Breaking News
recent

ಸಂದರ್ಶನ : ರಂಗಿತರಂಗ ಯಶಸ್ಸಿನ ಅಲೆಯ ನಾವಿಕ ಅನುಪ್

ಸ್ಯಾಂಡಲ್ ವುಡ್ ನ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ರಂಗಿತರಂಗ' ಹವಾ ಗಾಂಧಿನಗರದಲ್ಲಿ ಭಾರಿ ಜೋರಾಗೇ ಇದೆ ಅನ್ನೋದಕ್ಕೆ ಉತ್ತಮ ಉದಾಹರಣೆ ಅಂದ್ರೆ ಈಗಲೂ ಹೌಸ್ ಫುಲ್ ಬೋರ್ಡ್ ನೇತು ಹಾಕಿಕೊಂಡು ಪ್ರದರ್ಶನ ಕಾಣುತ್ತಿರುವುದು. 

ಇದೀಗ ಹೊಸ ಪ್ರಯತ್ನದಲ್ಲಿಯೇ ಕನ್ನಡಿಗರ ಮನೆ-ಮನ ಗೆದ್ದಿರುವ 'ರಂಗಿತರಂಗ' ಚಿತ್ರದ ನಿರ್ದೇಶಕ ಅನುಪ್ ಭಂಡಾರಿ ಕನ್ನಡ ಫಿಲ್ಮಿಬೀಟ್ ಜೊತೆ ಮಾತಿಗೆ ಸಿಕ್ಕಾಗ ಚಿತ್ರದ ಅನುಭವಗಳನ್ನು ಹಂಚಿಕೊಂಡರು. ನಿರ್ದೇಶಕ ಅನುಪ್ ಭಂಡಾರಿ ಜೊತೆ ಫಿಲ್ಮಿಬೀಟ್ ನಡೆಸಿದ ಚುಟುಕು ಸಂದರ್ಶನ ಇಲ್ಲಿದೆ ನೋಡಿ.. 

* ಪ್ರಥಮ ಪ್ರಯತ್ನದಲ್ಲಿ ಗೆದ್ದಿದ್ದೀರಿ ಹೇಗಿದೆ ಫೀಲಿಂಗ್? 
-ತುಂಬಾ ಖುಷಿಯಾಗುತ್ತಿದೆ, ಮೊದ ಮೊದಲು ಸ್ವಲ್ಪ ಮಟ್ಟಿನ ಭಯ ಇದ್ದೇ ಇತ್ತು ಹೇಗೆ ಸ್ವೀಕರಿಸುತ್ತಾರೋ ಏನೋ ಅಂತ ಆದರೆ ಪ್ರೇಕ್ಷಕರ ಕಡೆಯಿಂದ ಬರುತ್ತಿರುವ ಪಾಸಿಟಿವ್ ರೆಸ್ಪಾನ್ಸ್ ನೋಡ್ತಾ ಇದ್ರೆ ತುಂಬಾನೇ ಖುಷಿಯಾಗ್ತಾ ಇದೆ. ಜನರ ಪ್ರೀತಿ, ಅಭಿಮಾನಕ್ಕೆ ನಾನು ಋಣಿಯಾಗಿರುತ್ತೇನೆ.[ಚಿತ್ರ ವಿಮರ್ಶೆ : 'ರಂಗಿತರಂಗ' ಬಲು ರೋಚಕ] 
* ನಿಮ್ಮ 'ವರ್ಡ್ಸ್' ಕಿರುಚಿತ್ರದ ಬಗ್ಗೆ ಹೇಳಿ. 
- 'ವರ್ಡ್ಸ್' ಹಾಲಿವುಡ್ ಆಕ್ಟರ್ ಮಿರಿಯಮ್ ಲಿಯೋರಾ ಗಾಂಝ್ ಹಾಗೂ ರಸ್ಸೆಲ್ ಹಾರ್ವರ್ಡ್ ನಟಿಸಿದ ಇಂಗ್ಲೀಷ್ ಚಿತ್ರ. ಇದಕ್ಕೆ ಲ್ಯಾನ್ಸ್ ಕ್ಯಾಪ್ಲನ್ ಅವರೇ ಕ್ಯಾಮರಾ ವರ್ಕ್ ಮಾಡಿದ್ದು. ಸುಮಾರು 13 ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ 'ವರ್ಡ್ಸ್' ಪ್ರದರ್ಶನಗೊಂಡು ಆವಾರ್ಡ್ಸ್ ಕೂಡ ಗೆದ್ದುಕೊಂಡಿದೆ. ಆ ಕಿರುಚಿತ್ರನೇ ನನಗೆ 'ರಂಗಿತರಂಗ' ಮಾಡೋಕೆ ಸ್ಪೂರ್ತಿ ಕೊಟ್ಟಿದ್ದು, ಅಂತಾನೇ ಹೇಳ್ಬೋದು.[ರಂಗಿತರಂಗ ಚಿತ್ರ: ಹೊಸಬರ ವಿಭಿನ್ನ ಪ್ರಯತ್ನ ಜಸ್ಟ್ ಸೂಪರ್] 
* ನಿಮ್ಮ ಫ್ಯಾಮಿಲಿ ಬಗ್ಗೆ ಸ್ಪಲ್ಪ ಹೇಳಿ 
- ನನ್ನ ಹುಟ್ಟೂರು ಕರಾವಳಿ, ಪುತ್ತೂರಲ್ಲಿ ನಾನು ಹುಟ್ಟಿದ್ದು, ಆಮೇಲೆ ನಾನು ಓದಿದ್ದು, ಬೆಳೆದಿದ್ದು, ಎಲ್ಲ ಮೈಸೂರಿನಲ್ಲಿ. ಆಮೇಲೆ ಸ್ಟಡೀಸ್ ಮುಗಿಸಿ ಯುಎಸ್ಎ ಗೆ ಹೋಗಿದ್ದು, ಸದ್ಯಕ್ಕೆ ನನ್ನ ಫ್ಯಾಮಿಲಿ ಎಲ್ಲಾ ಯುಎಸ್ಎ ನಲ್ಲಿದ್ದಾರೆ. ನನ್ನ ಮಗಳು ಮತ್ತೆ ಹೆಂಡತಿ ಅಲ್ಲೇ ಇದ್ದಾರೆ. ನಾನು 'ರಂಗಿತರಂಗ' ಚಿತ್ರ ಮಾಡಲು ಭಾರತಕ್ಕೆ ಬಂದು ಇಲ್ಲೇ ಉಳಿದುಕೊಂಡಿದ್ದೇನೆ. 

* ತುಳು ಫಿಲ್ಮ್ ಮಾಡುವ ಯೋಚನೆಯಲ್ಲಿದ್ದೀರಾ? - ಸದ್ಯಕ್ಕೆ ಯಾವುದೇ ಪ್ಲಾನ್ ಇಲ್ಲ. ಇಷ್ಟ ಆಗುವ ಕಥೆ ಸಿಕ್ಕರೆ, ಸ್ಯೂಟ್ ಆಗೋ ಹಾಗಿದ್ದರೆ ಟೈಮ್ ಬಂದಾಗ ಮಾಡ್ತೀನಿ. 
* 'ರಂಗಿತರಂಗ' ಚಿತ್ರಕ್ಕೆ ನೀವು ಹಾಕಿರುವ ಬಂಡವಾಳ ಹಾಗು ಎಷ್ಟು ವಾಪಸ್ ಬಂದಿದೆ ಒಂದು ಅಂದಾಜು!...
 - ಹಾ!!! ಬಂಡವಾಳ, ಬಜೆಟ್ ಬಗ್ಗೆ ನಾನೇನು ಹೇಳೋದಿಲ್ಲ. ಅದೆಲ್ಲಾ ಪ್ರೊಡ್ಯುಸರ್ ನೋಡಿಕೊಳ್ಳುತ್ತಿದ್ದಾರೆ. ಅವರಿಗೆ ಲಾಭ ಬಂದಿದೆ ಅಂತ ಮಾತ್ರ ನಾನು ಹೇಳ್ತೀನಿ ಅಷ್ಟೆ, ಸದ್ಯಕ್ಕೆ ಇದೀಗ ಚಿತ್ರ ರನ್ನಿಂಗ್ ನಲ್ಲಿ ಲಾಭ ಗಳಿಸ್ತಾ ಇದೆ. ಅಷ್ಟು ಮಾತ್ರ ಹೇಳ್ಬೋದು.['ರಂಗಿತರಂಗ'ನೋಡಿ ಭೇಷ್ ಎಂದ ಅಲ್ಲು ಅರ್ಜುನ್] 
* ಲೇಟೆಸ್ಟ್ ಆಗಿ ವಿದೇಶದಲ್ಲಿ 'ರಂಗಿತರಂಗ' ತೆರೆ ಕಂಡಿದೆ, ಹೇಗಿದೆ ರೆಸ್ಪಾನ್ಸ್? 
- ಎಲ್ಲಾ ಕಡೆ ಹೌಸ್ ಫುಲ್ ಆಗಿ ಪ್ರದರ್ಶನ ಕಾಣ್ತಾ ಇದೆ. ಇದೀಗ ಬೆಲ್ಜಿಯಂ, ಹಾಲೆಂಡ್ ನಲ್ಲಿ ಮೊನ್ನೆ ಶನಿವಾರ, ಭಾನುವಾರ ಪ್ರದರ್ಶನ ಆಗಿದೆ, ಸುಮಾರು ನಾಲ್ಕು, ಐದು ದಿನಕ್ಕಿಂತ ಮುಂಚೆನೇ ಟಿಕೆಟ್ಸ್ ಸೋಲ್ಡ್ ಔಟ್ ಆಗಿ ಹಾಲೆಂಡ್ ನಲ್ಲಿ ಥಿಯೇಟರ್ ನ ಮೆಟ್ಟಿಲ ಮೇಲೆ ಕುಳಿತು ಸಿನೆಮಾ ನೋಡಿದ್ದಾರೆ. ಮತ್ತೆ ಆಸ್ಟ್ರೇಲಿಯಾದಲ್ಲಿ ಆಗಸ್ಟ್ 15 ಗೆ ಈಗಾಗಲೇ ಟಿಕೆಟ್ಸ್ ಸೋಲ್ಡ್ ಔಟ್ ಆಗಿದೆ. ನಾವು ಫಸ್ಟ್ ಯುರೋಪ್ ನಲ್ಲಿ ಚಿತ್ರ ಪ್ರದರ್ಶನ ಮಾಡ್ತೀವಿ ಅಂದಾಗ ಕೇವಲ ಐದು ಶೋ ಮಾತ್ರ ಮಾಡೋದು ಅಂತ ನಮ್ಮ ವಿತರಕರು ಹೇಳಿದ್ರು, ಆದ್ರೆ ಇದೀಗ ಸುಮಾರು 25 ಶೋ ಆಗ್ತಾ ಇದೆ. ಮುಂದಿನ ಭಾಗ ನಾಳೆ ನಿರೀಕ್ಷಿಸಿ    ಕಾಮೆಂಟ್ಸ್ (0) Read more about: interview, sandalwood, kannada cinema, shooting, remake, ಸಂದರ್ಶನ, ಸ್ಯಾಂಡಲ್ ವುಡ್, ಕನ್ನಡ ಸಿನೆಮಾ, ಶೂಟಿಂಗ್, ರಿಮೇಕ್

Rangitaranga (2015) Kannada Movie Mp3 Songs Free Download
http://www.freshkannada.com/2015/06/rangitaranga-2015-kannada-movie-mp3.html
ರಂಗಿತರಂಗ ನೋಡಲು ಬಂದ ರೆಡ್ಡಿ ಅಂಡ್ ಗ್ಯಾಂಗ್
http://www.freshkannada.com/2015/07/blog-post_30.html


Fresh Kannada

Fresh Kannada

No comments:

Post a Comment

Google+ Followers

Powered by Blogger.