Breaking News
recent

'ಲೊಡ್ಡೆ' ಸ್ವಲ್ಪ ಕಾಮಿಡಿ, ರೋಮಾನ್ಸ್: ಇದು ಅಜ್ಜಿ ಕಥೆ

ವಿಷ್ಣು ಫ್ಯಾನ್ ಕೋಮಲ್ ಅಭಿನಯದ 'ಲೊಡ್ಡೆ' ಚಿತ್ರ ಇಂದು (ಜುಲೈ 31) ಭರ್ಜರಿಯಾಗಿ ತೆರೆ ಕಂಡಿದ್ದು ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ. ಈಗಾಗಲೇ ಟ್ವಿಟ್ಟರ್ ನಲ್ಲಿ 'ಲೊಡ್ಡೆ' ಬಗ್ಗೆ ಮಿಶ್ರ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ. ಎಸ್.ವಿ.ಸುರೇಶ್ ಆಕ್ಷನ್-ಕಟ್ ಹೇಳಿರುವ ಸ್ಯಾಂಡಲ್ ವುಡ್ ಕಾಮಿಡಿ ನಟ ಕೋಮಲ್ ಕುಮಾರ್, ಅಕಾಂಕ್ಷ ಪುರಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ಲೊಡ್ಡೆ' ಫ್ಯಾಮಿಲಿ ಕುಳಿತು ನೋಡಬಹುದಾದ ಸಂಪೂರ್ಣ ಮನೋರಂಜನಾತ್ಮಕ ಚಿತ್ರ. ಚಿತ್ರಕ್ಕೆ ಮಂಜುನಾಥ್ ಬಂಡವಾಳ ಹಾಕಿದ್ದಾರೆ.
'ಲೊಡ್ಡೆ' ಸ್ವಲ್ಪ ಕಾಮಿಡಿ, ರೋಮಾನ್ಸ್: ಇದು ಅಜ್ಜಿ ಕಥೆ
ನಾಯಕ ಕೋಮಲ್ ಕುಮಾರ್ ತನ್ನ ಅಜ್ಜಿಯ ಕಡೆಯ ಆಸೆಯಂತೆ ಬಿರುಕು ಬಿಟ್ಟಿರುವ ಎರಡು ಕುಟುಂಬಗಳನ್ನು ಒಂದು ಮಾಡಲು ಪ್ರಯತ್ನಿಸುವುದು 'ಲೊಡ್ಡೆ' ಚಿತ್ರದ ಕಥಾಹಂದರ. ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ಅವರಿಗೆ ವಿಶೇಷ ಹಾಡೊಂದನ್ನು ಅರ್ಪಿಸಲಾಗಿದೆ. ಚಿತ್ರದ ಸುಂದರ ಹಾಡುಗಳಿಗೆ ಚರಣ್ ಬಾಂಜೋ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸದ್ಯಕ್ಕೆ 'ಲೊಡ್ಡೆ' ಚಿತ್ರದ ಬಗ್ಗೆ ಸಿನಿಪ್ರಿಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ತಮ್ಮ ಮೈಕ್ರೋ ಬ್ಲಾಗಿಂಗ್ ಸೈಟ್ ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಚಿತ್ರದ ನಾಯಕಿ ಆಕಾಂಕ್ಷ ಪುರಿ ಕೂಡ ತಮ್ಮ ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. Rating: 3.0/5 ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಲ್ಲಿ ಅಭಿನಯಿಸಿರುವ ಆಕಾಂಕ್ಷ ಪುರಿ, ಅಭಿಮಾನಿಗಳ ಕಡೆಯಿಂದ ಪಾಸಿಟಿವ್ ರೆಸ್ಪಾನ್ಸ್ ಬಂದಿರುವುದಕ್ಕೆ ಫುಲ್ ಖುಷ್ ಆಗಿಬಿಟ್ಟಿದ್ದಾರೆ. 'ಲೊಡ್ಡೆ' ಚಿತ್ರದ ಬಗ್ಗೆ ಟ್ವಿಟ್ಟರ್ ಟ್ರೆಂಡಿಂಗ್ ಆಗ್ತಾ ಇದ್ದು, ಅಭಿಮಾನಿಗಳ ಪ್ರತಿಕ್ರಿಯೆ ಹೇಗಿದೆ ನೋಡಿ..

Fresh Kannada

Fresh Kannada

No comments:

Post a Comment

Google+ Followers

Powered by Blogger.