Breaking News
recent

ಕಿರುತೆರೆಗೆ ಕಾಲಿಟ್ಟ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯಾ

ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯಾ ಯಾರಿಗೆ ಗೊತ್ತಿಲ್ಲ ಹೇಳಿ. ಸ್ಯಾಂಡಲ್ ವುಡ್ ಹಿಟ್ ಚಿತ್ರಗಳಾದ ಶಿವಣ್ಣ 'ಭಜರಂಗಿ', 'ವಜ್ರಕಾಯ' ಶರಣ್ 'ಆದ್ಯಕ್ಷ', ಸುದೀಪ್ 'ಮಾಣಿಕ್ಯ' ಮುಂತಾದ ಹಲವಾರು ಚಿತ್ರಗಳಿಗೆ ಸುಂದರ ಸಂಗೀತ ಸಂಯೋಜನೆ ಮಾಡಿರುವ ಅದೇ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯಾ ಇದೀಗ ಕಿರುತೆರೆಗೆ ಕಾಲಿಟ್ಟಿದ್ದಾರೆ. ಇವಾಗ ವಿಷ್ಯಾ ಏನಪ್ಪಾ ಅಂದ್ರೆ ಕನ್ನಡ ಚಿತ್ರರಂಗದ ಬ್ಯುಸಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರು ಜೀ ಕನ್ನಡ ವಾಹಿನಿ ಮಕ್ಕಳಿಗಾಗಿ ಪ್ರಸಾರ ಮಾಡುವ ಫೇಮಸ್ ರಿಯಾಲಿಟಿ ಶೋ 'ಸರಿಗಮಪ ಲಿಟ್ಲ್ ಚಾಂಪ್' ಸೀಸನ್ 10' ರಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.

['ವೆರೈಟಿ ಸಂಗೀತಗಾರ' ಅರ್ಜುನ್ ಜನ್ಯಾ ಬರ್ಥ್ ಡೇ ಸ್ಪೆಷಲ್] ಇತ್ತೀಚೆಗೆ ಬೆಳ್ಳಿತೆರೆಯ ಮಂದಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವುದು ಒಂಥರಾ ಟ್ರೆಂಡ್ ಆದಂತೆ ಇದೀಗ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಗಳು ಕಿರುತೆರೆ ಬಾಗಿಲು ತಟ್ಟಲು ಶುರು ಹಚ್ಚಿಕೊಂಡಿದ್ದಾರೆ. ಇದೀಗ ಮೂರು ಜನ ಸಂಗೀತ ದಿಗ್ಗಜರು ಈ ರಿಯಾಲಿಟಿ ಶೋ ಜಡ್ಜ್ ಮಾಡಲಿದ್ದಾರೆ. ಸರಸ್ವತಿ ಪುತ್ರರಾದ ರಾಜೇಶ್ ಕೃಷ್ಣನ್, ಹಾಗೂ ವಿಜಯ್ ಪ್ರಕಾಶ್ ಅರ್ಜನ್ ಜನ್ಯಾ ಅವರಿಗೆ ಸಾಥ್ ನೀಡಲಿದ್ದಾರೆ. [KIMA ಸಂಗೀತ ಪ್ರಶಸ್ತಿ: ನೆಚ್ಚಿನ ಕಲಾವಿದರಿಗೆ ಮತ ಹಾಕಿ] ಇದೇ ಮೊದಲ ಬಾರಿಗೆ ಕಿರುತೆರೆಗೆ ಕಾಲಿಡುತ್ತಿರುವ ಅರ್ಜುನ್ ಜನ್ಯಾ 'ಸರಿಗಮಪ ಲಿಟ್ಲ್ ಚಾಂಪ್, ಸೀಸನ್ 10' ರಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ತೀರ್ಪು ನೀಡುವ ವಿಚಾರದಲ್ಲಿ ಬಹಳಷ್ಟು ಉತ್ಸುಕರಾಗಿದ್ದಾರಂತೆ. ಖಾಸಗಿ ವಾಹಿನಿ ಜೀ ಕನ್ನಡದಲ್ಲಿ ಆಗಸ್ಟ್ 1ರಿಂದ ಪ್ರತಿ ಶನಿವಾರ ಮತ್ತು ಭಾನುವಾರ 9 ಗಂಟೆಯಿಂದ 'ಸರಿಗಮಪ ಲಿಟ್ಲ್ ಚಾಂಪ್ ಸೀಸನ್-10' ಪ್ರಸಾರವಾಗಲಿದೆ. ಒಟ್ನಲ್ಲಿ ಸಂಗೀತ ಪ್ರೀಯರು ಇನ್ನುಮುಂದೆ ಪ್ರತಿ ಶನಿವಾರ ಹಾಗೂ ಭಾನುವಾರ ಜೀ ವಾಹಿನಿಯಲ್ಲಿ ಸಂಗೀತದ ರಸದೌತಣವನ್ನು ಸವಿಯಬಹುದು.

Fresh Kannada

Fresh Kannada

No comments:

Post a Comment

Google+ Followers

Powered by Blogger.