Breaking News
recent

ಸುದೀಪ್‍ಗೆ ಆಕ್ಷನ್ ಕಟ್ ಹೇಳಲಿದ್ದಾರೆ ರಕ್ಷಿತ್ ಶೆಟ್ಟಿ

ಬೆಂಗಳೂರು: ಉಳಿದವರು ಕಂಡಂತೆ ಸಿನಿಮಾ ನಿರ್ದೇಶಿಸಿ ಫಿಲಂ ಫೇರ್ ಪ್ರಶಸ್ತಿ ಪಡೆದ ರಕ್ಷಿತ್ ಶೆಟ್ಟಿ ಮತ್ತೆ ನಿರ್ದೇಶಕನ ಕುರ್ಚಿ ಮೇಲೆ ಕೂರುವುದಕ್ಕೆ ರೆಡಿಯಾಗಿದ್ದಾರೆ. ಈ ಬಾರಿ ಅವರು ಕಿಚ್ಚ ಸುದೀಪ್‍ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

ವಿಶೇಷವಾಗಿ ಈ ಚಿತ್ರಕ್ಕೆ ‘ಥಗ್ಸ್ ಆಫ್ ಮಾಲ್ಗುಡಿ’ ಎಂಬ ಶೀರ್ಷಿಕೆ ಇಟ್ಟಿರುವ ರಕ್ಷಿತ್, ತಮ್ಮ ಚಿತ್ರದ ನಾಯಕನ ಪಾತ್ರಕ್ಕೆ ಸುದೀಪ್ ಅವರನ್ನು ಕೇಳಿಕೊಂಡಿದ್ದು ಈ ಚಿತ್ರದಲ್ಲಿ ನಟಿಸಲು ಕಿಚ್ಚ ಸಹ ಓಕೆ ಎಂದಿದ್ದಾರೆ.
ಮುಂದಿನ ಜನವರಿಯಿಂದ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಈಗಾಗಲೇ ರಕ್ಷಿತ್ ಸ್ಕ್ರಿಪ್ಟ್ ಕೆಲಸವನ್ನು ಶುರುಮಾಡಿದ್ದಾರೆ. ಅಂದಹಾಗೆ “ಥಗ್ಸ್ ಆಫ್ ಮಾಲ್ಗುಡಿ” ಚಿತ್ರ ದರೋಡೆಗೆ ಸಂಬಂಧಿಸಿದ ಚಿತ್ರವೆಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.