Breaking News
recent

ಸ್ಯಾಂಡಲ್ವುಡ್ನಲ್ಲಿ ನಡೆದು ಹೋಗಿದೆ ಎಂಟನೇ ಅದ್ಭುತ!


ಕನ್ನಡ ಚಿತ್ರರಂಗದಲ್ಲಿ ಅದೊಂದು ವಿಷ್ಯ ಯಾವತ್ತಿಗೂ ನಡೆಯೋದಿಲ್ಲ ಅಂತಾನೇ ಅಂದುಕೊಳ್ಳಲಾಗಿತ್ತು. ಆದ್ರೆ ನಿಜಕ್ಕೂ ಅಸಾಧ್ಯ ಅನ್ನಿಸೋ ವಿಷಯವೊಂದು ಕೊನೆಗೂ ನಡೆದು ಹೋಗಿದೆ. ಈ ಸುದ್ದಿ ಸದಾಶಿವನಗರದ ಮನೆಯದ್ದು. ಅರ್ಥಾತ್ ಅಣ್ಣಾವ್ರ ಮನೆಯ ಕಡೆಯ ಸುದ್ದಿ ಇದು. ಚಿನ್ನದ ಮೊಟ್ಟೆ ಇಡುವ ಕೋಳಿ ಅಂತಾನೇ ಕರೆಸಿಕೊಂಡಿದ್ದ ವಜ್ರೇಶ್ವರಿ ಕಂಬೈನ್ಸ್ ಪೂರ್ಣಿಮಾ ಎಂಟರ್ಪ್ರೈಸಸ್ನ ಸಿನಿಮಾ 'ಓಂ' ಸ್ಯಾಟಲೈಟ್ ಹಕ್ಕು ಮಾರಾಟವಾಗಿದೆ. ಅದೆಷ್ಟಕ್ಕೆ ಮಾರಾಟವಾಗಿದೆ ಮುಂದೆ ಓದಿ. ಅಂದ ಹಾಗೆ, 'ಓಂ' ಚಿತ್ರ ಚಿತ್ರಮಂದಿರದಲ್ಲಿ ರಿಲೀಸಾದಾಗಲೆಲ್ಲ ಹೌಸ್ಫುಲ್ ಪ್ರದರ್ಶನ ಕಾಣ್ತಿತ್ತು. ಆ ಪರಿಯ ಕ್ರೇಜ್ ಹುಟ್ಟಿಸಿದಂಥ ಸಿನೆಮಾ ಅದು.[ಸತ್ಯ.. ಬಿಡ್ಬೇಡ ಕೊಚ್ಚು ..'ಓಂ' ಗೇಮ್ ಸೂಪರ್!] ರಿಯಲ್ಸ್ಟಾರ್ ಉಪ್ಪಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅನ್ನೋ ಎರಡು ಮಾಸ್ಟರ್ಗಳ ಕಲಾ ಕುಸುರಿಯಲ್ಲಿ ಅರಳಿದ ಪೀಸೇ ಈ ಮಾಸ್ಟರ್ ಪೀಸ್ 'ಓಂ' ಅನ್ನೋ ಸಿನಿಮಾ. 1995ರಲ್ಲಿ ತೆರೆಕಂಡ 'ಓಂ' 17 ವರ್ಷಗಳ ನಂತ್ರ ಪ್ರತಿಷ್ಠಿತ ವಾಹಿನಿಗೆ ಸೇಲಾಗಿದೆ. ಹಾಗಾದ್ರೆ ಓಂ ಸಿನಿಮಾ ಸೇಲಾಗಿದ್ದು ಯಾವ ಟಿವಿಗೆ? ಓಂ ಸಿನಿಮಾ ಇಷ್ಟು ವರ್ಷ ಯಾಕೆ ಸೇಲಾಗಿರ್ಲಿಲ್ಲ? ಈ ಎಲ್ಲ ಕುತೂಹಲಗಳಿಗೆ ಈ ಸ್ಲೈಡ್ನಲ್ಲಿದೆ ಉತ್ತರ..

ಓಂ ಗೆ ಓಂ ಮಾತ್ರ ಸಾಟಿ 1995 ಕನ್ನಡ ಚಿತ್ರರಂಗದಲ್ಲೊಂದು ಮೈಲಿಗಲ್ಲು. 
ರಿಯಲ್ ರೌಡಿಗಳೂ ಕೂಡ ನಟಿಸಿದ್ದ ಓಂ ಚಿತ್ರ ತೆರೆಕಂಡಿತ್ತು. ಅದು ಸಂಪೂರ್ಣ ರಿಯಲ್ಸ್ಟಾರ್ ಉಪ್ಪಿ ಪರಿಕಲ್ಪನೆ. ಚಿತ್ರವನ್ನ ನೋಡಿದ ಸಿನಿಪ್ರೇಮಿಗಳು ಹುಚ್ಚರಾಗಿಬಿಟ್ಟಿದ್ರು.. ಹಾಗೆ ಮೋಡಿ ಮಾಡಿದ್ದ ಸಿನಿಮಾ ಅದು.

ಕಿಚ್ಚ ಸುದೀಪ್ 10 ಸಾರಿ ನೋಡಿದ್ರು 
ಇವತ್ತಿನ ಸೂಪರ್ಸ್ಟಾರ್ ಕಿಚ್ಚ ಸುದೀಪ್ ಕಾಲೇಜು ದಿನಗಳಲ್ಲೇ ಹತ್ತು ಬಾರಿ ಓಂ ಸಿನಿಮಾ ನೋಡಿದ್ರು ಅಂದ್ರೆ ಯೋಚಿಸಿ ಓಂ ಸಿನಿಮಾ ಕಿಚ್ಚನನ್ನೇ ಹೇಗೆ ಹುಚ್ಚಾಗಿಸಿತ್ತು. ಇನ್ನು ಒಬ್ಬ ಸಾಮಾನ್ಯ ಪ್ರೇಕ್ಷಕ ಓಂ ನೋಡಿ ಬೆರಗಾಗಿ ಹೋಗಿರದೆ ಇರ್ತಾನಾ?

500ಕ್ಕೂ ಹೆಚ್ಚು ಬಾರಿ ರೀರಿಲೀಸ್
 17 ವರ್ಷಗಳಲ್ಲಿ ಓಂ ಚಿತ್ರ 500ಕ್ಕೂ ಹೆಚ್ಚು ಬಾರಿ ರೀರಿಲೀಸಾಗಿದೆ ಅಂದ್ರೆ ಯೋಚ್ನೆ ಮಾಡಿ ಓಂ ಹವಾ ಇವತ್ತಿಗೂ ಹೆಂಗಿದೆ ಅಂತ. ಓಂ ರಿಲೀಸಾದಾಗ್ಲೇಲ್ಲ ಕೋಟಿಗಟ್ಟಲೇ ಹಣವನ್ನ ಬಾಚಿ ಬಾಚಿಕೊಟ್ಟಿದೆ.

ಓಂ ಕೊಳ್ಳೋಕೆ ಪೈಪೋಟಿ 
ಓಂ ಚಿತ್ರ ತೆರೆಗೆ ಬಂದು 17 ವರ್ಷವಾದ್ರೂ ಅದನ್ನ ಕೊಳ್ಳೋಕೆ ಇವತ್ತಿಗೂ ಪೈಪೋಟಿಯಿತ್ತು. ಈ ಹಿಂದೆ ಉದಯ ವಾಹಿನಿ 8 ಕೋಟಿಗೆ ಓಂ ಸಿನಿಮಾನ್ನ ಕೇಳಿ ರಾಜ್ ಕುಟುಂಬ ಸಿನಿಮಾವನ್ನ ಕೊಡೋಕೆ ಒಪ್ಪದೆ ಬಂದ ದಾರಿಗೆ ಸುಂಕವಿಲ್ಲ ಅಂತ ಸುಮ್ಮನಾಗಿತ್ತು.

ಚಿತ್ರ ಸೇಲಾದ ಮೊತ್ತ ಎಷ್ಟು ಗೊತ್ತಾ? 
ಓಂ ಚಿತ್ರ 17 ವರ್ಷಗಳ ನಂತ್ರ ಪ್ರತಿಷ್ಠಿತ ಉದಯ ವಾಹಿನಿಯ ತೆಕ್ಕೆಗೆ ಬಿದ್ದಿದೆ. ಚಿತ್ರಕ್ಕೆ ಉದಯವಾಹಿನಿ 10 ಕೋಟಿ ಕೊಟ್ಟು ಖರೀದಿಸಿದೆ ಅಂತ ಮೂಲಗಳಿಂದ ತಿಳಿದುಬಂದಿದೆ.

ಓಂ ಜೊತೆ ಸೇಲಾಯ್ತು ಸಿದ್ಧಾರ್ಥ 
ಓಂ ಜೊತೆ ರಾಘಣ್ಣ ಪುತ್ರ ವಿನಯ್ರಾಜ್ಕುಮಾರ್ ಅಭಿನಯದ ಮೊದಲ ಚಿತ್ರ ಸಿದ್ಧಾರ್ಥ ಕೂಡ ಸೇಲಾಗಿದೆ. ಸಿದ್ಧಾರ್ಥವನ್ನ ಒಂದೂವರೆ ಕೋಟಿ ಕೊಟ್ಟು ಉದಯ ವಾಹಿನಿ ಕೊಂಡುಕೊಂಡಿದೆ ಅಂತಿವೆ ಮೂಲಗಳು.


ಇನ್ನೂ ನಂಬೋದು ಕಷ್ಟ 
ಹೀಗೊಂದು ಮಾಹಿತಿ ನಮಗೆ ಬಂದಿದೆ ಆದ್ರೆ ಇದನ್ನ ನಾವೂ ನಂಬೋದು ಕಷ್ಟವಾಗ್ತಿದೆ. ಯಾಕಂದ್ರೆ ಈ ಹಿಂದೆ ಓಂ ಸಿನಿಮಾವನ್ನ ಅದೆಷ್ಟು ಕೇಳಿದ್ರೂ ರಾಜ್ ಕುಟುಂಬ ಮಾರಾಟ ಮಾಡಿರಲಿಲ್ಲ. ಚಿತ್ರ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿ ರಿಲೀಸಾದಾಗಲೆಲ್ಲ ಕೋಟಿ ಕೋಟಿ ಕಾಸು ಮಾಡಿಕೊಡ್ತಿತ್ತು.
Fresh Kannada

Fresh Kannada

No comments:

Post a Comment

Google+ Followers

Powered by Blogger.