Breaking News
recent

ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ಬಾಹುಬಲಿ

ರಾಜಮೌಳಿ ನಿರ್ದೇಶನದ ಮಹೋನ್ನತ ಚಿತ್ರ 'ಬಾಹುಬಲಿ' ಸ್ವಾಗತಿಸಲು ಇಡೀ ವಿಶ್ವಕ್ಕೆ ಬಾಗಿಲು ತೆಗೆದುಕೊಂಡು ನಿಂತಿದೆ. ಭಾರತದ ಅತ್ಯಂತ ದುಬಾರಿ ಸಿನಿಮಾ ನೋಡಲು ಪ್ರೇಕ್ಷಕರು ಮುಗಿ ಬೀಳುತ್ತಿದ್ದಾರೆ. ಹಲವೆಡೆ ಒಂದು ವಾರದ ಮಟ್ಟಿಗೆ ಅಡ್ವಾನ್ಸ್ ಬುಕ್ಕಿಂಗ್ ಟಿಕೆಟ್ ಸೋಲ್ಡ್ ಔಟ್ ಆಗಿರುವ ಸುದ್ದಿ ಬಂದಿದೆ. ಕರ್ನಾಟಕದಲ್ಲೂ ಬಿಡುಗಡೆಗೂ ಮುನ್ನ ಹೊಸ ದಖಲೆ ಬರೆದಿದೆ.
ಮಹಿಷ್ಮತಿ ಸಾಮ್ರಾಜ್ಯ ದರ್ಶನಕ್ಕೂ ಮುನ್ನ ದೇವಕನ್ಯೆಯಾಗಿ ಧರೆಗಿಳಿಯುವ ತಮನ್ನಾ, ನಾಯಕ ನಟ ಪ್ರಭಾಸ್, ರಾಣಾ ದಗ್ಗುಭಾತಿ ಆರ್ಭಟ, ನೆಗಟಿವ್ ಪಾತ್ರಗಳು ಎಲ್ಲವೂ ಒಟ್ಟಿಗೆ ಬಂದರೂ ಪಾತ್ರ ಪರಿಚಯಕ್ಕಾಗಿ ಮಾಡಿದ್ದ ಟೀಸರ್ ಮುಂದೆ ಮೊದಲ ಟ್ರೈಲರ್ ಹಲವರಿಗೆ ಸಪ್ಪೆ ಎನಿಸಿತ್ತು. ಎರಡನೇ ಟ್ರೈಲರ್ ನಲ್ಲಿ ಇನ್ನಷ್ಟು ದೃಶ್ಯಗಳನ್ನು ಸೇರಿಸಿ ಕುತೂಹಲ ಮೂಡಿಸಲಾಯಿತು.[ದೃಶ್ಯ ವೈಭವೊಪೇತ ಬಾಹುಬಲಿ ಟ್ರೈಲರ್ ವಿಮರ್ಶೆ]


ಬಹು ತಾರಾಗಣ: ರೆಬೆಲ್ ಸ್ಟಾರ್ ಪ್ರಭಾಸ್, ರಾಣಾ ದಗ್ಗುಭಾತಿ, ಅನುಷ್ಕಾ ಶೆಟ್ಟಿ, ತಮನ್ನಾ, ರಮ್ಯಕೃಷ್ಣ, ನಾಸಿರ್, ಕಿಚ್ಚ ಸುದೀಪ, ಸತ್ಯರಾಜ್, ಸುಬ್ಬರಾಜು, ಭರಣಿ, ಅಡವಿ ಶೇಷ್ ಮುಂತಾದವರಿರುವ ಈ ಚಿತ್ರಕ್ಕೆ ಎಂಎಂ ಕೀರವಾಣಿ ಸಂಗೀತ, ಕೆಕೆ ಸೆಂಥಿಲ್ ಕುಮಾರ್ ಸಿನಿಮಾಟೋಗ್ರಾಫಿ, ರಾಜಮೌಳಿ ಅವರ ತಂದೆ ವಿ ವಿಜಯೇಂದ್ರ ಪ್ರಸಾದ್ ಅವರ ಕಥೆ ಇದೆ.
ಚಿತ್ರ ಬಿಡುಗಡೆ: ಕನ್ನಡ ಬಿಟ್ಟು ದಕ್ಷಿಣದ ತೆಲುಗು, ತಮಿಳು, ಮಲಯಾಳಂನಲ್ಲಿ ಹಾಗೂ ಹಿಂದಿ ಭಾಷೆಯಲ್ಲಿ ಬಾಹುಬಲಿ ಚಿತ್ರದ ಮೊದಲ ಭಾಗ ಜುಲೈ 10ರಂದು ವಿಶ್ವದೆಲ್ಲೆಡೆ ಏಕಕಾಲಕ್ಕೆ ತೆರೆ ಕಾಣಲಿದೆ.

250 ಕೋಟಿ ರು (40 ಮಿಲಿಯನ್ ಯುಎಸ್ ಡಿ) ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಸುಮಾರು 4,000 ಸ್ಕ್ರೀನ್ ಗಳಲ್ಲಿ ಎಂಟ್ರಿ ಕೊಡಲಿದೆ. ಅಮೆರಿಕದಲ್ಲಿ 135 ಸ್ಕ್ರೀನ್ ನಲ್ಲಿ, ಕರ್ನಾಟಕದಲ್ಲಿ 35 ಸಿಂಗಲ್ ಸ್ಕ್ರೀನ್ ಗಳಲ್ಲಿ ತೆರೆ ಕಾಣಲಿದ್ದು ಹೊಸ ದಾಖಲೆ ಬರೆದಿದೆ.
ಹಾಲಿವುಡ್ ನ ಟ್ರಾಯ್,300 ಅಥವಾ ಹರ್ಕುಲೆಸ್ ಚಿತ್ರಕ್ಕೆ ಉತ್ತರದ್ದಂತಿರುವ ಬಾಹುಬಲಿ ಚಿತ್ರ ಬಿಡುಗಡೆಗೆ ಮುನ್ನವೇ ಹಲವು ದಾಖಲೆಗಳನ್ನು ಅಳಿಸಿ ಹಾಕಿದೆ. ಆರಿ ಅಲೆಕ್ಸಾ ಎಕ್ಸ್ ಟಿ ಕೆಮರಾ ಬಳಸಿದ ಮೊದಲ ಸಿನಿಮಾ ಎನಿಸಿದೆ. ಬಿಬಿಸಿಯ 100 ವರ್ಷದ ಭಾರತೀಯ ಸಿನಿಮಾ ಸಾಕ್ಷ್ಯಚಿತ್ರದಲ್ಲೂ ಬಾಹುಬಲಿ ಉಲ್ಲೇಖವಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.