Breaking News
recent

Aatagara Kannada Movie Review

ಚಂದನವನದ 'ಕುಳ್ಳ' ದ್ವಾರಕೀಶ್ ಅವರ 49 ನೇ ಚಿತ್ರ ನಿರ್ದೇಶಕ ಕೆ.ಎಮ್ ಚೈತನ್ಯ ಆಕ್ಷನ್-ಕಟ್ ಹೇಳಿರುವ ಬಹುನಿರೀಕ್ಷಿತ 'ಆಟಗಾರ' ಕರ್ನಾಟಕದಾದ್ಯಂತ ನಿನ್ನೆ(ಆಗಸ್ಟ್ 28) ತೆರೆ ಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಗಳಿಸುತ್ತಿದೆ.
ಚಿತ್ರದ ಪೂರ್ಣ ವಿಮರ್ಶೆ ಇಲ್ಲಿದೆ
'ಆಟಗಾರ' ಕಥೆ
ನಾಯಕ ನಟ ಚಿರಂಜೀವಿ ಸರ್ಜಾ ಅವರ ಭರ್ಜರಿ ಪ್ರವೇಶದೊಂದಿಗೆ ಚಿತ್ರ ಆರಂಭಗೊಳ್ಳುತ್ತದೆ. ಇದೇ ಮೊದಲ ಬಾರಿಗೆ ನಟ ಚಿರಂಜೀವಿ ಸರ್ಜಾ ಅವರು ನೆಗೆಟಿವ್ ಶೇಡ್ ನಲ್ಲಿ ಮಿಂಚಿದ್ದಾರೆ. ನಾಯಕ ಜೈ(ಚಿರಂಜೀವಿ ಸರ್ಜಾ) ಒಬ್ಬ ಡ್ರಗ್ ಡೀಲರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
'ಅಸಲಿ ಆಟ ಈಗ ಶುರು' ಎನ್ನುವ ಅಡಿಬರಹದ ಮೂಲಕ ಪ್ರಾರಂಭವಾಗುವ ಚಿತ್ರದಲ್ಲಿ 'ಆಟಗಾರ' ಎಂಬ ಒಂದು ರಿಯಾಲಿಟಿ ಶೋ ನಲ್ಲಿ 10 ಜನ ಸ್ಪರ್ಧಾರ್ಥಿಗಳ ಸುತ್ತ ಸುತ್ತುವ ಕಥೆಯೇ 'ಆಟಗಾರ'.['ಆಟಗಾರ'ನ ಓಟಕ್ಕೆ ಸೀಟಿ ಊದಿದ ಕಿಚ್ಚ ಸುದೀಪ್]
ಇನ್ನೂ ಐರ್ಲೆಂಡ್ ದ್ವೀಪದಲ್ಲಿ ನಡೆಯುವ ರಿಯಾಲಿಟಿ ಶೋ ಗೆ 10 ಜನ ಸ್ಪರ್ಧಾರ್ಥಿಗಳು ಬೇರೆ ಬೇರೆ ಸ್ಥಳಗಳಿಂದ ಹಾಗೂ ಬೇರೆ ಬೇರೆ ವೃತ್ತಿ ಕ್ಷೇತ್ರಗಳಿಂದ ಬಂದಿರುತ್ತಾರೆ. ಅಲ್ಲಿ ಭಾಗವಹಿಸುವ ಸ್ಪರ್ಧಾರ್ಥಿಗಳು ಒಬ್ಬೊಬ್ಬರಾಗಿ ಕಾಣೆಯಾಗಿ, ಬರ್ಬರ ಹತ್ಯೆಗೊಂಡು ಪತ್ತೆಯಾಗುತ್ತಾರೆ ಇಲ್ಲಿ ಕಥೆಗೆ ಟ್ವಿಸ್ಟ್.
10 ಜನ ಸ್ಪರ್ಧಾರ್ಥಿಗಳಿಗೂ ಒಬ್ಬನೇ ವೈರಿ ಇರುತ್ತಾನ? ಕೊಲೆ ಮಾಡುವ ವ್ಯಕ್ತಿ ಯಾರು? ಅಸಲಿ 'ಆಟಗಾರ' ರಿಯಾಲಿಟಿ ಶೋ ಹಿಂದೆ ಇರುವ ಕಾರಣವೇನು? ಇದೆಲ್ಲಾ ತಿಳಿಯಲು ನೀವು ಆದಷ್ಟು ಬೇಗ ನಿಮ್ಮ ಪಕ್ಕದ ಥಿಯೇಟರ್ ಒಂದಕ್ಕೆ ಭೇಟಿ ನೀಡಿ.
ಪಾತ್ರಧಾರಿಗಳ ನಟನೆ
ಎಲ್ಲಾ ಸ್ಟಾರ್ ನಟರಿಗೂ ಚಿತ್ರದಲ್ಲಿ ಸಮಾನ ಪಾತ್ರ. ನಟ ಚಿರಂಜೀವಿ ಸರ್ಜಾ ಅವರ ಡೈಲಾಗ್ ಡೆಲಿವರಿ, ಆಕ್ಷನ್, ಫೈಟ್ ಜೊತೆಗೆ ಕಾಮಿಡಿ ಪ್ರೇಕ್ಷಕನಿಗೆ ಇಷ್ಟವಾಗುತ್ತದೆ. ನಟಿ ಮೇಘನಾ ರಾಜ್ ಹಾಗೂ ಪಾರುಲ್ ಯಾದವ್ ಗ್ಲಾಮರ್ ರೋಲ್ ಮೂಲಕ ಅಭಿಮಾನಿಗಳಿಗೆ ಹಿಡಿಸುತ್ತಾರೆ.
ಇನ್ನುಳಿದಂತೆ ದ್ವಾರಕೀಶ್, ಅನು ಪ್ರಭಾಕರ್, ಆರೋಹಿತಾ ಗೌಡ, ಅಚ್ಯುತ್ ಕುಮಾರ್, ಪ್ರಕಾಶ್ ಬೆಳವಾಡಿ, ಸಾಧುಕೋಕಿಲ, ಆರ್.ಜೆ ನೇತ್ರಾ, ಪಾವನಾ ಹಾಗು ವೀಣಾ ಸುಂದರ್ ಅವರು ತಮ್ಮ ಪಾತ್ರಕ್ಕೆ ತಕ್ಕಂತೆ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.[ಆಟಗಾರನ ನೋಡಬೇಕು ಏಕೆ? ಇಲ್ಲಿದೆ ಕಾರಣಗಳು]
ಎವರ್ ಗ್ರೀನ್ ನಟ ಅನಂತ್ ನಾಗ್, ರೋಹಿತ್ ಹಾಗೂ ರವಿಶಂಕರ್ ಚಿತ್ರದ ಮುಖ್ಯ ಭಾಗವಾಗಿದ್ದು, ಅವರ ನಟನೆ ಅದ್ಭುತವಾಗಿ ಮೂಡಿ ಬಂದಿದೆ.
ತಾಂತ್ರಿಕತೆ
ಚಿತ್ರದ ಫಸ್ಟ್ ಹಾಫ್ ಕಾಮಿಡಿ, ಆಕ್ಷನ್, ಮತ್ತು ಭಾವನೆಗಳ ಮೂಲಕ ವೀಕ್ಷಕನನ್ನು ಎಂಗೇಜ್ ಮಾಡುತ್ತದೆ. ಸೆಕೆಂಡ್ ಹಾಫ್ ನಲ್ಲಿ ಸಸ್ಪೆನ್ಸ್-ಥ್ರಿಲ್ಲರ್ ಸೀನ್ ಇರುವುದರಿಂದ ಪ್ರೇಕ್ಷಕ ಉಸಿರು ಬಿಗಿಹಿಡಿದು ಅತ್ತಿತ್ತ ಅಲುಗಾಡದಂತೆ ಉಗುರು ಕಚ್ಚುವಂತೆ ಮಾಡುತ್ತದೆ.
ಕಥೆ-ಚಿತ್ರಕಥೆ ಸಖತ್ ಆಗಿದ್ದು, ಪ್ರತಿಯೊಂದು ವಿಷಯಗಳನ್ನು ಎತ್ತಿಹಿಡಿಯಲಾಗಿದ್ದು, ವೀಕ್ಷಕ ಮೆಚ್ಚುತ್ತಾನೆ. ಜೊತೆಗೆ ಸತ್ಯ ಹೆಗಡೆ ಅವರ ಸಿನಿಮಾಟೊಗ್ರಫಿ 'ಆಟಗಾರ'ನ ಇನ್ನೊಂದು ಹೈಲೈಟ್.
ಸಂಗೀತ
ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸಿಳೀನ್ ಅವರು 'ಆಟಗಾರ' ನ ಸುಂದರ ಹಾಡುಗಳಿಗೆ ಮ್ಯೂಸಿಕ್ ಕಂಫೋಸ್ ಮಾಡಿದ್ದಾರೆ. ಜೊತೆಗೆ ಥ್ರಿಲ್ಲರ್ ದೃಶ್ಯಗಳಿಗೆ ಹಿನ್ನಲೆ ಸಂಗೀತ ಸಖತ್ ಆಗಿ ನೀಡಿದ್ದಾರೆ.
ರೋಹಿತ್ ಅವರ 'ತಾರಾಮ್ಮಯ್ಯ ತತ್ತರಮ್ಮಯ್ಯ' ಸಾಹಿತ್ಯ ಇರುವ ಹಾಡು ಈಗಾಗಲೇ ಮ್ಯೂಸಿಕ್ ಪ್ರಿಯರ ಫೆವರಿಟ್ ಆಗಿ ಹೋಗಿದೆ.[ಬಿಡುಗಡೆಗೂ ಮುನ್ನವೇ ಭರ್ಜರಿ ಮೊತ್ತಕ್ಕೆ 'ಆಟಗಾರ' ಮಾರಾಟ]
ಒಟ್ಟಾರೆ 'ಆಟಗಾರ'
'ಆ ದಿನಗಳು' ಚಿತ್ರದ ನಂತರ ನಿರ್ದೇಶಕ ಕೆ.ಎಮ್ ಚೈತನ್ಯ ಅವರು ಸಖತ್ ಇಂಟ್ರೆಸ್ಟಿಂಗ್ ಸ್ಕ್ರಿಪ್ಟ್ ಮೂಲಕ ವಾಪಸಾಗಿದ್ದಾರೆ. ಒಟ್ನಲ್ಲಿ 'ಆಟಗಾರ' ಕೇವಲ ಥ್ರಿಲ್ಲರ್ ಚಿತ್ರ ಮಾತ್ರವಲ್ಲದೇ  ಸಮಾಜಕ್ಕೆ ಉತ್ತಮ ಸಂದೇಶ ಕೂಡ ಕೊಡುವಲ್ಲಿ ಯಶಸ್ವಿಯಾಗಿದೆ.
ನಿರ್ದೇಶಕ: ಕೆ.ಎಮ್ ಚೈತನ್ಯ
ನಿರ್ಮಾಪಕ: ದ್ವಾರಕೀಶ್ ಮತ್ತು ಯೋಗೀಶ್ ದ್ವಾರಕೀಶ್
ಸಂಗೀತ: ಅನೂಪ್ ಸಿಳೀನ್
ಪಾತ್ರವರ್ಗ: ದ್ವಾರಕೀಶ್, ಅನಂತ್ ನಾಗ್, ಅಚ್ಯುತ್ ಕುಮಾರ್, ಪ್ರಕಾಶ್ ಬೆಳವಾಡಿ, ಚಿರಂಜೀವಿ ಸರ್ಜಾ, ಮೇಘನಾ ರಾಜ್, ಪಾರುಲ್ ಯಾದವ್, ಅನು ಪ್ರಭಾಕರ್, ಪಾವಾನಾ, ಸಾಧು ಕೋಕಿಲ, ಆರೋಹಿತಾ ಗೌಡ ಮುಂತಾದವರು
Aatagara (2015) Kannada Movie Mp3 Songs Download
Fresh Kannada

Fresh Kannada

No comments:

Post a Comment

Google+ Followers

Powered by Blogger.