅಂತೂ ಗಣೇಶ್ ಅವರ 'ಬುಗುರಿ' ಚಿತ್ರ ಸಂತೋಷ್ ಥಿಯೇಟರ್ ನಲ್ಲಿ ತೆರೆ ಕಂಡಿದ್ದು, ಗಳಿಕೆಯಲ್ಲಿ ತುಂಬಾ ಹಿಂದಿರುವುದರಿಂದ 'ಆಟಗಾರ' ಚಿತ್ರಕ್ಕೆ ಸುಲಭವಾಗಿ ಸಂತೋಷ್ ಚಿತ್ರಮಂದಿರ ದೊರೆತಿದೆ.[ಚಿರಂಜೀವಿ ಸರ್ಜಾ 'ಆಟಗಾರ'ನಿಗೆ ಹಾಡೊಂದು ಬಾಕಿ]
ಇನ್ನೂ 'ಆಟಗಾರ' ವರಮಹಾಲಕ್ಷ್ಮಿ ಹಬ್ಬದಂದು ತೆರೆ ಕಾಣುತ್ತಿದ್ದು, ಆ ದಿನ ದ್ವಾರಕೀಶ್ ಅವರಿಗೆ ಲಕ್ಕಿ ದಿನವಾಗಿದೆ. ಇದೀಗ ಲಕ್ಕಿ ಥಿಯೇಟರ್ ಕೂಡ ದೊರೆತಿರುವುದರಿಂದ ಇವರ ಸಂಭ್ರಮ ಇನ್ನೂ ಇಮ್ಮಡಿಯಾಗಿದೆ.
ಜೊತೆಗೆ ಸ್ಯಾಂಡಲ್ ವುಡ್ ನ, ಪ್ರಮುಖ 10 ಸ್ಟಾರ್ ಗಳು ಒಂದಾಗಿ ಒಂದೇ ಸ್ಕ್ರೀನ್ ನಲ್ಲಿ ನಟಿಸುತ್ತಿರುವುದು 'ಆಟಗಾರ'ನ ಹೆಗ್ಗಳಿಕೆ.['ಆಟಗಾರ' ನ ಆಟಕ್ಕೆ ಬೋಲ್ಡ್ ಆದ ಸೆನ್ಸಾರ್ ಬೋರ್ಡ್]
ಚಿರಂಜೀವಿ ಸರ್ಜಾ, ಮೇಘನಾ ಸುಂದರ್ ರಾಜ್, ಪಾರುಲ್ ಯಾದವ್, ದ್ವಾರಕೀಶ್, ಅನು ಪ್ರಭಾಕರ್, ಅನಂತ್ ನಾಗ್, ರವಿಶಂಕರ್, ಸಾಧು ಕೋಕಿಲ, ಅಚ್ಯುತ್ ಕುಮಾರ್, ಆರೋಹಿತ ಮುಂತಾದ ನಟ-ನಟಿಯರು ಚಿತ್ರದಲ್ಲಿ ಪ್ರಮುಖವಾಗಿ ಮಿಂಚಿದ್ದಾರೆ.
ವಿಶೇಷವಾಗಿ 'ಆಟಗಾರ' ಚಿತ್ರ ಕೂಡ ದ್ವಾರಕೀಶ್ ಅವರಿಗೆ ಲಕ್ಕಿ ಚಿತ್ರವಾಗಿದ್ದು, ನಿರೀಕ್ಷಿಸಿದ ಮಟ್ಟಿಗೆ 'ಆಟಗಾರ' ಯಶಸ್ಸು ತಂದುಕೊಡುತ್ತಾನ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.